Saturday, May 31, 2008

ಕವನ ಪೂರ್ಣವಾಗುವುದೇ ಇಲ್ಲ!

ಬೋಳು ಟೊಂಗೆಯ ಒಂಟಿ ಹಕ್ಕಿಯ ಹಾಡು
ಕಥೆಯ ನಾಯಕನ ಕಣ್ಣೀರ ಪಾಡು

ಅರ್ಧ ಬಿಡಿಸಿಟ್ಟ ರಂಗೋಲಿಯ ಬಣ್ಣ
ಬೀದಿ ಪಾಲಾದ ಹುಡುಗಿ, ಅವಳಣ್ಣ

ಮೋಡ ಕಟ್ಟಿ ಪೂರ್ತಿ ಕಪ್ಪಾದ ಬಾನು
ತಾನು, ತನದು,ತನಗೇ ಎನ್ನುವ ಅವನು

ಕನಸುಗಳಲ್ಲೇ ಮುಳುಗಿರುವ ಇವಳು
ಒಡೆದು ಚೂರಾಗಿ ಬಿದ್ದಿರುವ ಹರಳು

ರಸ್ತೆ ಮೇಲೆ ಬಿದ್ದ ಒಂಟಿ ಅನಾಥ ಶವ
ತಪ್ಪಿಸಿಕೊಳ್ಳಲು ಒಂದಲ್ಲೊಂದು ನೆವ

ಮುಖ ತಿರುಗಿ ಮುರಿದ ಮನೆ
ಬತ್ತಿ ಕೆಂಪಾಗಿ ಒಣಗಿದ ತೆನೆ

ಕಣ್ಣಲ್ಲೇ ಬತ್ತಿ ಹೋದ ಹನಿ
ಮಾತುಗಳಲ್ಲೇ ಸತ್ತು ಹೋದ ಪ್ರೇಮಿ

ಊಹೂಂ ... ಹೀಗೆಲ್ಲ ಕವನ ಪೂರ್ಣವಾಗುವುದೇ ಇಲ್ಲ!

12 comments:

Jagali bhaagavata said...

ಒಂಚೂರು ಅರ್ಥ ಆಗ್ಲಿಲ್ಲ :-(( ಕವನ ಶುರು ಆಗಿಯೆ ಇಲ್ಲ ಅನ್ಸತ್ತೆ:-)

Shree said...

:) :) :)

Gururaja Narayana said...

ನಮಸ್ಕಾರ ಮನಸ್ವಿನಿ, ನಿಮಗೊಂದು ಆಹ್ವಾನ ಪತ್ರಿಕೆ.

ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

http://saadhaara.com/events/index/english
http://saadhaara.com/events/index/kannada

ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.


ನಿಮ್ಮ ಬೆಂಗಳೂರುವಾಸಿ ಸ್ನೇಹಿತರಿಗೆ link forward ಮಾಡಿ ಕನ್ನಡದ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಸಹಕರಿಸಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.

ಗುರು
-ಕನ್ನಡಸಾಹಿತ್ಯ.ಕಾಂ ಬಳಗ

MD said...

ಕವಿತೆ ತುಂಬಾ...
ಎರಡನೆ ಸಾಲಾಂತೂ.....
ಕೊನೆಯ ಹನಿಯಲ್ಲಿ..........

ನೀವು ಕವನ ಪೂರ್ಣ ಮಾಡದಿದ್ದ ಮೇಲೆ ನಾವ್ಯಾಕ್ರಿ ಕಮೆಂಟು ಪೂರ್ತಿ ಹಾಕಬೇಕು?

Sree said...

ಹೇಳದೇ ಬಿಟ್ಟ ಮಾತುಗಳಿಗೆ ಇರೋ ತೂಕ ಹೇಳಿ ಮುಗಿಸಿದವಕ್ಕೆ ಇರೋಲ್ಲವೇನೋ! ಇಷ್ಟ ಆಯ್ತು:)

ತೇಜಸ್ವಿನಿ ಹೆಗಡೆ said...

ಮನಸ್ವಿನಿ,

ಅಪೂರ್ಣವಾಗಿದ್ದರೂ ಭಾವಪೂರ್ಣವಾದ ಕವನ!

ಸುಪ್ತದೀಪ್ತಿ suptadeepti said...

ಇಂಥ ಕವನಗಳು ಪೂರ್ಣವಾಗೋದೇ ಇಲ್ಲ. ಜೀವನದಂತೆ ಅವು ನಿರಂತರ...

ಸ್ವಾರಸ್ಯಕರವಾಗಿವೆ ಸಾಲುಗಳು: ಜೀವನದಂತೆಯೇ!!

Anveshi said...

ಮನಸ್ವಿನಿ
ಎಲ್ರೂ ಇದನ್ನು ಅಪೂರ್ಣ, ಪೂರ್ಣವಾಗೋದೇ ಇಲ್ಲ, ಭಾವಪೂರ್ಣ, ಅನ್-ಅರ್ಥ ಪೂರ್ಣ ಕವನ ಅಂತೆಲ್ಲಾ ಹೇಳ್ತಾ ಇದ್ದಾರೆ... ಹೀಗೇ ಮುಂದುವರಿದ್ರೆ... ನಾನೇ ಈ ಕವನಾನ ಪೂರ್ಣ ಮಾಡ್ಬಿಡ್ತೀನಿ ಹುಷಾರ್....!!!!

reborn said...

Atleast u ve started .. so there s always hope :)

sunaath said...

ಅಸತ್ಯಾನ್ವೇಷಿಗಳ ಕೈಯಲ್ಲಿ ಸಿಕ್ಕರೆ, ಕವನದ ಕತೆ ಏನಾದಿತೊ!
ನೀವೇ ಪೂರ್ಣಗೊಳಿಸಿರಿ, ಮನಸ್ವಿನಿ!

Anonymous said...

Hi manashiniyavare .. E nimma kavana tumba ista aagide .. tamage dhanyavadagalu ...!

ಮನಸ್ವಿನಿ said...

ಭಾಗವತ,
ಇರಬಹುದೇನೋ..ಧನ್ಯವಾದಗಳು.

ಶ್ರೀ(ನೂರು ಕನಸಿನವರೇ),
:) :)ಧನ್ಯವಾದಗಳು.

ಗುರು,
ಧನ್ಯವಾದಗಳು.

M.D,
ಇಂತಹ ಕವನಗಳು ಪೂರ್ಣ ಆಗೋದೆ ಇಲ್ಲ ಅಂತ ನನ್ನ ಭಾವನೆ. ನಿಮ್ಮ ಅರ್ಧ ಕಮೆಂಟಿಗೆ ಪೂರ್ತಿ ಧನ್ಯವಾದಗಳು. :)

ಶ್ರೀ,
ಧನ್ಯವಾದಗಳು ಕಣ್ರೀ. :)

ತೇಜಸ್ವಿನಿ, ಸುಪ್ತದೀಪ್ತಿ,
ಧನ್ಯವಾದಗಳು.

ಅನ್ವೇಷಿಗಳೇ,
ಅನ್-ಅರ್ಥಪೂರ್ಣ ಅಂತ ಯಾರು ಹೇಳಿದ್ರು? ನಿಮ್ಮ ಮನಸಿನೊಳಗಿತ್ತಾ? ;)
ಸರಿಪ,ಪೂರ್ತಿ ಮಾಡಿ.ಧನ್ಯವಾದಗಳು

Reborn,
Yeah, hope being the best thing is always there. ಧನ್ಯವಾದಗಳು.

ಸುನಾಥ ಕಾಕಾ,
ಅನ್ವೇಷಿಗಳೇ ಪೂರ್ತಿ ಮಾಡಲಿ,ನೋಡುವ :) ಧನ್ಯವಾದಗಳು.

ರಂಜಿತಾ,
ಸ್ವಾಗತ, ಧನ್ಯವಾದಗಳು. ಬರ್ತಾ ಇರಿ.