ಕಲ್ಲು ಮನಸಿನಲಿ
ಕಲೆಯ ತಂದೇನೆಂದಳು.
ಕಲ್ಲು ಮುಟ್ಟಿದಳು,
ಪರೀಕ್ಷಿಸಿದಳು.
ಕೆತ್ತಿದಳು, ನಕ್ಕಳು.
ಹಿತವೆನಿಸುತ್ತಿತ್ತು ನನಗೂ!
ಮರುಕ್ಷಣ ಏನನ್ನಿಸಿತೋ
ಜೋರಾಗಿ ಹೊಡೆದಳು
ಕೆಡವಿದಳು ಕಲ್ಲಿನಂತ ನನ್ನನ್ನು
ಬಂಡೆಗಲ್ಲಾಗಿದ್ದ ನಾನು
ಈಗ ಚೂರು ಚೂರಾಗಿದ್ದೇನೆ
(ಮತ್ತೊಂದು ಹಳೆಯ ಹಾಡು)
Subscribe to:
Post Comments (Atom)
10 comments:
ಹಾಡು! ಹಾಡು!
ಹಾಡು ಹಳೆಯದಾದರೇನು?
ಭಾವ ನವ ನವೀನ.
Nice one !!!
ಬಹುಷಃ ಚೂರಾದ ಬಂಡೆಗಲ್ಲಿನ ಒಂದೊಂದು ತುಣುಕು ಸಹ ಮತ್ತದೇ ಕಲೆಯನ್ನು ಅರಳಿಸುವವಳ ಕೆತ್ತನೆಗೆ ಕಾಯುತ್ತಿರಬಹುದು..
ಚೆನ್ನಾಗಿದೆ. ಕಲ್ಲಿನಲ್ಲಿ ಕಲೆಯನ್ನು ಅರಳಿಸಲು, ಕಲ್ಲೂ ಕಲಾಕಾರರೂ ನೋವುಣಲೇ ಬೇಕು.
ವಾಹ್! ವಾಹ್! ಚೆನ್ನಾಗಿದೆ.
ಚೆನ್ನಾಗಿದೆ.
ಹಳೆ ಮದ್ಯ್ದದ ಜೊತೆ ಹೊಸ ವೈನ್ ಕೂಡ ಸೇರಿಸಿ ಒಳ್ಳೆ ಕಿಕ್ ಕೊಡೊ ಕಾಕ್ಟೇಲ್ ಕೊಡಿ ಪಬ್ಬಿಗನೂ ಎದ್ದು ಬಂದಾನು :-)
ರಾಜೇಶ್ , ಸುಪ್ತದೀಪ್ತಿ, ಭಾಗವತ, md
ಧನ್ಯವಾದಗಳು.
ಗುಬ್ಬಚ್ಚಿ,
ನನ್ನ ಬ್ಲಾಗಿಗೆ ಸ್ವಾಗತ. ಧನ್ಯವಾದಗಳು.
ಶಿವ್,
ಇರಬಹುದು . ಧನ್ಯವಾದಗಳು.
ಇಷ್ಟವಾಯಿತು ಸು-ಮನಸ್ವಿನೀ
ಪ್ರೀತಿಯಿಂದ
ಸಿಂಧು
ಸಿಂಧು ಅಕ್ಕ,
ಧನ್ಯವಾದಗಳು.
ಬಂಡೆಗಲ್ಲಾಗಿದ್ದ ನಾನು
ಈಗ ಚೂರು ಚೂರಾಗಿದ್ದೇನೆ...! kid of reality. Good one.
Post a Comment