Monday, May 05, 2008

ಹನಿಗಳು-೪

ಕಡಲ ದಡದ ಹುಡುಗಿಯದು ಒಡೆಯದ ಮೌನ
ಕಡಲ ಒಡಲೊಳಗಿಂದ ಗುಡುಗಿ ಸಿಡಿವ ಅಲೆಗಳು
ನಿಲ್ಲದ ಸೆಣಸಾಟ
ಅವಳದು ದಿಟ್ಟ ನೋಟ, ಅಲುಗದ ತುಟಿ
ಕಡಲ ತೆರೆಗಳದು ತಾಂಡವ ನೃತ್ಯ
ಬಹಳ ಹೊತ್ತಿನ ತನಕ
ಈಗ ಎಲ್ಲವೂ ಸ್ತಬ್ಧ; ನಿಶ್ಯಬ್ದ
ಸಾಗರವೇ ಸಂಧಾನಕ್ಕೆ ಬಂದಂತೆ

*********************

ಮಂದ ಬೆಳಕಿನ ಬೀದಿ ದೀಪಗಳಲ್ಲಿ
ನಾ ಕೇರಿಗಳನ್ನ ದಾಟುವಾಗ
ಮಿಂಚಂತೆ ಮುಂದೆ ಬರಬೇಡ ಮಾರಾಯ್ತಿ
ಕಣ್ಣು ಕುಕ್ಕಿ,ಆಯ ತಪ್ಪಿ, ಬಿದ್ದು ಬಿಡುತ್ತೇನೆ
ಜನ ನನ್ನ ಕುಡುಕನೆನ್ನುತ್ತಾರೆ

20 comments:

Sree said...

ಮೊದಲ ಹನಿಗೆ ಸ್ವಲ್ಪ ಪ್ರೊಮೋಷನ್ ಕೊಡ್ಬಹುದಿತ್ತೇನೋ...

Jagali bhaagavata said...

ಮುಂದಿನ ಹನಿಗವನಕ್ಕೆ ನಿಷೇಧಿತ ಪದಗಳು:-
ಕಡಲು,
ದಡ,
ನದಿ,
ತೆರೆ,
ಅಲೆ,
ಸೂರ್ಯ,
ಚಂದ್ರ,
ಬೆಳದಿಂಗಳು,
ತಾರೆ.

Shree said...

ಭಾಗವತರೇ, ನಮಗೆ ಪರಿಚಿತವಾದ ಭಾವಗಳಿದ್ರೆ, ನಾವು ಆದನ್ನು ಅನುಭವಿಸಲು ಶಕ್ತರಾದರೆ ಮಾತ್ರ ಒಂದು ಕವನ ಆತ್ಮೀಯ ಅನಿಸಿಕೊಳ್ಳುತ್ತದೆ ಅಲ್ವಾ? ಅದು ಬೇರೆ ಸಾವಿರ ಸಲ ಬೇರೆಬೇರೆಯವರು ಬರೆದಿರಬಹುದು, ನಮ್ಮ ಭಾವ ನಮಗೆ ಹೊಸತೇ ಅನಿಸಿದರೆ ತಪ್ಪಿಲ್ಲ ಅಲ್ವಾ..?

Jagali bhaagavata said...

ತಪ್ಪಿಲ್ಲಪ್ಪ. ಸುಮ್ನೇ ’ಕಿಚಾವಣೆ’ ಅಷ್ಟೆ. ಸೀರಿಯಸ್ಸಾಗಿ ತಗೊಂಡು ಡೋಂಟ್ ವರಿ ಮಾಡ್ಕೊಳ್ಬೇಡಿ :-)

ತೇಜಸ್ವಿನಿ ಹೆಗಡೆ said...

ಹನಿಗಳು ತುಂಬಾ ಚೆನ್ನಾಗಿವೆ.. ಇನ್ನೂ ಹನಿ ಹನಿಯಾಗಿ ಮನದೊಳಗಿಳಿಯುತ್ತಿವೆ..;-)

ಸುಪ್ತದೀಪ್ತಿ suptadeepti said...

ಎರಡು ಹನಿಗಳೂ ಪದಗಳ ಬಂಧ ಮೀರಿ ಮತ್ತೇನನ್ನೋ ಹೇಳುವಂತಿವೆ. ಚೆನ್ನಾಗಿವೆ.

ಎರಡನೆಯದು ಸಣ್ಣ ಖುಷಿ, ಕಿರುನಗು ಕೊಡತ್ತೆ.

ಮನಸ್ವಿನಿ said...

ಶ್ರೀ,

ಹೌದು. :( ಆಗ್ಲಿಲ್ಲಾರಿ. ಧನ್ಯವಾದಗಳು.

ಭಾಗವತ,
ಹ ಹ ಹ. ಕಷ್ಟ, ಕಷ್ಟ, ನಿನ್ನ ಹತ್ರ ತಪ್ಪಿಸ್ಕೊಳ್ಳೋದು ಕಷ್ಟ. ಸರಿ, ನೋಡ್ತೇನೆ ಮಾರಾಯ.

ಶ್ರೀ(ನೂರು ಕನಸಿನವರೇ)
ನನ್ನ ಸಪೋರ್ಟಗೆ ಬಂದಿದ್ದಕ್ಕೆ ಧನ್ಯವಾದಗಳು. ಮಸಾಲೆ ದೋಸೆ ಕೊಡಿಸ್ತೇನೆ, ಭಾಗವತಂಗೆ ಹೇಳ್ಬೇಡಿ. :)

ತೇಜಸ್ವಿನಿ,ಸುಪ್ತದೀಪ್ತಿ
ಧನ್ಯವಾದಗಳು. :)

ಶ್ವೇತಾ ಹೆಗಡೆ said...

chennagive hanigalu. eradaneyadu aapta annistu. hanigalu seri bhari maleyagali....
-praveen banagi

ಮನಸ್ವಿನಿ said...

ಪ್ರವೀಣ್,

ಧನ್ಯವಾದಗಳು.

Anonymous said...

Quite interesting!

I use to think that software engineers wont think beyond projects, onsite opportunity, PVR and flat in bangalore!!

Nice to see one s/w professional involved in kathe kavana and all...

And the listed interests/books mentined are really appreciable.

S/W people like u should be 1000's in numbers!! Then only we can see some kannada environment in IT induarty.

All the best. :)

nazaare@gmail.com

Shankar Prasad ಶಂಕರ ಪ್ರಸಾದ said...
This comment has been removed by the author.
Anonymous said...

Registration- Seminar on the occasion of kannadasaahithya.com 8th year Celebration

Manasviniyavare,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same

venue after the seminar.

For further details and registration click on below link.

http://saadhaar
a.com/events/index/english


http://saadha
ara.com/events/index/kannada




Please do come and forward the same to your like minded

friends
-kannadasaahithya.com balaga

jomon varghese said...

ನಮಸ್ಕಾರ...

ಮುದ್ದು ಮುದ್ದಾದ ಹನಿಗಳು.. ಎಲ್ಲವನ್ನೂ ಪ್ರೀತಿಯಿಂದ ನೇವರಿಸಿ, ಎಷ್ಟು ಜತನದಿಂದ ಜೋಡಿಸಿದ್ದೀರಿ. ಪ್ರತಿ ಹನಿಗೂ ಒಂದೊಂದು ಭಾವ, ಒಂದೊಂದು ಬೆಡಗು ಇದೆ ಅಂತ ಅನಿಸಿತು. ಮತ್ತೆ ಮತ್ತೆ ಓದಿಕೊಂಡೆ. ತುಂಬಾ ಇಷ್ಟವಾಯಿತು.

ಧನ್ಯವಾದಗಳು.

ಜೋಮನ್.

ಸಿಂಧು sindhu said...

ಸು-ಮನಸ್ವಿನೀ..

ತುಂಬ ಚೆನ್ನಾದ ಹನಿಗಳು. ಅಲೆ ಅಲೆಯಾಗಿ ಬರುವ ರೀತಿಯೇ ಚೆನ್ನ. ಮೊದಲ ಹನಿಯ ಗಾಂಭೀರ್ಯ, ಎರಡನೆಯ ಹನಿಯ ತುಂಟಾಟ ಎರಡೂ ಇಷ್ಟವಾಯಿತು.

ಪ್ರೀತಿಯಿಂದ
ಸಿಂಧು

Anonymous said...

ಹನಿಗಳನ್ನು ಓದಿದ ಮೇಲೆ...ಧೋ ಎಂದು ಸುರಿವ ಮಳೆಯಲ್ಲಿ
ಮನಸ್ಸು ತೋಯ್ದಂಗಾಯ್ತು...ಇನ್ನಷ್ಟು ಬರಲಿ ಹೀಗೆಯೆ...
---ಅಮರ್

ಮನಸ್ವಿನಿ said...

Nazaare,
Thanks. Welcome to my blog. ಬರ್ತಾ ಇರಿ.

ಜೋಮನ್, ಸಿಂಧು ಅಕ್ಕ,
ನೀವು ಇಲ್ಲಿಗೆ ಬಂದಿದ್ದು, ಪ್ರತಿಕ್ರಿಯಿಸಿದ್ದು ಎಲ್ಲ ಸಂತೋಷ. ಬರ್ತಾ ಇರಿ. ಧನ್ಯವಾದಗಳು.

ಅಮರ್,
ಬ್ಲಾಗಿಗೆ ಸ್ವಾಗತ. ಧನ್ಯವಾದಗಳು. ಬರ್ತಾ ಇರಿ.

Dr.Naren said...

hani mattu kadalina odalaatada parivu chennagide

ಮನಸ್ವಿನಿ said...

Dr.Narendra,

ಬ್ಲಾಗಿಗೆ ಸ್ವಾಗತ. ಸ್ಪಂದನಕ್ಕೆ ಧನ್ಯವಾದಗಳು. ಬರುತ್ತಿರಿ.

Anonymous said...

kudiyodu tumba tappante sir .. namm mestru helta idru

SURAJ CHANDARGI said...

manaswiniji...awesome writings....please give me feedback about my kannada poetry... visit my blog surajchandargi.blogspot.com....i have posted only few stanzas of my poems...