ತರುವಾಗಿ, ಸಿರಿಯಾಗಿ ಶ್ರೀಗಂಧವಾಗಿ
ನೀರಾಗಿ, ಬಾಳಾಗಿ ಕಾವೇರಿಯಾಗಿ
ಗಿರಿಯಾಗಿ,ಹಿರಿದಾಗಿ ಸಹ್ಯಾದ್ರಿಯಾಗಿ
ಹಸಿರಾಗಿ, ಉಸಿರಾಗಿ ಮಲೆನಾಡಾಗಿ
ಪಂಪ , ರನ್ನರ ಕಾವ್ಯಾಮೃತವಾಗಿ
ದಾಸ , ಶರಣರ ನುಡಿಮುತ್ತುಗಳಾಗಿ
ಶಿಲೆಯಲ್ಲಿ ಕಲೆಯಾಗಿ ಸೌಂದರ್ಯವಾಗಿ
ಕೆಚ್ಚೆದೆಯ ವೀರರ ಇತಿಹಾಸವಾಗಿ
ಹೊನ್ನಿನ ಮಣ್ಣಾಗಿ ಕರುನಾಡಾಗಿ
ನಡೆಯಾಗಿ, ನುಡಿಯಾಗಿ ಕನ್ನಡವಾಗಿ
ಮೆರೆದಿಹಳು ಸಿರಿದೇವಿ ಭುವನೇಶ್ವರಿಯಾಗಿ
Subscribe to:
Post Comments (Atom)
5 comments:
ಸುಂದರವಾದ ಕವನ. ನಮ್ಮ ನಾಡು ಯಾವ ರೀತಿ ಇದೆ ಎಂದು ತಿಳಿಯುತ್ತದೆ.
ಮರ, ನೀರು, ಬೆಟ್ಟ, ಹಸಿರು, ಕವಿಗಳು, ದಾಸರು, ಶಿಲೆ, ವೀರ ಮರಣ ಹೊಂದಿದವರು ಎಲ್ಲವನ್ನು, ನುಡಿಗೆ ಕೊಂಡಿಹಾಕುವ ಕಾವ್ಯ ಚೆಂದವಾಗಿ ಬಂದಿದೆ.
ಭೂತ ಸಂತೃಪ್ತಿಯಾಯಿತು.
ಸುಉಉಉಉಉಉಉಉಉಪರ್ ಕವನ ತಾಯಿ. ಕನ್ನಡಮ್ಮನನ್ನು ಬಹಳ ಚೆನ್ನಾಗಿ ಹೊಗಳಿದ್ದೀರಿ. ನಿಮ್ಮಂತಹ ಮಕ್ಕಳು ಕನ್ನಡಮ್ಮನಿಗೆ ಇರುವುದರಿಂದಲೇ ಇನ್ನೂ ತಲೆ ಎತ್ತಿ ನಿಂತಿರುವಳು.
ಈ ಕವನವನ್ನು ನನ್ನಲ್ಲಿ ಉಳಿಸಿಕೊಂಡಿರುವೆ.
ಧನ್ಯವಾದಗಳು ತವಿಶ್ರೀ, ಭೂತರಾಯರಿಗೆ
ಎಷ್ಟೊಂದು ಚೆನ್ನಾದ ಕವನಗಳು...
ಈ ಸೈಟು ನನ್ನ ಕಣ್ಣಿಗೆ ಬೀಳುವಾಗ ತಡವಾಗಿದ್ದೇಕೆ?
ಅದಿರಲಿ,
ಮನಸ್ವಿನಿ ಹೆಸರು ತುಂಬಾ ಚೆನ್ನಾಗಿದೆ. ಕಾವ್ಯನಾಮವೋ, ನಿಜನಾಮವೋ?
thumba chennaagide.
Post a Comment