Monday, March 31, 2008

ಹನಿಗಳು- ೩

ಕತ್ತಲೆಯ ಎಲ್ಲೆಯ
ಹುಡುಕಲು
ಒಂದೆಳೆಯ ಬೆಳಕು
ಕಡಕ್ಕೆ ಬೇಕಿದೆ

***************

ರಾತ್ರಿಗಳಲ್ಲಿ ಕನಸಿನದು
ಮುಗಿಯದ ತಗಾದೆ
ನಿದ್ರೆಯಿಲ್ಲ ನನಗೆ
ಹಗಲಿನಲಿ ಕನಸಿಗೆ
ಭರ್ಜರಿ ನಿದ್ರೆ !

***************

ಲಕ್ಷ ಲಕ್ಷ ಚುಕ್ಕಿ
ಹಾಲುಹುಣ್ಣಿಮೆಯ ಚಂದಿರ
ಊಹೂಂ ಹಗಲಾಗುವುದಿಲ್ಲ
ಸೂರ್ಯನಿಲ್ಲವಲ್ಲ

***************

ಮನಸಿನೊಳಗಿನ
ಕಿರುಹಣತೆಗೆ
ಹೊರಗಿನ ಕತ್ತಲೂ
ಹೆದರಿ ಅಳುತ್ತಿದೆ

( ಹೊಸತಾಗಿ ಏನೂ ಬರೆಯಲಾಗುತ್ತಿಲ್ಲ.ಇವೆಲ್ಲ ಹಳೆಯ ಹನಿಗಳು. )

18 comments:

ನಾವಡ said...

ಮೊದಲನೆಯ ಮತ್ತು ನಾಲ್ಕನೆಯ ಹನಿಗಳು ಇಷ್ಟವಾದವು. ಯಾವಾಗಲೂ "ಹನಿ" (honey) ಹಳೆಯದಾದಷ್ಟು ಸವಿಯಂತೆ. ಹಾಗೆಂದು ಹೊಸ ಹನಿಗಳೂ ಬರಲಿ.
ನಾವಡ

ಸುಪ್ತದೀಪ್ತಿ suptadeepti said...

ಮನಸಿನೊಳಗೆ ಇನ್ನಷ್ಟು ಹಣತೆಗಳು ಮಿನುಗಲಿ. ಬೆಳಕಿನ ಕಡ ಕೇಳಲು ಬರುತ್ತೇನೆ.

Anonymous said...

ಸುಲಭವಾಗಿ ಅರ್ಥ ಆಗೋ ಹನಿಗಳು ಚೆನ್ನಾಗಿವೆ. ಹೀಗೆ ಬರೀತಾಯಿರಿ..
ಎರಡನೆ 'ಹನಿ' ನೋಡಿ ನನ್ನ ಬಾಣಂತಿ ತಂಗಿ ಮಾತು ನೆನ್ಪಾಯ್ತು :).

ಗುರು

Sree said...

ನಿದ್ರೆಯಿಲ್ಲದ ಕನಸುಗಳಾ?:)
ಚೆನ್ನಾಗಿದೆ, ಕೊನೆಯವೆರಡು ನಾನೇ ಬರೆದದ್ದೆನಿಸೋ ಅಷ್ಟು ಹತ್ತಿರ ಅನ್ನಿಸ್ತು!
ಬರಿಯೋಕಾಗ್ತಿಲ್ಲ ಅಂತೆಲ್ಲ ನೆಪ ಹೇಳ್‌ದ್ರೆ ಸುಮ್ಮ್ನೆ ಬಿಡಲ್ಲಾ ಮೇಡಂ, ಫೋನ್ ನಂಬರ್ ಇದೆ, ಧಮ್ಕಿಗಳು ಕಳ್ಸೋಕೆ! ಸುಮ್ಕೆ ಬರೀರಿ;)

ಏಕಾಂತ said...

Hani galu haleyadadaru hosatanavide.
Hani yinda Holeyagali...

MD said...

ಅಳೆಯವೇ ಇಷ್ಟು ಚಂದಾಗವೆ. ಒಸ್ದು ಬರೆಯದೇ ಇದ್ದರೂ ವಾಕೆ.
ಹಾಗಂತ ಬುಟ್ಟುಬುಡ್ತೀವಾ?

'ಸೂರ್ಯನಿಲ್ಲವಲ್ಲ' ಹನಿ ಚೆಂದಾಗೈತೆ

ರಾಜೇಶ್ ನಾಯ್ಕ said...

ಹಳೆ ಹನಿಗಳು ಅಂತ ನೀವು ಹೇಳಿದ್ರಿಂದ ಗೊತ್ತು. ಇಲ್ದಿದ್ರೆ ಎಲ್ಲವೂ ಹೊಸತೆ. ಬರೀತಾ ಇರಿ ಅಷ್ಟೆ. ಹನಿಗಳ ಮಳೆ ಬರ್ತಾ ಇದ್ರೆ ಆಯ್ತು.

ಶ್ವೇತಾ ಹೆಗಡೆ said...

haleya hanigalalli hosatanada mantrikateyide. adakke avu jadoo maduttave... nanoo navadara anuyayi! modala mattu nalkane hanigalu muddagive.

MD said...

"ಮೊನ್ನೆ ಎಲ್ಲೋ ಬ್ಲಾಗಿಗರ ಕೂಟ ಇತ್ತಂತೆ...... ಅದೆಲ್ಲೋ ಡಿ.ವಿ.ಜಿ ಯವರ ಹುಟ್ಟುಹಬ್ಬದ ಕಾರ್ಯಕ್ರಮ ಆಯಿತಂತೆ.... ಜೋಗಿಯವರ ಪುಸ್ತಕ ಬಿಡುಗಡೆಗೆ ನೀವು ಹೋಗಿದ್ರಾ? ಯಾವಾಗ ಎಲ್ಲಿ ನಡೆಯಿತು?..... ಮೈಸೂರ ಮಲ್ಲಿಗೆ ನಾಟಕ ನೋಡುವಾಸೆ ತುಂಬಾ ಇತ್ತು, ಆದ್ರೆ ಅದ್ಯಾವಾಗ ಪ್ರಸಾರ ಆಯ್ತೋ ಗೊತ್ತೇ ಆಗಲಿಲ್ಲ " ಹೀಗೆಯೇ ಇನ್ನೂ ಅನೇಕ ಅಯ್ಯೋಗಳ ಪಟ್ಟಿ ಬೆಳೆಯುತ್ತೆ. ಇಂತಹ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಾವು ನಮಗೆ ಗೊತ್ತಾಗದೇ ಹೋದುದಕ್ಕಾಗಿ ಕಳೆದುಕೊಂಡಿದ್ದೇವೆ.

ಈ ಕೊರಗನ್ನು ನೀಗಿಸಲು ಏನು ಮಾಡಬಹುದು ಎಂದು ತಲೆ ಕೆರೆದುಕೊಂಡಾಗ ಹೊಳೆದಿದ್ದೇ 'ಇದೊಂದು ಪ್ರಕಟಣೆ' ಎಂಬ ಬ್ಲಾಗ್.
www.prakatane.blogspot.com

ಬೆಂಗಳೂರಿನಲ್ಲೇ ಆಗಲಿ, ಕರ್ನಾಟಕದಲ್ಲೇ ಆಗಲಿ ಅಥವಾ ಪ್ರಪಂಚದ ಯಾವುದೇ ಮೂಲೆಯಲ್ಲೇ ಆಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಮ್ಮ 'ಇದೊಂದು ಪ್ರಕಟಣೆ' ಬ್ಲಾಗಿಗೆ ಕಳಿಸಿ. ನಾವು ಪ್ರಕಟಿಸುತ್ತೇವೆ.

ನೀವು ಮಾಡಬೇಕಾದುದಿಷ್ಟೇ. ನಿಮಗೆ ಯಾವುದಾದರೂ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿದಿದೆಯೇ prakatane@gmail.com ಗೆ ಒಂದು ಮಿಂಚಂಚೆ ಕಳಿಸಿ.
ನಿಮಗೆ ಈ ವಾರದಲ್ಲಿ/ವಾರಾಂತ್ಯದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಬಗ್ಗೆ ತಿಳಿಯಬೇಕೆ? 'ಇದೊಂದು ಪ್ರಕಟಣೆಗೆ' ಭೇಟಿ ಕೊಡಿ.

ಇದು ನಿಮ್ಮಿಂದ ನಿಮಗಾಗಿ ನಿಮಗೋಸ್ಕರ ಹುಟ್ಟಿದ ಬ್ಲಾಗ್. ಇದರ ಜವಾಬ್ದಾರಿಯೂ ನಿಮ್ಮೆಲ್ಲರದೇ.

I apologize for spamming, but no other way to inform :-(

Jagali bhaagavata said...

ರಾತ್ರಿಗಳಲ್ಲಿ ಕನಸಿನದು
ಮುಗಿಯದ ತಗಾದೆ
ನಿದ್ರೆಯಿಲ್ಲ ನನಗೆ

ಹ್ಮ್.....ಪಾಆಆಪಾಆಆಆಅ. ನಿನ್ನ ನಿದ್ದೆ ಕೆಡಿಸಿದವನ ಹೆಸರು ಹೇಳುವಂತವಳಾಗು :-) ಈಗಲೂ ಸೂತ್ರ (screw) ಸಡಿಲವಾಗಿದ್ಯಾ? :-)


ಲಕ್ಷ ಲಕ್ಷ ಚುಕ್ಕಿ
ಹಾಲುಹುಣ್ಣಿಮೆಯ ಚಂದಿರ
ಊಹೂಂ ಹಗಲಾಗುವುದಿಲ್ಲ
ಸೂರ್ಯನಿಲ್ಲವಲ್ಲ

ಹ್ಮ್....ಸೂಪರಾಗಿದೆ ವಿರಹದ ಸಾಲುಗಳು. ಸೂರ್ಯ ಬರ್ತಾನೆ ಬಿಡು. ಡೋಂಟ್ ವರಿ ಮಾಡ್ಬೇಡ.

reborn said...

All are good ... Really liked the third one .. I agree with JB ....sounds like Viraha :)..

Many of ur hani s are on light , darkness , and associated sun and moon ..Interesting :)

ಮನಸ್ವಿನಿ said...

ನಾವಡರೇ,
ಧನ್ಯವಾದಗಳು . :)

ಸುಪ್ತದೀಪ್ತಿ,
ಹಾ :) ಧನ್ಯವಾದಗಳು.

ಗುರು,
ಸ್ವಾಗತ. ಬರುತ್ತಿರಿ.

ಶ್ರೀ,
:) ಅಯ್ಯೋ ! ಕಲ್ಪನೆ ಕಣ್ರಿ
ನಿಮ್ಮ ಪ್ರೀತಿ ಪೂರ್ವಕ ಆಗ್ರಹಕ್ಕೆ ಥ್ಯಾಂಕ್ಸ್.
ಧಮ್ಕಿ!! ಹಿ ಹಿ ಹಿ.

ಏಕಾಂತ,
ಧನ್ಯವಾದಗಳು. :)

MD,
ಧನ್ಯವಾದಗಳು, ’ಪ್ರಕಟಣೆ’ ಒಳ್ಳೆಯ ಪ್ರಯತ್ನ.

ರಾಜೇಶ್, ಸವಿಗನಸು,
ಧನ್ಯವಾದಗಳು. :)

ಭಾಗವತ,
ಅಯ್ಯೋ! ಕಲ್ಪನೆ ಕಣಯ್ಯ ;)

reborn,
ಎಲ್ಲ ಕಲ್ಪನೆ ;) ಧನ್ಯವಾದಗಳು. ಕತ್ತಲು, ಬೆಳಕು, ರಾತ್ರಿ, ಹಗಲು, ಸೂರ್ಯ, ಚಂದ್ರ - ಇವುಗಳ ಮೇಲೆ ಬರೆದ ಹಳೆಯ ಹನಿಗಳನ್ನೇ ಹಾಕಿದ್ದೇನೆ. :)

sunaath said...

ಮನಸ್ವಿನಿ,
Honeyಗಳು ತುಂಬ ಮಧುರವಾಗಿವೆ.

ಕುಕೂಊ.. said...

ನನ್ನ ನಿದ್ದೆ ಕೆಡಿಸಿದ ಹನಿ. ನಿನ್ನ ಹನಿಗಳು ಇನ್ನು ಮನದಲ್ಲಿ ಹೊಟ್ಟೆಕ್ಕಿಚ್ಚಿನ ಬಿರುಸು ಮಳೆಯಾಗಿ ಹನಿತಿವೆ.

ಧನ್ಯವಾದಗಳು
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ

Pramod P T said...

ಇನ್ನೂ ಎಷ್ಟು ಹನಿಗಳಿವೆ (ಹಳೆಯವು!) ನಿನ್ನಲ್ಲಿ?

ಮನಸ್ವಿನಿ said...

ಕಾಕಾ,
ಧನ್ಯವಾದಗಳು.

ಕುಮಾರ ಸ್ವಾಮಿಯವ್ರೇ,
ಸ್ವಾಗತ, ಬರುತ್ತಿರಿ. ಧನ್ಯವಾದಗಳು.

ಪ್ರಮೋದ್,
ಇವೆ. ಕೆಲವೇ ಕೆಲವು :)

Ranjita said...

chennagive

Dayananda said...

bala channagide kanri