ನನ್ನಾಚೆ ಒಂದು ಜಗವಿದೆ
ನನ್ನೊಳು ಮತ್ತೊಂದು ಲೋಕ
ಹೊರಗೊಂದು ತಾಳ
ಒಳಗೊಂದು ತಾಳ, ಮೇಳವಿಲ್ಲ!
ಹೊರಗೆ ಉದಯ
ಒಳಗೆ ಅಸ್ತ
ಹೊರಗಿನ ಬೆಳಕಿನೊಡನೆ ಬೆಳಗಲೊ
ಒಳಗೆ ಬೆಳಕನ್ನು ಅರಸಲೊ
ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ
ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ
ಹೊರಗೆ ತುಂತುರಿನ ತನನ
ಒಳಗೆ ಬತ್ತಿದೆ ಮನ
ಹನಿಯೊಡನೆ ಹನಿಯಲೊ
ಮರುಭೂಮಿಯಾಗಲೊ
ಮನವ ಬಿಟ್ಟು ಲೋಕವಿಲ್ಲ
ಲೋಕದಲ್ಲಿ ಮನವಿಲ್ಲ
ಎತ್ತ ಕಿವಿಗೊಡಲಿ?
ಎಲ್ಲಿ ಮನವಿಡಲಿ!
Subscribe to:
Post Comments (Atom)
10 comments:
ದ್ವಂದ್ವವನ್ನು ಬಹಳ ಚೆನ್ನಾಗಿ ನಿರೂಪಿಸಿದ್ದೀರಿ.
ಈ ಪದಗಳ ಜೋಡಣೆ ಬಗ್ಗೆ ಮಾತೇ ಇಲ್ಲ.
ಈ ಪದಗಳು ನನ್ನ ಮನವನ್ನು ಬಹಳವಾಗಿ ಕಲಿಕಿತು.
ನನ್ನಾಚೆ ಒಂದು ಜಗವಿದೆ
ನನ್ನೊಳು ಮತ್ತೊಂದು ಲೋಕ
ಹೊರಗೊಂದು ತಾಳ
ಒಳಗೊಂದು ತಾಳ, ಮೇಳವಿಲ್ಲ!
ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ
ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ
ಬಳ್ಳಿಯೊಡನೆ ಮಾತ್ರ ಜಾರಬಾರದು. ಮೊಗ್ಗಿನಂತೆ ಬಿರಿದು ಲೋಕಕ್ಕೆ ಸುಗಂಧ ಪಸರಿಸಬೇಕು.
ವಾಹ್ ಎಂತಹ ಸುಂದರ ಕವನ. ಇದನ್ನು ಪ್ರಕಟಣೆಗೆ ಕಳುಹಿಸಿ.
ಸೊಗಸಾದ ಕವನ. ಮನಸಿನ ದ್ವಂದ್ವವನ್ನು ಉತ್ತಮವಾಗಿ ಬಿಂಬಿಸಿದೆ.
ಹೊರಗೆ ಮೊಗ್ಗು ಬಿರಿಯುತ್ತಿದೆ
ಒಳಗೆ ಬಳ್ಳಿ ಮುರಿಯುತ್ತಿದೆ
ಹೂವಾಗಿ ಅರಳಲೊ
ಬಳ್ಳಿಯೊಡನೆ ಜಾರಲೊ
ಈ ಸಾಲುಗಳಂತು, ಅಬ್ಬ ಹೇಳತೀರದು.
ಅನುಭವಿಸಿ ಬರೆದೆಯೋ?
ಬರೆದು ಅನುಭವಿಸಿದೆಯೋ?
ಭೂತ
ಧನ್ಯವಾದಗಳು ತವಿಶ್ರೀ, ಭೂತರಾಯರಿಗೆ
ಅನುಭವದ ಮಾತುಗಳಲ್ಲ. ಸುಮ್ಮನೆ ಬರೆದೆ ಅಷ್ಟೆ.
ಇಂತಹ ಅನುಭವ ಆಗದಿದ್ದರೆ ಒಳಿತು :)
ಚೆನ್ನಾಗಿದೆ ನಿಮ್ಮ ಕವನ. ಇದನ್ನು ಓದಿ ನನಗೆ ಡಿ.ವಿ.ಜಿಯ ಒಂದು ಕಗ್ಗದ ಪದ್ಯ ನೆನಪಿಗೆ ಬರುತ್ತಿದೆ.
ಹೊರಗೆ ಲೋಕಾಸಕ್ತಿ
ಒಳಗೆ ಸಕಲ ವಿರಕ್ತಿ.
ಹೊರಗೆ ಕಾರ್ಯಧ್ಯಾನ,
ಒಳಗೆ ಅದರ ಉದಾಸೀನ.
ಹೊರಗೆ ಸಂಸಾರ ಭಾರ
ಒಳಗೆ ಅದರ ತತ್ಸಾರ.
.. ಇದೇ ವರಸೂತ್ರವೆಂದು ಹೇಳುತ್ತಾರೆ.
ಧನ್ಯವಾದಗಳು ಪವ್ವಿಯವರಿಗೆ.
ನಾನಿನ್ನೂ ಕಗ್ಗ ಓದಿಲ್ಲ. ಖಂಡಿತ ಓದುತ್ತೇನೆ.
ಎಷ್ಟು ಚೆನ್ನಾಗಿದೆ ಕವನ? ಈ ಹನ್ನೊಂದರ ರಾತ್ರಿಯಲ್ಲಿ ಓದುತ್ತಿದ್ದರೆ ವಿಷಾದ ಮನ ತುಂಬುತ್ತಿದೆ. ಆದರೂ ಒಳಗೆ ಬೆಳಕು ಇದೆ .ಅದನ್ನು ಅರಸಬೇಕು ಎಂಬ ಭಾವನೆಯಿಂದ ನಾನೊಂದು ಕವನ ಬರೆದಿದ್ದ್ದೇನೆ. ತುಷಾರದಲ್ಲಿ ಪ್ರಕಟವಾಗಿತ್ತದು. ಆದರು ನಿಮ್ಮ ಕವನ ನನ್ನ ಮನ ಕಲಕಿತು.ತುಂಬಾ ಹೊತ್ತು ಕಾಡುತ್ತಲೇ ಇರುತ್ತದೆ.
ಸರಸ್ವತಿಯವರಿಗೆ ಧನ್ಯವಾದಗಳು
ಏನಾದ್ರು ಬರೆಯೋಣ ಅಂದ್ರೆ ತೊಚ್ತ ಇಲ್ಲ..ಮೂಕವಿಸ್ಮಿತನಾಗಿದ್ದೇನೆ....ಅದ್ಭುತವಾಗಿದೆ ಪದಗಳ ಆಯ್ಕೆ,ಹೇಳಿರುವ ಸರಳತೆ....
ಧನ್ಯವಾದಗಳು ಜಯಂತ್
manaswiniji.....ADBUTHA....!!
Post a Comment