ನನ್ನ ಕೈ ಗೆರೆಗಳ ನೋಡಿ
ನೀನು ಬೆರಳುಗಳ ಲೆಕ್ಕಾಚಾರ
ಮಾಡುವಾಗೆಲ್ಲ,ನಿನ್ನ ಕಣ್ಣುಗಳಲ್ಲಿ
ನೂರು ಕಥೆಗಳು.
ಅದೇನು ಹುಡುಕುತ್ತೀಯ?
ನನಗೂ ಹೇಳು
ಇಬ್ಬರೂ ಸೇರಿ
ಹುಡುಕಿ ಹಿಡಿಯೋಣ
ನಾನು ತುಟಿಯೆರಡು ಮಾಡಿದೊಡನೆ
'ಶ್' ಎನ್ನುತ್ತೀಯಲ್ಲ
ನಿನ್ನ ಈ ಪರಿಯ ಗಣಿತಕ್ಕೆ
ನಾನೇನು ಮಾಡಬೇಕು?
ಕೈ ಹಿಂದೆಳೆದುಕೊಂಡರೆ
ಜಮದಗ್ನಿಯ ಕೋಪ ನಿನದು
ಅಬ್ಬಬ್ಬ ಯಾರಿಗೆ ಬೇಕು
ಸುಮ್ಮನಿದ್ದುಬಿಡುತ್ತೇನೆ
ಹೇಳಿ ಬಿಡಬೇಕು ಅನ್ನಿಸುತ್ತಿದೆ
ಮೂರು ತಿಂಗಳುಗಳಲ್ಲಿ
ಹೊಸ ಗೆರೆ ಮೂಡುವುದಿಲ್ಲ
ಅದೇನು ಬೇಕೋ ನೀನೆ ಬರೆದುಬಿಡು
Subscribe to:
Post Comments (Atom)
18 comments:
ಮನಸ್ವಿನಿ...
ಎಲ್ಲ ಸಾಲುಗಳೂ ಚಂದ.
"ಹೇಳಿ ಬಿಡಬೇಕು ಅನ್ನಿಸುತ್ತಿದೆ
ಮೂರು ತಿಂಗಳುಗಳಲ್ಲಿ
ಹೊಸ ಗೆರೆ ಮೂಡುವುದಿಲ್ಲ
ಅದೇನು ಬೇಕೋ ನೀನೆ ಬರೆದುಬಿಡು" ಈ ಸಾಲುಗಳು ಇನ್ನಷ್ಟು ಇಷ್ಟವಾದ್ವು.
ನೈಚ್! ಚಂದ ಕವನ.
ಮನಸ್ವಿನಿಯವರೆ ತುಂಬ ಚಂದದ ಕವಿತೆ.
ಸರಸ ಭಾವ ನವಿರಾಗಿ ಮೂಡಿ ಬಂದಿದೆ.
'ಹೇಳಿ ಬಿಡಬೇಕು ಅನ್ನಿಸುತ್ತಿದೆ
ಮೂರು ತಿಂಗಳುಗಳಲ್ಲಿ
ಹೊಸ ಗೆರೆ ಮೂಡುವುದಿಲ್ಲ
ಅದೇನು ಬೇಕೋ ನೀನೆ ಬರೆದುಬಿಡು' ಇದು;
'ಹೇಳಿ ಬಿಡಬೇಕು ಅನ್ನಿಸುತ್ತಿದೆ
ಮೂರು ತಿಂಗಳುಗಳಲ್ಲಿ ಸುಮ್ಮನೆ
ಹೊಸ ಗೆರೆ ಮೂಡುವುದಿಲ್ಲ
ಅದೇನು ಬೇಕೋ ನೀನೆ ಬರೆದುಬಿಡು ' ಎಂದಾದರೆ?
ಮುದ್ದಾಗಿದೆ:)
ಸರಳ, ಸುಂದರ, ಆಹ್ಲಾದಕರ!
ಕವನ ತುಂಬಾ ಇಷ್ಟವಾಯಿತು :-)
ನನ್ನ ಕೈ ಗೆರೆಗಳ ನೋಡಿ
ನೀನು ಬೆರಳುಗಳ ಲೆಕ್ಕಾಚಾರ
ಮಾಡುವಾಗೆಲ್ಲ,ನಿನ್ನ ಕಣ್ಣುಗಳಲ್ಲಿ
ನೂರು ಕಥೆಗಳು.....
ವ್ಹಾ ವ್ಹಾ...ಸೂಪರ್ ಕಲ್ಪನೆ
ಮನಸ್ವಿನಿಯವರೇ,
ಮುದ್ದಾದ ಕವಿತೆ
ಜೋಮನ್.
ಇಷ್ಟವಾಯಿತು. ಚಂದದ ಕಲ್ಪನೆ.
ಯಾಕೆ ಮನಸ್ವಿನಿ,
ಆತ ಬರೆಯುತ್ತಿರುವ ಗೆರೆ ನಿಮಗೆ ನಿಜವಾಗಿಯೂ ಕಾಣಲೆ ಇಲ್ಲವೆ?
ನಿನಗೆ ನಾನು ಅರ್ಧ ಕವಿತೆಯ ಹುಡುಗಿ ಅಂತ ಹೆಸರಿಡಬೇಕು ಅಂದುಕೊಂಡಿದ್ದೇನೆ:) ಇನ್ನೇನೋ ಹೇಳಬೇಕಿತ್ತು ಅನ್ನುವಷ್ಟರಲ್ಲಿ ಮುಗಿದೇಹೋಗತ್ತೆ!
ಚಂದ ಕವನ, :)
ಸರಳವಾಗಿ ಸುಂದರವಾಗಿದೆ.
ಮನಸ್ವಿನಿ,
ಯಾರಿಗಪ್ಪಾ ಇದು ನೀನು ’ಕೈ ಕೊಟ್ಟಿದ್ದು’? :-)
Really nice :)
ಶಾಂತಲಾ, ಸುಶ್,ಶ್ರೀ,ತೇಜಸ್ವಿನಿ,ವೇಣು, ಜೋಮನ್, ಸಂತೋಷ್ , ಚೇತನ್, reborn.
ಧನ್ಯವಾದಗಳು.
MD,
ಹಾಗೂ ಆಗಬಹುದು. ಧನ್ಯವಾದಗಳು.
ಚಕೋರರೇ,
ನನ್ನ ಬ್ಲಾಗಿಗೆ ಸ್ವಾಗತ, ಧನ್ಯವಾದಗಳು.
ಶ್ರೀನಿಧಿ,
ಹೌದು! ನನ್ನ ಪ್ರಕಾರ ಕವನ ಪೂರ್ಣವಾಗುವುದೇ ಇಲ್ಲ :)
ನೀನು ಹಾಗೂ ಕರೆಯಬಹುದು. ತುಂಬಾ ದಿನಗಳ ನಂತರ ನಿನ್ನ ಕಮೆಂಟು ನೋಡಿ ಸಂತೋಷವಾಯಿತು. ಧನ್ಯವಾದಗಳು.
ಭಾಗವತ,
ಇನ್ನೂ ಯಾರಿಗೂ ಕೊಟ್ಟಿಲ್ಲ. :)
ಸುನಾಥ್ ಕಾಕಾ,
ಇದು ಕಲ್ಪನೆ ಅಷ್ಟೇ.
:) Nice
Seeji,
Thanks :)
ಒಂದು ಸುಂದರ ಕಲ್ಪನೆಯನ್ನ ತುಂಬಾ ಸರಳವಾಗಿ ಹಿಡಿದಿಟ್ಟೀದರ. ಓದಿ ಖುಷಿ ಆಯ್ತು. Congrats!
Post a Comment