Wednesday, January 24, 2007

ಹಳೆಯ ದಾರಿ

ಎಲ್ಲೋ ಸಾಗಬೇಕಿದ್ದ ದಾರಿ
ಮತ್ತೆಲ್ಲೋ ತಿರುವ ತೋರಿ
ಹಳೆಯ ದಾರಿಯಿಂದ ಸರಿದು
ತಿರುವ ಸುತ್ತಿ ಮುಂದುವರಿದು
ಬಹು ದೂರ ಬಂದಾಗ
ಹಿಂದೆ ತಿರುಗಿ ನೋಡಿದಾಗ
ಹಳೆಯದೆಲ್ಲ ನೆನಪಾಗಿ
ಮನಸು ಮತ್ತೆ ಭಾರವಾಗೆ
ನಗುತಲೆ ಮುಂದುವರಿವೆ
ಹಳೆಯ ದಾರಿ ಮುಂದೆ
ಮತ್ತೆ ಸಿಕ್ಕೀತೆಂದು

35 comments:

Jagali bhaagavata said...

ಯಾರ ದಾರಿಗಾಗಿ ಕಾಯುತ್ತಿರುವೆ, ಬೆಳದಿಂಗಳ ಬಾಲೆ?:-)

ಅವನು ಬರುವ ದಾರಿಯ ತುಂಬ ಮಲ್ಲಿಗೆ ಚೆಲ್ಲಿರಲಿ,
ಅವನು ಬರುವ ದಾರಿಯ ತುಂಬ ಬೆಳದಿಂಗಳು ತುಂಬಿರಲಿ...ಅಂತ ನಾನು ಹಾರೈಸುತ್ತೇನೆ.

ಭಾವಜೀವಿ... said...

ಬದುಕಿನ ದಾರಿಗಳೇ ಹಾಗೆ..ಪ್ರತಿ ಹೆಜ್ಜೆಗೂ ವಿಸ್ಮಯಗಳು, ಪ್ರತೀ ಕ್ಷಣಗಳು ಆಗಂತುಕ...!!
ತಿರುವುಗಳು ಬಂದಿದ್ದು ಗೊತ್ತೇ ಆಗುದಿಲ್ಲ....
ದಾಟಿ ಹೋದ ಮೇಲೆ ತಿಳಿಯುತ್ತೆ, ಓ ಇದೊಂದು ತಿರುವಾಗಿತ್ತೆಂದು..!! ನನ್ನ ಪ್ರಕಾರ ಹಳೆಯ ದಾರಿ ಎಂದೂ ಸಿಗುವುದಿಲ್ಲ.. ನಿಜ ಹೇಳಬೇಕೆಂದರೆ.. ತಿರುಗಿ ಹೋದರೂ ನಿನ್ನ ಹಳೆಯ ದಾರಿ ನಿನಗೆ ಗುರುತೇ ಸಿಗದಷ್ಟು ಬದಲಾಗಿರುತ್ತದೆ....!! ಹಳೆಯ ನೆನಪು ಮತ್ತು ಹೊಸ ದಾರಿಯ ಅಸ್ತಿತ್ವ..ಇವೇ ಸಾರ್ವತ್ರಿಕ!!
ಅಲ್ಲವೆ, ಮನಸ್ವಿನಿ..!!??

Phantom said...

ಅರೆ ಕ್ಷಣ ಬೇಸರ, ಮತ್ತೆ, ಆಶಾವಾದ. ಇದು ಚೆನ್ನಗಿ ಮೂಡಿಬಂದಿದೆ.

ರಾಬೆರ್ಟ್ ಫ್ರಾಶ್ಟ್ ನ, "the road not taken" ನೆನಪಿಗೆ ಬಂತು.

ಅಲ್ಲಿ, ತುಳಿದ ಹಾದಿಯೇ ಚೆನ್ನ, ಅನ್ನುತ್ತನೆ ಕವಿ, ಇಲ್ಲಿ, ತುಳಿದ ಹಾದಿ ಮತ್ತೆ ಸಿಕ್ಕೀತೆ ಎನ್ನುತ್ತಳೆ ಕವಯತ್ರಿ.

ಆದರೆ, ಭಾಗವತ ಪುರಾಣದಲ್ಲಿ ಹೇಲಿದ ಹಾಗೆ, ಮಲ್ಲಿಗೆ ಮತ್ತು ಬೆಳದಿಂಗಳು ಚೆಲ್ಲಿರುತ್ತೊ ಇಲ್ಲವೋ, ಅದನ್ನು, ಸ್ವತಹ ಕವಯತ್ರಿಯವರೆ ಹೇಳಬೇಕು ;-)

ಇಂತಿ
ಭೂತ

Chevar said...

Daariya bagge bareda kavana chennagide. Kelave dinagalalli nanna kannda blog baralide.

Anveshi said...

ಮನಸ್ವಿನಿ ಅವರೆ,

ದಾರಿ ಕಾಯುವುದು
ಈಗ ನಿಮ್ಮ "ದಾರಿ"ಯಾಗಿಬಿಟ್ಟಿದೆಯಲ್ಲ!
(ನೀವೇ ಹೇಳಿಕೊಟ್ಟದ್ದು ದಾರಿ=ಸರತಿ!)

ಭಾಗವತರ ಹಾರೈಕೆ ನನ್ನದು ಕೂಡ. ;)

ಮನಸ್ವಿನಿ said...

ಭಾಗವತ,

ಹಳೆಯ ದಾರಿ ಬಗ್ಗೆ ಹಾಡು ಬರೆದರೆ, ಯಾರ ದಾರಿ ಅಂತ ಕೇಳ್ತಿಯಲ್ಲ, ಏನು ಅಂತ ಹೇಳಲಿ....ನಿನ್ನ ಹಾರೈಕೆಗೆ ಧನ್ಯವಾದಗಳು

ಮನಸ್ವಿನಿ said...

ಭಾವಜೀವಿ
ಹಳೆಯ ದಾರಿ
ಹೇಗೊ ಮುಂದುವರೆದಿರಬೇಕು...ಮತ್ತೆ ಯಾವುದೋ ತಿರುವಿನಲ್ಲಿ ಮುಂದೆ ಸಿಕ್ಕೀತು ಅನ್ನೋದು ಆಶಾವಾದ...ಸಿಗುತ್ತೋ, ಇಲ್ಲವೋ, ಗೊತ್ತಿಲ್ಲ :)

ಮನಸ್ವಿನಿ said...

ಭೂತ,
ಧನ್ಯವಾದಗಳು , ದಾರಿ ಹೇಗಿರತ್ತೋ ಏನೋ ನಂಗೆ ಗೊತ್ತಿಲ್ಲಪ್ಪ, ಇನ್ನು ಮಲ್ಲಿಗೆ ಮತ್ತು ಬೆಳದಿಂಗಳು ವಿಷಯ ಏನೂ ಅಂತ ಹೇಳಲಿ!!ಸಿಕ್ಕಿದ್ರೆ ಒಳ್ಳೆದು, ಮಲ್ಲಿಗೆ ಇಲ್ಲ ಅಂದ್ರೆ, ಬೇರೆ ಹೂವು ಸರಿ, ಬೆಳದಿಂಗಳು ಇಲ್ಲ ಅಂದ್ರೆ ಚಂದ್ರ ಇರ್ತಾನಲ್ಲ . :)
ನಿನ್ನ ಹಾರೈಕೆಗೆ ಧನ್ಯವಾದಗಳು

ಮನಸ್ವಿನಿ said...

ಮಹೇಶರವರೇ
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು

ಮನಸ್ವಿನಿ said...

ಅನ್ವೇಷಿಗಳೆ,

ಕಳೆದು ಹೋದ ದಾರಿ ಹುಡುಕ್ತಾ ಇದ್ದೇನೆ, ದಾರಿ ಕಾಯ್ತ ಇಲ್ಲ:)
ನಿಮ್ಮ ಹಾರೈಕೆಗೆ ಧನ್ಯವಾದಗಳು

Shiv said...

ಮನಸ್ವಿನಿ,

ದಾರಿ ಯಾವಾಗಲೂ ಹಾಗೇ ಅಲ್ವೇ?
ಅದು ತನಗೆ ಬೇಕೆಂದ ಕಡೆ ಸಾಗಿಸಿಕೊಂಡು ಹೋಗುತ್ತೆ..
ಆದರೆ ದಾರಿಯಲ್ಲೆಲ್ಲೋ ಬಹುಷಃ ಹಳೆ ದಾರಿ ಸಿಗದಿದ್ದರೂ ಅದೇ ರೀತಿಯ ಹೊಸ ದಾರಿ ಸಿಗಬಹುದೇನೋ?

ಸುಂದರ ಸಾಲುಗಳು..

VENU VINOD said...

ದಾರಿ ಸಿಕ್ತಾ ಕೊನೆಗೆ?

ಚಿಕ್ಕ ಹಾಗೂ ಚೊಕ್ಕ ಸಾಲುಗಳು ಚೆನ್ನಾಗಿದ್ದವು

Jagali bhaagavata said...

ಓಹೋ, ಹಾಗದರೆ ನೀನೀಗ 'ದಾರಿ ತಪ್ಪಿದ ಮಗಳು':-))

ಮನಸ್ವಿನಿ said...

ಶಿವರವರೆ,

ಹಳೆಯ ದಾರಿ ಸಿಗುತ್ತೋ, ಇಲ್ಲವೋ, ಸಾಗ್ತ ಇರಬೇಕು. ಧನ್ಯ್ವವಾದಗಳು.

ಮನಸ್ವಿನಿ said...

ವೇಣುರವರೆ,

ದಾರಿ ಇನ್ನ ಸಿಕ್ಕಿಲ್ಲ, ಹುಡುಕ್ತಾ ಇದ್ದೇನೆ. ಧನ್ಯವಾದಗಳು. :)

ಮನಸ್ವಿನಿ said...

ಭಾಗವತ,

ಅಪ್ಪ ಅಮ್ಮ ಹಾಕಿಕೊಟ್ಟ ದಾರಿಯಲ್ಲೆ ನಡೆಯುತ್ತಿರುವ ಒಳ್ಳೆಯ ಮಗಳು. :)

ರಾಧಾಕೃಷ್ಣ ಆನೆಗುಂಡಿ. said...

ಅದಕ್ಕೆ ಹೇಳುವುದು ನಡೆದ ದಾರಿಯನ್ನು ಅವಲೋಕಿಸಿ ಆಂತಾ..ಆದರೆ ಭಾರವಾಗುವ ತನಕ ನಿಲ್ಲದಿರಿ ಆಂತಾ...
ಭಾವನೆಗಳ ಆಕ್ಷರ ಚೆನ್ನಾಗಿದೆ.

ಮನಸ್ವಿನಿ said...

ರಾಧಾಕೃಷ್ಣರವರೆ,

ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು

Shree said...

ಏನೇ ಆದ್ರೂ ನಗ್ತಾನೇ ಮು೦ದುವರಿಯೋದು ಜೀವನದ ರೀತಿ.. ನೀವೂ ನಾವೂ ಎಲ್ಲರೂ ಅಷ್ಟೆ, ಹಾಗೇನೇ ಇರಬೇಕು.... ಎಲ್ಲಾ ಕವನ ಚೆನ್ನಾಗಿವೆ.. keep it up!! it'z just like oasis, in the days of crisis for creative writing in Kannada...

ಮನಸ್ವಿನಿ said...

ಶ್ರೀ,

ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು .

ಶ್ರೀನಿಧಿ.ಡಿ.ಎಸ್ said...

ಮನಸ್ವಿನಿ,
ಮನೆಯಿಂದ ಇವತ್ತಷ್ಟೇ ಬಂದೆ, ಹಳೆಯ ದಾರಿನ ನೋಡ್ಕೊಂಡು !!:)

ಮನಸ್ವಿನಿ said...

ಶ್ರೀನಿಧಿ,

ಮನೆಯಲ್ಲಿ ಮಜಾ ಮಾಡಿ ಬಂದ್ಯಾ? ಒಳ್ಳೆಯದು.

MD said...

ಸಿಕ್ಕಿದನ್ನು ಬಿಟ್ಟು ಮುಂದೆ ಹೋದಾಗಲೆ ಅದು "ಹೊಸದು" ಮತ್ತು ಬಿಟ್ಟು ಹೋಗಿದ್ದು "ಹಳತು".
ಮನಸ್ಸು ಹೊಸತಕ್ಕಾಗಿ ಹಾತೊರೆಯಲೇಬೇಕೂ, ಬಿಟ್ಟು ಹೋದ ಹಳೆಯದಕ್ಕಾಗಿ ಮರುಗಲೇಬೇಕೂ.
ಜೀವನ, ನಿಂತ ನೀರಿನಂತೆ ನಿಂತರೆ ಎಲ್ಲಿದೆ "ಹೊಸ ದಾರಿ" ? ಎಲ್ಲಿದೆ "ಹಳೆಯ ದಾರಿ" ?

ನೀವು ನಿಮ್ಮ ಮನಸ್ಸಿನಲ್ಲಿ ಹಾದುಹೋಗುವ ಪ್ರತಿಯೊಂದನ್ನೂ ತಪ್ಪದೇ ಅಕ್ಷರಕ್ಕಿಳಿಸುತ್ತೀರಿ. ನಿಮಗಂತೂ ಲಾಭವಿದೆಯೊ ಇಲ್ಲವೋ ಗೊತ್ತಿಲ್ಲ. ಆದರೆ ನನಗಂತೂ ಹೊಟ್ಟೆಯುರಿ; ನಿಜ.
--md

ಮನಸ್ವಿನಿ said...

md,

"ಸಿಕ್ಕಿದನ್ನು ಬಿಟ್ಟು ಮುಂದೆ ಹೋದಾಗಲೆ ಅದು "ಹೊಸದು" ಮತ್ತು ಬಿಟ್ಟು ಹೋಗಿದ್ದು "ಹಳತು".
ಮನಸ್ಸು ಹೊಸತಕ್ಕಾಗಿ ಹಾತೊರೆಯಲೇಬೇಕೂ, ಬಿಟ್ಟು ಹೋದ ಹಳೆಯದಕ್ಕಾಗಿ ಮರುಗಲೇಬೇಕೂ.
ಜೀವನ, ನಿಂತ ನೀರಿನಂತೆ ನಿಂತರೆ ಎಲ್ಲಿದೆ "ಹೊಸ ದಾರಿ" ? ಎಲ್ಲಿದೆ "ಹಳೆಯ ದಾರಿ" ? " ನಿಜ

ಹೊಸತು, ಹಳತುಗಳ ನಡುವೆ ಜೀವನ ಬೆಸೆದು ಸಾಗಬೇಕು
ಹೊಟ್ಟೆಯುರಿ ಯಾಕೆ? :)

ತುಂಬಾ ಧನ್ಯವಾದಗಳು.

Sushrutha Dodderi said...

ಮನಸ್ವಿನಿ,

ಊರಿಗೆ ಹೋಗಿದ್ದೆ. ಇವತ್ತು ವಾಪಸು ಬಂದೆ. ನನ್ನ ಅತ್ತೆ ಮನೆಗೆ ಹೋಗದೇ ಮೂರು ವರುಷ ಆಗಿತ್ತು; ಪ್ರತಿ ಸಲ ಫೋನ್ ಮಾಡಿದಾಗ್ಲೂ 'ಬಂದುಹೋಗೋ, ದಾರಿ ಮರ್ತುಹೋಗ್ತು ಕೊನಿಗೇ' ಅಂತ ಹೇಳ್ತಿದ್ರು. ಈ ಸಲ ಹೋಗಿದ್ದೆ ಅತ್ತೆ ಮನೆಗೆ; ಗದ್ದೆಯ ದಾರಿ ಸಾಗು-ಸಾಗುತ್ತಿದ್ದಂತೆಯೇ ನೆನಪಾಗುತ್ತಾ ಹೋಯ್ತಲ್ಲಾ: ತಿರುವು-ಮುರುವುಗಳ ಸಮೇತ..!

Sorry, ಸುಮ್ನೇ ಹೇಳ್ದೆ. ನಿನ್ನ ಕವಿತೆಗೂ ನನ್ನ ಕತೆಗೂ ಸಂಬಂಧ ಇಲ್ಲ; ಆದರೂ ಹೇಳಬೇಕೆನಿಸಿತು. ಏಕೆಂದರೆ, ಎಲ್ಲಾ ದಾರಿಗಳೂ ಮುಂದೆ ಎಲ್ಲೋ ಒಂದು junctionನಲ್ಲಿ ಸೇರುತ್ತವಂತೆ? ಆ junction ಎಲ್ಲಿದೆ?

ಕವಿತೆ ಚೆನ್ನಾಗಿದೆ :)

ಮನಸ್ವಿನಿ said...

ಸುಶ್ರುತ,

ಊರಿಗೆ ಹೋಗಿ ಬಂದ್ಯಾ? ಸಂತೋಷ

ಹಳೆಯ ದಾರಿ ಮುಂದಿನ junction ಅಲ್ಲಿ ಸಿಗುಬಹುದೇನೊ? ಸಿಕ್ಕರೆ ಒಳ್ಳೆಯದು. Junction ಗೊತ್ತಿರೋದು ಬಹುಶಃ ಆ ಭಗವಂತನಿಗೆ ಮಾತ್ರ

bhadra said...

ಬಹಳ ಸೊಗಸಾಗಿದೆ. ಜೀವನದ ಮರ್ಮ,
ಜೀವಿತದಿಂದ ನಮ್ಮ ನಿರೀಕ್ಷೆಯನ್ನು ಚೆನ್ನಾಗಿ ನಿರೂಪಿಸಿದ್ದೀರಿ.

ಆದರೆ ನಾವಂದುಕೊಂಡಂತೆ ಏನೂ ಆಗದು, ಅಲ್ವೇ?

ಹೆಜ್ಜೆ ಇಡುವೆಡೆ ಕಾಣದು ದಾರಿ
ಇಟ್ಟ ಹೆಜ್ಜೆಯೇ ಆಗುತಿಹುದೊಂದು ಹಾದಿ
ಹಿಂದಿರುಗಿ ನೋಡಲು ಕಾಣದಂತೆ ಮಾಯ
ಮುಂದೆ ಹಾದಿ ಹೇಗಿದೆಯೆಂದು ತೋರಿಸದು ಮಾಯೆ

ಇದುವೇ ಜೀವ ಇದು ಜೀವನ

ಬರಹ ಕಾಯಕ ಹೀಗೆಯೇ ಅನವರತ ಸಾಗಲಿ

ಮನಸ್ವಿನಿ said...

ತವಿಶ್ರೀ ಸರ್,

'ಹೆಜ್ಜೆ ಇಡುವೆಡೆ ಕಾಣದು ದಾರಿ
ಇಟ್ಟ ಹೆಜ್ಜೆಯೇ ಆಗುತಿಹುದೊಂದು ಹಾದಿ
ಹಿಂದಿರುಗಿ ನೋಡಲು ಕಾಣದಂತೆ ಮಾಯ
ಮುಂದೆ ಹಾದಿ ಹೇಗಿದೆಯೆಂದು ತೋರಿಸದು ಮಾಯ '

ಸತ್ಯವಾದ ಮಾತು.
ತುಂಬಾ ಧನ್ಯವಾದಗಳು.

ರಾಧಾಕೃಷ್ಣ ಆನೆಗುಂಡಿ. said...
This comment has been removed by the author.
Shree said...

ಮನಸ್ವಿನೀ ಕವನ ಎಲ್ಲಾ ಖಾಲಿ ಆಯ್ತಾ? ಹೊಸದೇನೂ ಕಾಣಿಸ್ತಿಲ್ಲ...

Raghu said...
This comment has been removed by the author.
Raghu said...

chikkadaagii chokkavagide ee kavana :-)

ಮನಸ್ವಿನಿ said...

ಶ್ರೀ,

ಹೊಸ ಹಾಡು ಬರುತ್ತೆ. ಧನ್ಯವಾದಗಳು

ಮನಸ್ವಿನಿ said...

ರಘು,

ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು . ನಿನ್ನ ಬ್ಲಾಗಲ್ಲಿ ಏನು ಹೊಸದು ಯಾಕೆ ಹಾಕಿಲ್ಲಾ?

ರಾಧಾಕೃಷ್ಣ ಆನೆಗುಂಡಿ. said...

ಏನಾಗಿದೆ. ನಿಮಗೆ ಬರೆಯಿರಿ ಮಾರಾಯರೇ. ಹಾಗೆ ನನ್ನ ಬ್ಲಾಗಿಗೊಂದು ಬೇಟಿ ಕೊಡಿ