( ಮನೆಯಲ್ಲಿ ನಡೆದ ಸಂಭಾಷಣೆ. ಹೇಗಿತ್ತೋ ಹಾಗೇ ಬರೆದು ಹಾಕ್ತಾ ಇದ್ದೇನೆ. ದ್ರಾವಿಡ್ ಫ್ಯಾನ್ಸ್ ದಯವಿಟ್ಟು ಸಿಟ್ಟು, ಬೇಜಾರು ಮಾಡ್ಕೋಬೇಡಿ)
ಅಪ್ಪ : ರೊಯಲ್ ಚಾಲೇಂಜರ್ಸ್ ಒಳ್ಳೆ ಟೆಸ್ಟ್ ಟೀಮ್ ತರ ಇದೆ. ಎಲ್ಲರೂ ಕುಟ್ಟೋವ್ರೇ. ಕ್ಯಾಪ್ಟನ್ ಅಂತು ..ದೇವ್ರೇ.... ಅಷ್ಟು ಮ್ಯಾಚ್ ಸೋತಿದಾರೆ, ಸ್ವಲ್ಪ ಆದ್ರೂ ಗಂಭೀರವಾಗಿ ಆಡ್ಬಾರ್ದಾ!
ತಂಗಿ: ಯಾಕ್ ಸುಮ್ನೆ ಸುಮ್ನೆ ರೊಯಲ್ ಚಾಲೇಂಜರ್ಸ್ ಗೆ ಬಯ್ಯೋದು? ರಾಹುಲ್ ದ್ರಾವಿಡ್ ಪಾಆಆಆಆಆಆಆಆಆಆಆಅಪ. ಲಕ್ ಸರಿಯಿಲ್ಲ. ಗೆಲ್ಲೊ ಮ್ಯಾಚ್ ಸೋಲ್ತಾ ಇದ್ದಾನೆ.
ಅಪ್ಪ : ಹೌದೌದು. ಗೆಲ್ಲೋ ಮ್ಯಾಚ್ ಸೋಲ್ತಾನೆ! (sarcastic)
ತಂಗಿ: ಹೂಂ ಮತ್ತೆ.
ಅಪ್ಪ: ಗೆಲ್ಲೋದೆ ಆಗಿದ್ರೆ , ಫೋರ್ ರನ್ಸ್ ಹೋಡಿತಾ ಇದ್ದ. ಸಿಕ್ಸ್ ಎತ್ತೋಕಂತು ಆಗಲ್ಲ. ಒಂದೊಂದು ಓವರ್ಗೆ ೨ ಫೋರ್ ಹೋಡೆದ್ರು ಸಾಕು .೨೦-೨೦ ಮ್ಯಾಚ್ . ೧ ಫೋರ್ ಹೋಡದ್ರೆ , ೩ ಬಾಲ್ ಹಾಳ್ಮಾಡ್ತಾನೆ.
ತಂಗಿ : ಯಾಕಷ್ಟು ಬೈತೀರಾ? ಅವನಿಗೂ ಮ್ಯಾಚ್ ಗೆಲ್ಲ್ ಬೇಕು ಅಂತಾನೇ ಇರುತ್ತೆ.
ಅಪ್ಪ : ಓಹ್
ತಂಗಿ : ಓದಿಲ್ಲಾದ್ರೂ ಪಾಸ್ ಆಗ್ಬೇಕು ಅನ್ನೋ ಆಸೆ ಯಾರಿಗಿರಲ್ಲ! ಹಾಗೇನೆ ದ್ರಾವಿಡ್ಗೂ.
(ಏತನ್ಮಧ್ಯೆ ಅಮ್ಮ ನನ್ನ ಜೊತೆ ಬೇರೆ ಯಾವುದೋ ವಿಷಯ)
ಅಮ್ಮ : ಹೌದೆ! ಭಟ್ರ ಹತ್ರಾ ಆದ್ರೂ ತೋರ್ಸ್ಕೊಂಡು ಬರಬೇಕು. ಎಂತ ಮಾಟ ಮಂತ್ರದ ಕಾಟವೋ
ತಂಗಿ : ಹೌದಮ್ಮ, ರಾಹುಲ್ ದ್ರಾವಿಡನ ಕರ್ಕೊಂಡು ಹೋಗು.
:)
(ನಿನ್ನೆ ಡೆಕ್ಕನ್ ಚಾರ್ಜ್ ರ್ಸ್ ವಿರುದ್ಧ ದ್ರಾವಿಡನ ಸಿಕ್ಸ್ ನೋಡಿ ನಮಗೆಲ್ಲ ಖುಶಿಯೋ ಖುಶಿ . ರೊಯಲ್ ಚಾಲೇಂಜರ್ಸ್ ನಿನ್ನೆ ಮ್ಯಾಚ್ ಗೆದ್ದಾಕ್ಷಣ , ತಂಗಿಯ ಮುಖ ನೋಡ್ಬೇಕಿತ್ತು. ಅಪ್ಪನ ನೋಡೋದು, ರಾಹುಲ್ ದ್ರಾವಿಡನ ಸಿಕ್ಸ್ ಬಗ್ಗೆ ಹೇಳೋದು.
All the best Royal Challengers. )
Subscribe to:
Post Comments (Atom)
13 comments:
ನಂಗೆ ದ್ರಾವಿಡ್‍ನ ಬಯ್ಯೋವ್ರನ್ನ ಕಂಡ್ರೆ ಆಗಲ್ಲ (ಕ್ಷಮೆ ಇರಲಿ). ದ್ರಾವಿಡ್ ಆಟನ ಅವರ ಮೊದಲ್ನೆ ಟೆಸ್ಟಿಂದನೆ follow ಮಾಡ್ತಾ ಇದ್ದೆ. ಎಲ್ಲ ಗೆಳೆಯರ್ದು ಒಂದೇ ಗೋಳು, ಈ ದ್ರಾವಿಡ್ಗೆ ಸಿಕ್ಸ್ ಹೊಡ್ಯೋಕೆ ಬರಲ್ಲ ಅಂತ. ಒಂದಿನ ಹೊಡ್ದ ನೋಡಿ ಡೊನಾಲ್ಡ್ಗೆ ಸಿಕ್ಸು, ಏನ್ ಹೇಳ್ತಿರಾ ನನ್ ಖುಶಿಗೆ. ಸಿಕ್ಸ್ ಹೊಡ್ದ್ರೆ ದ್ರಾವಿಡ್ ತರ ಹೊಡಿಬೇಕು, ಅದ್ರಲ್ಲ್ಯ್ ಎಂತಾ ಸ್ಟೈಲು. ಕವರ್ ಡ್ರೈವಲ್ಲಿ ಸಿಕ್ಸ್ ಹೊಡ್ಯೊದು ಅಂದ್ರೆ ದ್ರಾವಿಡ್.
ಕೊನೇಗು ಇನ್ನೊಂದು ಮ್ಯಾಚ್ ಗೆದ್ರಲ್ಲ, ಖುಶಿ :)
ನಂಗೂ ದ್ರಾವಿಡ್‌ನ ಬಯ್ಯೋವ್ರನ್ನ ಕಂಡ್ರೆ ಆಗಲ್ಲ (ನಂಗೂ ಕ್ಷಮೆ ಇರ್ಲಿ):P
ಯಾರ್ರಿ ಅದೂ ನಮ್ಮ ದ್ರಾವಿಡ್ ಬಗ್ಗೆ ಕಮೆಂಟು ಕೊಡೋರು.
ನಂಗೆ ಕ್ಷಮೆ ಗಿಮೆ ಬೇಡ..
ಲೇಖಕರು ಮೊದ್ಲು ತಪ್ಪೊಪ್ಪಿಗೆ ಬರೆದು ಕೊಡಬೇಕು.
ದ್ರಾವಿಡ್ ಸಿಕ್ಸರ್ ಹೊಡೆಯುವವರೆಗೆ ನಮ್ಮ ಈ ಹೋರಾಟ ನಡೆದೇ ಇರುತ್ತೆ.
ಅಯ್ಯೋ! ನಾನೆಲ್ಲಿ ದ್ರಾವಿಡನ ಬೈದೆ?
ಮನೆಲಿ ನಡೆದ ಸಂಭಾಷಣೆ ಬರೆದೆ ಅಷ್ಟೇ :)
ಕ್ಷಮೆ ಕೇಳಿದವ್ರನ್ನ ಕ್ಷಮಿಸಲಾಗಿದೆ. :)
MD,
ಏನು ತಪ್ಪು ಒಪ್ಪಿಗೆ? ;)
ದ್ರಾವಿಡ್ ಸಿಕ್ಸರ್ ಹೊಡೆದು ಮ್ಯಾಚ್ ಗೆದ್ದರೆ ನಂಗೂ ಖುಶಿನೇ ಸರ್. ಹೋರಾಟ - ಗೀರಾಟ ಎಲ್ಲ ಬೇಡ ಸ್ವಾಮಿ.
ಏನ್ರೀ....ನಮ್ ದ್ರಾವಿಡ್ ಬಗ್ಗೆ ಇಂಗೆಲ್ಲಾ ಅಗುರವಾಗಿ ಬರ್ದಿದೀರಾ? ಇವೆಲ್ಲ ಸರೀಗಿರಾಕಿಲ್ಲ. ಉಸ್ಸಾರು
ಊಂ... ನಂಗೂನೂ ದ್ರಾವಿಡ್ ಅಂದ್ರೆ... ಅಲ್ಲಲ್ಲ... ದ್ರಾವಿಡ್ ಆಟ ಅಂದ್ರೆ....
ಹೇಳಲ್ಲಪ್ಪ... ಆ ಮೇಲೆ ಕ್ಷಮೆ ಕೇಳಿಸ್ತೀರಾ....
ದ್ರಾವಿಡ್ ತಂಡ ಗೆಲ್ಲೋವರ್ಗೂ ಕ್ಷಮೆ ಕೇಳೋದಿಲ್ಲಪ್ಪ...
ಯಾರ್ರೀ ಹೇಳಿದ್ದು ಇದು ಟೆಸ್ಟ್ ಟೀಂ ಅಂತ? ೨೦ ಓವರ್ ಕಂಪ್ಲೀಟ್ ಮಾಡಕ್ಕೇ ಆಗಲ್ಲ ಇನ್ನು ದಿನ ಪೂರ್ತಿ ಆಡೋ ಟೆಸ್ಟ್ ಟೀಂ ಆಗೋಕ್ಕೆ ಹೇಗೆ ಸಾಧ್ಯ?
ದ್ರಾವಿಡ್ ಬಗ್ಗೆ ಒಂದು ಮಾತಿದೆ.. ಆಡುವಾಗ ಆತನ ಒಂದು ಮುಖ್ಯ ಗುರಿ ಎಂದರೆ ಬಾಲ್ ಪಿಚ್ ದಾಟಿ ಹೋಗದೆ ಇರೋ ಹಾಗೆ ಕುಟಿಯೋದು...
ಏನೇ ಆಗ್ಲಿ, ಇದು ವಿಜಯ್ ಮಲ್ಲ್ಯ ಕರ್ಮ! ಹೆಂಡದಿಂದ ಬಂದ ದುಡ್ಡು ಕ್ರಿಕೆಟ್ ನಲ್ಲಿ ಹೋಗ್ತಿದೆ ಅಷ್ಟೆ...
Dravid - dravida pranayamakke olleyavaniddane ashte. Limited talent - elli apply maadbeku antanoo gottilla. Tanna tharadavare noora jana jotegitkondu 20-20 aata adoke hogta idane. Ishtu divasa international cricket aadiroo buddhi bandilla annodu kanisodilva.
Wasim Jafer, Bharat Chipli, Kallis - rama rama. Avnu 20-20 andre test match 20 divasaddu andkondirbeku.
ಭಾಗವತ್ರೇ,
ಉಸ್ಸಾರಾಗಿ ಇರ್ಬೇಕು ಮಾರಾಯ್ರೆ. :)
ಅನ್ವೇಷಿಗಳೇ,
ಸದ್ಯ, ಬಚಾವಾದೆ
ಹರೀಶ್,
"೨೦ ಓವರ್ ಕಂಪ್ಲೀಟ್ ಮಾಡಕ್ಕೇ ಆಗಲ್ಲ ಇನ್ನು ದಿನ ಪೂರ್ತಿ ಆಡೋ ಟೆಸ್ಟ್ ಟೀಂ ಆಗೋಕ್ಕೆ ಹೇಗೆ ಸಾಧ್ಯ?" ಹ ಹ ಹ.
AG,
:) ಮಾತಾಡದೆ ಇದ್ರೆ ಒಳ್ಳೆದು ಬಿಡಿ.
aktharge first six hodeda indian batsman dravid horethu bere yaruhalla dravid batting style bere avaru kannadiga kanri swalpa maryade erli
pakna akthr bowling ge modalu six hodeda indian first batsman dravid(gode) neevu avara six bagge comments madthiralla avra batting style nimgenu gothu 2 bari heliddeni artha madkoli
dravid obba adbutha atagaara avara bagge avarannu neevu time passge balasikolluvudu sariyalla manju
Whatever u say, Dravid is theee best player of cricket............i luv him...
Post a Comment