Sunday, February 11, 2007

ಸುವರ್ಣ ಕರ್ನಾಟಕಕ್ಕೆ ಬರೆಗಳು

ಸುವರ್ಣ ಕರ್ನಾಟಕಕ್ಕೆ ಬರೆಗಳು

೧. ಕನ್ನಡ ತಮಿಳಿನಷ್ಟೆ ಹಳೆಯದಾದರು ಶಾಸ್ತ್ರೀಯ ಭಾಷೆಯಲ್ಲ...
೨ ಕಾವೇರಿ ಕನ್ನಡ ನಾಡಿನಲ್ಲೆ ಹುಟ್ಟಿದರೂ ತಮಿಳುನಾಡಿಗೆ ಹೆಚ್ಚಿನ ಪಾಲು

ಬಹುಶ: ನಮಗೆ ಕನ್ನಡಕ್ಕೆ ಜಯವಾಗಲಿ ಅನ್ನುವುದೆ ಗೊತ್ತೆ ಹೊರತು, ಕೇಂದ್ರಕ್ಕೆ ಧಿಕ್ಕಾರ ಅನ್ನುವದು ಗೊತ್ತಿಲ್ಲ. ಅದಕ್ಕೆ ಈ ತರಹದ ಬರೆಗಳು ಆಗಾಗ ಆಗುತ್ತಲೆ ಇವೆ. ಹಿಂದಿಯ ಹೇರಿಕೆಯನ್ನು ವಿರೋಧಿಸಿದ್ದಕ್ಕೆ ತಮಿಳುನಾಡಿಗೆ ಶಾಸ್ತ್ರಿಯ ಭಾಷೆಯ ರಾಜ್ಯದ ಸ್ಥಾನಮಾನವೂ ಸಿಕ್ಕಿದೆ....ಕಾವೇರಿಯ ಹೆಚ್ಚಿನ ಪಾಲು ಕೂಡ.

ನಾವು ಕಾರಣರೆ?
ಹೌದು...ನಮ್ಮ ಶಾಂತ ರೂಪ, ಆಲಸ್ಯ ಎಲ್ಲ ನಮ್ಮನ್ನ ಈ ಸ್ಠಿತಿಗೆ ತಂದಿದೆ.
ಕೇಂದ್ರಕ್ಕೆ ಕನ್ನಡಿಗರ ನಿಜ ಸ್ವರೂಪದ ಪರಿಚಯವಾಗಬೇಕು. ಕೇಂದ್ರದ ಕಿವಿಗೆ ಸ್ವಲ್ಪ ಕಾದ ಎಣ್ಣೆಯನ್ನು ಬಿಡುವ ಹೊತ್ತು ಇದು.
ಕನ್ನಡಿಗರೇ, ಇನ್ನು ಎಷ್ಟು ಹೊತ್ತು ಮಲಗಿರೋಣ!!!ಎದ್ದೇಳಿ.

11 comments:

srinivas said...

ಮೊದಲಿನಿಂದ ಕುರಿಗಳಂತೆ ತಲೆ ತಗ್ಗಿಸಿ ತಗ್ಗಿಸಿ, ನಮ್ಮ ತಲೆ ತಗ್ಗಿಯೇ ಹೋಗಿದೆ. ತಲೆ ಎತ್ತಿ ನಿಲ್ಲುವ ಕಡೆಗೆ ಪ್ರಯತ್ನವನ್ನೇ ಮಾಡಿಲ್ಲ. ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕನ್ನಡ ನಾಡಿಗೆ ಬಹಳ ಕಡಿಮೆ ಸೌಲಭ್ಯಗಳು ದೊರಕುತ್ತಿದೆ. ಇದಕ್ಕಾಗಿ ಹೋರಾಟ ನಡೆಯಲೇ ಬೇಕು. ಕನ್ನಡಕ್ಕೆ ರಾಷ್ಟ್ರೀಯ ಭಾಷೆ, ಸ್ಥಾನ ದೊರಕಿಸಲು ಎಲ್ಲ ರೀತಿಯ ಸಾಧ್ಯತೆಗಳಿವೆ. ಇದರ ಬಗ್ಗೆ ನನ್ನ ಚಿಂತನೆಯನ್ನು ಇಲ್ಲಿ ನೋಡಬಹುದು.

http://venkatesha.wordpress.com/2006/11/01/

ನಮ್ಮ ರಾಜಕಾರಣಿಗಳು ಇಲ್ಲಿಯವರೆವಿಗೂ ಏನನ್ನೂ ಮಾಡಿಲ್ಲ. ಕನ್ನಡದ ಬಗ್ಗೆ ನಿಜವಾಗಿಯೂ ಕಳಕಳಿಯಿರುವ ಜನರೆಲ್ಲರೂ ಒಟ್ಟಾಗಿ ಸೇರಿದರೆ ಇದನ್ನು ಮಾಡಬಹುದು. ಎಲ್ಲರೂ ನಿಮ್ಮಂತೆಯೇ ಚಿಂತಿಸಿದರೆ ಯಾವುದೂ ಕಷ್ಟವಿಲ್ಲ. ಬನ್ನಿ ನಾವೆಲ್ಲರೂ ಕೈ ಜೋಡಿಸೋಣ. ಕನ್ನಡ ನಾಡನ್ನು ಉದ್ಧರಿಸೋಣ.

Pramod P T said...

ಸುರೇಖಾ..ನಿನ್ನ ವಿಚಾರ ಸ್ಪಷ್ಟ!
ಎದ್ದಿದ್ದೂ ಆಗಿದೆ, ಎಣ್ಣೆ ಕಾಯಿಸಿದ್ದೂ ಆಗಿದೆ. ಕಿವಿಯಲ್ಲಿ ಸುರಿಯುವದೊಂದೇ ಬಾಕಿ. ಆದ್ರೆ ಈ ಕೆಲಸ ಕೇವಲ ರೈತರಿಗೆ ಮಾತ್ರ ಸೀಮಿತವಾಗಿರದೆ ನಾವೆಲ್ಲರೂ ಕೈಜೋಡಿಸಿದರೆ ಮಾತ್ರ ಸಾಧ್ಯ!

ತುಂಬಾ ದಿನ ಆಯ್ತಲ್ಲ ನಿನ್ blog-ನಲ್ಲಿ ಹೊಸತನ್ನು ಕಾಣದೆ.

ಅಸತ್ಯ ಅನ್ವೇಷಿ said...

ಕನ್ನಡದ ಬಗ್ಗೆ ತೀವ್ರ "ಕಳಕಳಿ" ವ್ಯಕ್ತಪಡಿಸೋ ರಾಜಕಾರಣಿಗಳು ಸಂಸತ್ತಿನಲ್ಲಿ ತೂಕಡಿಸ್ತಾ ಇರೋವಾಗ ಇತ್ತಕಡೆಯಿಂದ ಕಾಲಬುಡಕ್ಕೇ ನೀರು ಬಂದರೂ ಗೊತ್ತಾಗಲ್ಲ.

ನೀವಂದಿದ್ದು ಸರಿ. ಅಕ್ಷರಗಳ ಕೊರತೆ ಇರೋ ತಮಿಳಿಗೇ ಶಾಸ್ತ್ಪೀಯ ಭಾಷೆ ಮಾನ ಕೊಟ್ಟಿದ್ದೇಕೆ ಎಂಬುದು ಇನ್ನೂ ಅರ್ಥವಾಗದ ಸಂಗತಿ.

Seeji said...

I came back to this blog after a long gap and pleased to read two masterpieces. "haleya daari" matthu 'Chukkigala naduve'.

I am surprised to read your present post.

Your first point about conferring classical language status to Tamil made me to comment. In my opinion Tamil deserved the classical language status because of its unmatched antiquity and strict conservative nature. We can fight for the same status for Kannada, but your approach is not appropriate. Just because Tamil got the status, do you think even kannada should get it? Looks like a child's cry. "My bro got it and I need it too….." Kannada failed here because it had no strong evidence other than 'Vaddaradhane' (which is centuries younger compared to Tamil's Sangam anthologies) to show its antiquity. Also Kannada has a strong influence from other languages like Sanskrit.

Your second point regarding Cauvery tribunal verdict. Though it looks like a serious tilt towards TN, it is not so. Compared to the interim verdict, KA has got a better pie in final verdict. OK, still if you think there is injustice, the proper approach should be to go to the courts with relevant statistics. But What did we do?. A 'bandh', which costed more than 500 crores. I was personally hit by this strike as I was on a vacation in North Canara. I'm wondering if your '….kendrada kivige swalpa kada enneyannu biduva hotthu…' is the same or something more serious.

I feel we should look at the facts before getting emotional on issues.

Seeji.

Mahesh said...

very good write up about karnataka. Medias are doing their level best. But what about politicians??????

Phantom said...

ನಿನ್ನ ಕಳಕಳಿಯನ್ನು ಚೆನ್ನಗಿ ವ್ಯಕ್ತಪಡಿಸಿದ್ದಿಯೇ.

ಇನ್ನು ಸೀಜಿ ಹೇಳಿದ ವಿಷಯಗಳ ಬಗ್ಗೆ.

೧. ಕನ್ನಡಕ್ಕೆ ಶಾಸ್ತ್ರಿಯ ಭಾಷೆ ಏಕೆ ಕೊಡಬೇಕು?
ಇದಕ್ಕೆ ಉತ್ತರವನ್ನು, http://gharjane.blogspot.com

ನಲ್ಲಿ ಹಾಕುವೆ.

೨. ಬಂದ್ ನಿಂದ ೫೦೦ ಕೋಟೀ ನಷ್ಟ. ಕಾವೇರಿ ನದಿ ನೀರು ಹಂಚಿಕೆಯಲ್ಲಿ, ಕರ್ನಾಟಕಕ್ಕೆ ಅನಾದಿ ಕಾಲದಿಂದಲು ಅನ್ಯಾಯ ಆಗುತ್ತಲೆ ಬಂದಿದೆ. ಈ ನಿಟ್ಟಿನಲ್ಲಿ, ಒಂದು ಬಂದ್ ನಡೆದದ್ದು ಒಳಿತೆ. ಕರ್ನಾಟಕಕ್ಕೆ ಅನ್ಯಾಯ ಹೇಗೆ ಎಷ್ಟು ಎಂಬುದನ್ನು ಇಲ್ಲಿ http://gharjane.blogspot.com
ಮನಗಾಣಿರಿ.

ಒಂದು ವಿಚಾರ, ಈ ಬಂದ್ನಿಂದ,ಇಡೀ ಕರ್ನಾಟಕ ಮೊದಲ ಬಾರಿಗೆ ಒಗ್ಗುಡಿತು.ಇದೊಂದೆ ಸಾಕು, ಕರ್ನಾಟಕಕ್ಕೆ, ೫೦೦ ಕೋಟಿ ನಷ್ಟ ತುಂಬಲು.

ಇಂತಿ
ಭೂತಶ್ರೇಷ್ಟ

Seeji said...

I am amazed to note how people think? How can one defend a ‘bandh’ which caused so much suffering to common people? I will give you a live example. We have this man called ‘Swami’ who works as a coolie in the market area of my native place. He comes to work in our garden and house once in a while. He is a type who has to earn and eat for that day. And the whole family of 6 depends on him. I met him after two days of bandh. He had all the chosen bad words for the ‘kannada rakshana vedike’ of our native who made it sure everyone closed shutters on that day. His anger was evident and understandable. Reportedly he could get a cup of milk for his younger kid (which he borrowed from next door) and the rest didn’t take dinner that day. There are millions of people like him in Karnataka and few more millions depend on them. I can never support a ‘bandh’ which makes millions sleep in an empty stomach.

I don’t think those who sit in some corner of the world and shout about kannada, cauvery and similar stuff can ever understand the plea of a common man in some remote slum of Karnataka. Because after shouting all that, they have a huge pay packet to go into a classy restaurant and relax.

One of your observations is curious!!!! “The whole Karnataka united over the bandh and it is worth all the loss”. When Dr Rajkumar died, the same Karnataka united and worked out a self imposed bandh, causing a havoc and destruction of public property. Such a shameful adieu for a great soul. Now do you say his death was worth it coz the whole Karnataka (at least a major fraction) got united. I wont support this either.

I think we should stop this discussion here. This blogger ‘manaswini’ may shoe us away if we keep making her comment box dirty by all our rants.

ಮನಸ್ವಿನಿ said...

ಎಲ್ಲರಿಗೂ ಪ್ರತಿಕ್ರಿಯೆಗೆ ಧನ್ಯವಾದಗಳು.

ಸೀಜಿಯವರೆ,
ಹಾಡುಗಳನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು
ನನ್ನ ಈ ಬ್ಲಾಗಿನ ಸಾರಾಂಶ

೧. ತಮಿಳಿಗೆ ಶಾಸ್ತ್ರೀಯ ಭಾಷಾಸ್ಥಾನಮಾನ ಸಿಕ್ಕಿದಕ್ಕೆ ಕನ್ನಡಕ್ಕೆ ಸಿಗಬೇಕು ಎಂದು ನಾನು ಹೇಳಿಲ್ಲ
ತಮಿಳಿನಷ್ಟೆ ಕನ್ನಡ ಹಳೆಯದಾದರೂ,ಕೇಂದ್ರದ ಕಣ್ಣಿಗೆ ತಮಿಳಷ್ಟೆ ಹೇಗೆ ಶಾಸ್ತ್ರೀಯವಾಯಿತು?
ನಿಮ್ಮ ಉದಾಹರಣೆಯನ್ನೆ ತೆಗೆದುಕೊಳ್ಳೊಣ

ನೀವು ಸಮರ್ಥ ಹಾಗೂ ಹಕ್ಕುದಾರರಾಗಿದ್ದು, ಬೇರವರಿಗಷ್ಟೆ ಎಲ್ಲ ಲಾಭವಾಗಿದ್ದರೆ, ಅದನ್ನು ವಿರೋಧಿಸುವ ಅಧಿಕಾರ ನಿಮಗಿದೆ.
ಸ್ವಾಭಿಮಾನಿಯಾದರೆ ಖಂಡಿತ ವಿರೋಧಿಸುತ್ತೀರಿ....ಏನಂತೀರಾ?

ಅವರಿಗೆ ಸಿಕ್ಕಿದೆ, ಅದಕ್ಕಾಗಿ ನನಗೂ ಸಿಗಬೇಕು ಅನ್ನುವ ಸಂಕುಚಿತ ಮನೋಭಾವ ಕನ್ನಡಿಗರಿಗಿದ್ದರೆ, ಬೆಂಗಳೂರಿಗೆ ಈಗಿರುವ ಪರಿಸ್ಥಿತಿ ಬರುತ್ತಿರಲಿಲ್ಲ.
ಸಹನೆಯಿಂದ ಎಲ್ಲ ನೋಡಿದ್ದಾಯಿತು. ಪದೇ ಪದೇ ಮೋಸವಾಗುತ್ತಿರುವುದನ್ನ ನೋಡಿ ಸಹಿಸಿಕೊಳ್ಳುವುದೂ ಒಂದು ದುರ್ಬಲತೆ...ನಾವೂ ದುರ್ಬಲರಲ್ಲ

೨. ಕಾವೇರಿ ಕನ್ನಡ ನಾಡಿನ ನದಿ.
ಯಾವ ರಾಜ್ಯದವರು ,ತಮ್ಮ ರಾಜ್ಯದ ನದಿಯ ನೀರಿನ ಹೆಚ್ಚು ಪಾಲನ್ನು ಬೇರೆಯವರಿಗೆ ಕೊಟ್ಟಾರು?
ಹಾಗೇನಾದರೊ ಬೇರ ರಾಜ್ಯದವರಿಗೂ ಈ ರೀತಿಯ ಅನುಮತಿ ಕೇಂದ್ರ ಸರ್ಕಾರ ಘೋಷಿಸಿದ್ದರೆ ಪರಿಣಾಮ ಎನಾಗುತ್ತಿತ್ತು.

ಮನೆ ಹೊತ್ತಿ ಸುಡುತ್ತಿದ್ದರೂ ಸುಮ್ಮನೆ ಮಲಗಿರುವ ಕನ್ನಡಿಗರಿಗಾಗಿ ಬರೆದ ಬ್ಲಾಗ್ ಇದು.

Ananda Billava said...

seejiyavara barahadalli nijavaglu utthamavada amsha ide.... nanu manaswiniyavara blog nodtha avaru baredadanna nodi mechikonde.. comment hakalu bandavanu seejiyavara comment nodide.. nijavaglu avare sari annisithu... adre adanna namma acha kannadalli bareyuvadanna bittu english upayogisiddu nijavaglalu durasristakara...

Anonymous said...

Tamilu mattu Kannada iveradoo sahaa moola dravida bhasheya modala margaantaragalu. Samskrutadede varagida Kannadada dikku bereyayitu. Vaddaaraadhanege adara samaya tilisabahudu. Changa (Sangha) sahityakke praacheenateyannu koduva amshagalu tarkabddhavaagilla. (BGL Swamy yavara pustakagalannu odi).

Tanjaavoorininda Ghurjara pratihaara, Maalava, Narmadeya varege beleda Kannada saamraajyakke itare bhashegala sogadu tagaliruvudu kannadada shaastreeyatege adarida tappendu eke bhaavisabeku? Indigoo uttara karnatakada aadu bhaasheyalli uttama kannada nudimuttugalive; haageye maraathi, urdugaloo sammilithavaagive. Kolarakke banni. Illi Kannadada "baala" Telugina "toke"yaaguttade, Banive athava Mede "Vaame" yaaguttade. Idu saamaanyara baravanigeyalloo smmilitavaagide. Idarinda bhaasheya shaastreeyategenoo tondareyilla.

Political will was, is and will be!!! lacking as there is no bhashaa durabhimaana.

Ranjaneya_Bhandara said...

really wonderful .But the irony is that I am writing this in kannada .