ಬೆಳಗಿನಂಗಳದಲ್ಲಿ
ಸಾಲು ಚುಕ್ಕಿಯನಿಟ್ಟು
ರಂಗೋಲಿ ಇಡುವಾಗ
ಮೊದಲ ಚುಕ್ಕಿಗಳಲ್ಲಿ
ಅವನ ಕಣ್ಣು ಮೂಡಿ
ನನ್ನ ನೋಡುವುದೇಕೆ?
ರೇಖೆಯಾಟದಲ್ಲಿ
ಚುಕ್ಕಿಗಳ ಮೇಲೆ
ಇನ್ನೊಂದು ಗೆರೆಯನೆಳೆಯೆ
ಅವನ ತುಟಿಯು ಮೂಡಿ
ನನ್ನ ನಗಿಸುವುದೇಕೆ?
ಇಬ್ಬನಿಯ ಈ ಹೊತ್ತಿನಲಿ
ನಾ ಬರೆದ ಚಿತ್ರದಲಿ
ಅವನ ಚಂದ್ರ ಮುಖ ಮೂಡಿ
ನನ್ನ ಮನದಾಳದಲಿ
ಬೆಳದಿಂಗಳ ತುಂಬುವುದೇಕೆ?
Subscribe to:
Post Comments (Atom)
19 comments:
ಆಹಾ!
"ಇಬ್ಬನಿಯ ಈ ಹೊತ್ತಿನಲಿ
ನಾ ಬರೆದ ಚಿತ್ರದಲಿ
ಅವನ ಚಂದ್ರ ಮುಖ ಮೂಡಿ
ನನ್ನ ಮನದಾಳದಲಿ
ಬೆಳದಿಂಗಳ ತುಂಬುವುದೇಕೆ?"
ನವಿರಾದ ಸಾಲುಗಳು, ಬೆಳಗಿನ ಹೊತ್ತಿಗೆ ಇಂತವೆರಡು ಸಾಲುಗಳನ್ನ ಓದಿದರೆ, ದಿನವಿಡೀ ಒಂದು ಖುಶಿ ಇರತ್ತೆ. ಬರೀತಾ ಇರು ಮನಸ್ವಿನೀ...
ಕವನ ಚೆನ್ನಾಗಿದೆ. ಚಕೋರನಿಗೆ ಚಂದ್ರಮನ ಚಿಂತೆ ಎಂಬಂತಿದೆ.
ಈ ಬಾನು ಈ ಚುಕ್ಕಿ
ಈ ಹೂವು ಈ ಹಕ್ಕಿ (ನೆನಪಾಗುತ್ತಿದೆ)
ಮತ್ತೊಂದು ಸುಂದರ ಪದಜೋಡಣೆಯ ಕವನಕ್ಕೆ ನನ್ನ ಟೋಪಿ ಕೆಳಗೆ (ಹ್ಯಾಟ್ಸ್ ಆಫ್)
ರಾತ್ರಿಯೆಲ್ಲಾ ಆಗಸದಲ್ಲಿ ಚುಕ್ಕಿಗಳನ್ನು ನೋಡುತ್ತಾ ಇರುತ್ತೇನೆ. ಬೆಳಗ್ಗೆ ಆಫೀಸಿಗೆ ಬಂದು ನೋಡಿದರೆ ಇಂಥಾ ಕವಿತೆ. ಆ ಆಗಸದ ಚುಕ್ಕಿಗಳನ್ನೇ ರೇಖೆಗಳಿಂದ ಕೂಡಿಸಿದಂತೆ..! ಸಾಕಲ್ಲವೇ ಜನುಮಕೆ?
ಯವ್ವಿ ಯವ್ವಿ ಯವ್ವಿ
ಬಿದ್ ಹೋದೆ! ಇನ್ನು ಏಳೊಕ್ಕೆ ಪ್ರಯತ್ನ ಪಡ್ತ ಇದ್ದಿನಿ.
ಅಮೋಘವಾದ ಕಲ್ಪನೆ. ಪೂರಕವಾದ, ಸಾಲುಗಳಿಂದ ಹಣೆದ ಕವನ.
ಎಂತ ಆತಪ್ಪ, ಈ ಕೂಸಿಗೆ,ಅವ ಯಾರೇ ;)
ಇಂತಿ
ಭೂತ
@ಶ್ರೀನಿಧಿ,
ಹಾಡನ್ನ ಮೆಚ್ಚಿಕೊಂಡದ್ದಕ್ಕೆ ಧನ್ಯವಾದಗಳು. ಖುಶಿ ಆಯ್ತು ಅಂದ್ಯಲ್ಲ, ಅಷ್ಟೇ ಸಾಕು
ತವಿಶ್ರೀ ಸರ್,
ನಿಮ್ಮ ಟೋಪಿಯ ಅಭಿನಂದನೆಗೆ ಧನ್ಯವಾದಗಳು. :)
ಸುಶ್ರುತ,
ಧನ್ಯವಾದಗಳು. " ಆ ಆಗಸದ ಚುಕ್ಕಿಗಳನ್ನೇ ರೇಖೆಗಳಿಂದ ಕೂಡಿಸಿದಂತೆ..! ಸಾಕಲ್ಲವೇ ಜನುಮಕೆ? " ದೊಡ್ಡ ಮಾತು
ಭೂತ,
ತುಂಬಾ ದೊಡ್ಡ ಮಾತು . ಧನ್ಯವಾದಗಳು.
ಕೂಸು ಆರಮಿದ್ದು....ಸದ್ಯಕ್ಕೆ ಯಾರೂ ಇಲ್ಯ :)
inmEle yaavaagaloo chukkegaLanneNisuvaaga ee kavana nenpige bartade! sakkat…sakkat aagide kaNe.
ಪ್ರಮೋದ್,
ತುಂಬಾ ಧನ್ಯವಾದಗಳು....ಯಾವ ಚುಕ್ಕಿ ಬಗ್ಗೆ ಹೇಳ್ತಾ ಇದ್ದೀಯಾ? ರಂಗೋಲಿದಾ ಅಥವಾ ಆಕಾಶದ್ದಾ? ;)
ಮನಸ್ವಿನಿ ಅವರೆ,
ನಿಮ್ಮ ಮೂರೂ ಪ್ರಶ್ನೆಗಳಿಗೆ ಉತ್ತರ ಗೊತ್ತಿಲ್ಲದಿದ್ದರೂ ಹೇಳಬಲ್ಲೆ.
ಖಂಡಿತವಾಗಿಯೂ ಈ ಸಾಲುಗಳು ವಾಸ್ತವಕ್ಕೆ ಬಹಳ ಹತ್ತಿರವಾಗಿವೆ.
"ರೇಖೆಯಾಟದಲ್ಲಿ
ಚುಕ್ಕಿಗಳ ಮೇಲೆ
ಇನ್ನೊಂದು ಗೆರೆಯನೆಳೆಯೆ
ಅವನ ತುಟಿಯು ಮೂಡಿ
ನನ್ನ ನಗಿಸುವುದೇಕೆ?"
ಚೆನ್ನಾಗಿದೆ. ಒಳ್ಳೆಯ 'ರೇಖೆ'ಯ ಆಟದಲ್ಲಿ ಮತ್ತೊಂದು ರೇಖೆ ಎಳೆದ ತಕ್ಷಣ ನೀವು ನಕ್ಕಿದ್ದೇಕೆ?
ಅನ್ವೇಷಿಗಳೆ,
ಹಾಗೆಲ್ಲ ಉತ್ತರ ಹೇಳೋಕೆ ಆಗೋಲ್ಲ. :)
ಧನ್ಯವಾದಗಳು.
ಮನಸ್ವಿನಿ, ಚೆನ್ನಾಗಿ ಬರೀತೀಯ. ಕಲ್ಪನೆ, ಪದ-ಜೋಡಣೆ, ಚಿತ್ರಣ- ಎಲ್ಲವೂ ಸುಂದರವಾಗಿವೆ. ಇನ್ನೂ ಸುಂದರವಾಗಿ ಬರೆಯಬಲ್ಲೆ ಅನ್ನುವ ಭರವಸೆ ಮೂಡಿಸಿದ್ದಿ. ಬರೆಯುತ್ತಿರು. ಬರೆಯುತ್ತಾ ಇರು. ಕನಸುಗಳನ್ನು ಎದೆಯೊಳಗೆ ಜೋಪಾನ ಮಾಡಿಡು. ಹೊರ ತೆಗೆದರೆ ಬಾಡಿ ಹೋದಾವು.
ಸುಪ್ತದೀಪ್ತಿ,
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ಇದು ಬರಿಯ ಕಲ್ಪನೆ, ಕನಸಲ್ಲ. ಆಯ್ತು, ಬರೆಯುತ್ತೇನೆ. ಪ್ರೋತ್ಸಾಹಕ್ಕೆ ಧನ್ಯವಾದಗಳು.
bahala chennagi muudi bandide.
nimma manasinalli sada beladingalu thumbirali yendu harisuthene :)
innu kavangalanna bareiri
@enigma
ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು.
from the bottom of my heart.... I just loved it... Awesome Manaswiniji...
Post a Comment