ಏಷ್ಟು ಸಂತೋಷ ಆಗ್ತಾ ಇದೆ ಕನ್ನಡದಲ್ಲಿ ಬರೆಯುವುದಕ್ಕೆ!ಆಹಾಹ
ಕವನ - ಬಂಧನದಿಂ
ಬಿಡಿಸುವೆವು ಬಿಡಿಸುವೆವು ಬಂಧನದಿಂ ನಿನ್ನ
ತೊಡಿಸುವೆವು ತೊಡಿಸುವೆವು ಸ್ವಾತಂತ್ರ್ಯ ಚಿನ್ನ
ಉಸಿರುಂಟು, ಛಲವುಂಟು, ಮುನ್ನುಗ್ಗುವ ಹಠವುಂಟು
ಎಲ್ಲವನೂ ಮೀರೋ ತಾಯಿ ನಿನ್ನೊಲವುಂಟು
ಬವಣೆಯೋ,ದುಗುಡವೋ, ಕಣ್ಣೀರೋ, ಕೆನ್ನೀರೋ
ನಿನ್ನ ಒಲವಲ್ಲಿ ಕಂಡೆವು ಪನ್ನೀರು
ಬಗ್ಗಲಾರೆವು ಇನ್ನು, ನುಗ್ಗಿ ನೆಗೆಯಿರೆಲ್ಲ
ಬಗ್ಗಿ ಬರುವುದು ಗೆಲುವು ನಮಗೆಲ್ಲ
ಅದೋ ನಿಂತಿಹುದು , ಅಲ್ಲೊಮ್ಮೆ ನೋಡಿರೈ
ತಬ್ಬಿ ಮುದ್ದಾಡುವ ಸ್ವಾತಂತ್ರ್ಯವ ಬನ್ನಿರೈ
Subscribe to:
Post Comments (Atom)
6 comments:
ಆಹಾ! ಕನ್ನಡದಲ್ಲಿ ಬರೆದ್ರೆ ಅದೆಷ್ಟು ಚೆನ್ನಾಗಿ ಕಾಣುತ್ತದೆ. ಹೇಗೆ ಹಾಕಿದ್ರಿ? ಬರಹ ಇನ್ಸ್ಟಾಲ್ ಮಾಡೋಕ್ಕಾಗಲ್ಲ ಅಂತಿದ್ರಲ್ಲ. ನೋಡಿದ್ರಾ ಶ್ರೀಮಾತಾ ಕೂಡಾ ನಿಮ್ಮ ಬ್ಲಾಗನ್ನು ಮೆಚ್ಚಿಕೊಂಡಿದ್ದಾರೆ. ಜೊತೆಗೆ ಕ್ರಿಸ್ ಅವರು ಕೂಡಾ. ಅವರ ಪರಿಚಯ ನನಗಿನ್ನೂ ಆಗಿಲ್ಲ.
ಒಳ್ಳೆಯದಾಗಲಿ.
ಓ... ನೀವು ಕೂಡ ಕನ್ನಡಕ ಹಾಕಿದ್ರಾ?
ಬರೀರಿ
ಬರೀತಾ ಇರಿ
ಓದಿರಿ
ಓದುತ್ತಾ ಇರಿ
ಅದನ್ನು ಕೊರೀರಿ, ಕೊರೀತಾ ಇರಿ
ಒದೀರಿ, ಒದೀತಾ ಇರಿ ಅಂತ ತಪ್ಪಾಗಿ ತಿಳಿಯದಿರಿ
ಸಂತಸದ ಕ್ಷಾಣಗಳು ಕಮರದಿರಲಿ,
ಕನ್ನಡಾಕ್ಷರಗಳ ಸುಗ್ಗಿ ಹಿಗ್ಗುತಲಿರಲಿ :)
ವಹ್, ಚೆಲುವಾದ ಕವನ, ನಾವುಗಳು ಅನುಭವಿಸುತ್ತಿರುವ ದುಖಕ್ಕೆ ಕನ್ನಡಿ ಹಿಡಿದಂತಿದೆ. ನಾವುಗಳು ಕಾಣುತ್ತಿರುವ ಕನಸಿಗೆ ಸ್ಪೂರ್ತಿಯಂತಿದೆ.
ಭೂತ
ಭವಣೆ ಅಂತಿದೆ. ಅದು ಬವಣೆ ಅಂತಾಗಬೇಕಲ್ಲವೇ?
ಕನ್ನೀರೋ ಅಥವಾ ಕೆನ್ನೀರೋ. ಇವೆರಡನ್ನು ಬಿಟ್ಟರೆ ಪದ ಜೋಡಣೆ ಬಹಳ ಚೆನ್ನಾಗಿದೆ. ಅಮ್ಮನಿಗಿನ್ನೊಂದು ಚಂದದ ಅರ್ಪಣೆ.
ತುಂಬಾ ಧನ್ಯವಾದಗಳು ತವಿಶ್ರೀ ,ರಮೇಶ
ಕೆನ್ನೀರು = ರಕ್ತ ಅಲ್ಲವೇ!
ಅನ್ವೇಷಿಗಳೆ,
ಆಯ್ತು.
Post a Comment