Tuesday, October 23, 2007

ನಿನ್ನ ಕಂಗಳು

ಬಾನೊಳು ಹುಣ್ಣಿಮೆಯ ಚಂದ್ರನಂತೆ
ಅಲ್ಲೇ ಪಕ್ಕದಲ್ಲಿ
ನಗುತ್ತಿವೆ ಚುಕ್ಕಿಗಳಂತೆ
ಸುತ್ತೆಲ್ಲ ಬೆಳದಿಂಗಳ ಹಬ್ಬವಂತೆ
ಇಲ್ಲಿ ಮಿಂಚು ಹುಳುಗಳು
ದೀಪ ಹಿಡಿದು ಹಾರುತ್ತಿವೆಯಂತೆ
ಹಾಗೆನ್ನುತ್ತಿದ್ದಾರೆ ಜನರೆಲ್ಲ
ನನಗೆ ಇದ್ಯಾವ ಕುರುಡುತನ!
ಹಾಂ! ಗೊತ್ತಾಯ್ತು ಬಿಡು
ನಿನ್ನ ಜೋಡಿ ಕಂಗಳಿಲ್ಲಿ ಇಲ್ಲ ನೋಡು
ಅದಕೆ ಬರಿಯ ಕತ್ತಲು
ನಿನ್ನ ಒಂದು ನೋಟ ಸಾಕು
ಬಾಳ ದೀಪ ಬೆಳಗಲು

( ಬಹಳ ಹಿಂದೆ ಬರೆದ ಹಾಡು. ಯಾವ ತಿದ್ದುಪಡಿ ಮಾಡದೆ ಇಲ್ಲಿ ಹಾಕುತ್ತಿದ್ದೇನೆ. )

12 comments:

ಸುಶ್ರುತ ದೊಡ್ಡೇರಿ said...

ಎಲ್ಲಿ ಯುಎಸ್ಸಲ್ಲಿ ಇದ್ದಾಗ ಬರ್ದಿದ್ದಾ? ;)

Satish said...

ಹಾಡು ಅಂದ್ರಲ್ಲಾ, ಹಾಗಾದ್ರೆ ಕೇಳಿಸಿ ಮತ್ತೆ...ಆಡಿಯೋ ಹಾಕೋದ್ರ ಮೂಲಕ :-)

Kiran said...

I really liked ur post, thanks for sharing. Keep writing. I discovered a good site for bloggers check out this www.blogadda.com, you can submit your blog there, you can get more auidence.

JOMON said...

nice lines... ಬಹಳ ಹಿಂದೆ ಕೂಡ ಕೂಡ ನೀವು ಇಷ್ಟು ಚೆನ್ನಾಗಿ ಬರೀತಿದ್ರಾ? old stock ಇದ್ರೆ ಅದನ್ನು ಪೋಸ್ಟ್ ಮಾಡಿ... ನಾವು ಆಸ್ಥೆಯಿಂದ ಓದುತ್ತೇವೆ.

ಸಿಂಧು Sindhu said...

ಮನಸ್ವಿನೀ..

ಚೆನಾಗಿದೆ.
ಇಂತದೊಂದು ಕವಿತೆ ಸಾಕು ಬ್ಲಾಗತ್ತಲೆ ಕಳೆಯಲು.. :)

ಇನ್ನು ತುಂಬ ಬರಿಯವಲಾ, ಎಲ್ಲ ಮೂಲೆ ಬೆಳಗಲು..!

md said...

ಮೊದಲೇ ಹೀಗೆ ಬರೀತಿದ್ರಾ !
ಚಂದಾಗೈತಿ.
ಆದ್ರೆ ಒಂದು ಪ್ರಶ್ನೆ ಇಲ್ಲಿ- "ಮೊದಲು ಬರೆದದ್ದು ಸ್ವಲ್ಪ ಹಸಿ-ಬಿಸಿ ಅನಿಸಿದ್ರೆ ಅದನ್ನು ಮಾರ್ಪಾಟು ಮಾಡಿ ಚಿತ್ರಾನ್ನ ಉಣಿಸೋದು ಸರೀನಾ ಅಥವಾ ಇದ್ದದ್ದನ್ನು ಇದ್ದ ಹಾಗೆ ಕೊಡೋದು ಸರೀನಾ?"
Note: Your peom is quite good. I am asking this quesition as i find my old articles more raw, i kept them pending.

ಶಾಂತಲಾ ಭಂಡಿ said...

ಕವನ ಚೆನ್ನಾಗಿದೆ.
"ನಿನ್ನ ಒಂದು ನೋಟ ಸಾಕು ಬಾಳ ದೀಪ ಬೆಳಗಲು" ಎಷ್ಟು ಚಂದನೆಯ ಸಾಲು.
ಇದು ನಿಮ್ಮ ಸಾಲಾದರೆ,
ನಿಮ್ಮ ಚಂದನೆಯ ಬರವಣಿಗೆಗೆ ಇಗೋ ಇದು ನನ್ನ ಸಾಲು,
"ನಿಮ್ಮ ಒಂದು ಕವನ ಸಾಕು ಎಲ್ಲ ಮನಕೆ ಉಣಿಸಲು,
ಅದರ ಒಂದು ಸಾಲು ಸಾಕು ನಿಮ್ಮ ಬ್ಲಾಗು ಬೆಳಗಲು"

ರಾಮ್ ( ram ) said...

ತುಂಬಾ ಚನ್ನಾಗಿ ಇದೆ
ರಾಮ್

Anonymous said...

chennaagide. But not upto any of your recent ones.

Just felt that "kuruDu" instead of "kuruDutana" would have been nicer, so that lexically, it better matches the next few lines.

Also thought the last two lines depicting such intense and strong emotions are not well supported by the rest of the poem. Thought the progression was very exponential (if not abrupt) at the end.

If you have any old ones, pls do post. Not to be afraid of theorists like me :)

ಮನಸ್ವಿನಿ said...

ಸುಶ್ರುತ,

ಇಲ್ಲ ಮಾರಾಯ, ಅದಕ್ಕಿಂತ ತುಂಬಾ ಮುಂಚೆ ಬರ್ದದ್ದು. :)

ಸತೀಶ್,
ಆಯ್ತು ಸರ್ :)

ಕಿರಣ್,
ಧನ್ಯವಾದಗಳು.

JOMON,
ನನ್ನ ಬ್ಲಾಗಿಗೆ ಸ್ವಾಗತ. ಧನ್ಯವಾದಗಳು. ಹಳೆಯ ಹಾಡುಗಳನ್ನು ಹಾಕ್ತೇನೆ.

ಸಿಂಧು,
ಧನ್ಯವಾದಗಳು. ಬ್ಲಾಗತ್ತಲೆ -- ಹೊಸ ಪದ ಪ್ರಯೋಗನ? ;)


md,
ಧನ್ಯವಾದಗಳು. ಚಿತ್ರನ್ನ ಚೆನ್ನಾಗಿ ಮಾಡ್ತೀರಿ ಅಂತ ಗೊತ್ತಿದ್ರೆ, ಚಿತ್ರನ್ನವೇ ಸರಿ... :)
ನನ್ನ ಕೆಲವು ಹಳೆಯ ಹಾಡುಗಳಿಗೆ ಮಾರ್ಪಾಟು ಬೇಕಿನ್ನಿಸಿದಾಗೆಲ್ಲ ಮಾಡಿದ್ದಿದೆ.
ಕೆಲವು ಹಾಗೆ ಇರಲಿ ಅಂತ ಅನ್ನಿಸಿದ್ದು ಕೂಡ ಸತ್ಯ.

ಶಾಂತಲಾ,
ನನ್ನ ಬ್ಲಾಗಿಗೆ ಸ್ವಾಗತ. ಧನ್ಯವಾದಗಳು. ದೊಡ್ಡ ಮಾತು :)

ರಾಮ್,
ನನ್ನ ಬ್ಲಾಗಿಗೆ ಸ್ವಾಗತ. ಧನ್ಯವಾದಗಳು.ನಿನ್ನದು ಒಂದು ಬ್ಲಾಗಿದೆ ಅಂತ ನಂಗೆ ಮೊನ್ನೆ ಮೊನ್ನೆ ಅಷ್ಟೇ ಗೊತ್ತಾಯಿತು.

anonymous,
I know it is very raw....didn't want to modify it... thanks for the comment.
Yeah..will be posting old ones anyway :)

karkerac@gmail.com said...

ವಾಸ್ತವ ಮೂರ್ತ ರೂಪವನ್ನು ಭಾವನೆಗಳ ಮೂಲಕ ಹೆಣೆದ ಪರಿ ಸೂಪರ್ಬ್!ಇನ್ನೂ ಬರೀರಿ..ಬರೆಯಕ್ಕಾಗದಿದ್ರೂ ಓದೋರು, ಹಾಡಕ್ಕಾಗದಿದ್ರೂ ಕೇಳೋ ಮನುಷ್ಯ ಪ್ರಾಣಿಗಳು ನಾವು..ಥ್ಯಾಂಕ್ಯು ಮೇಡಂ

ಮನಸ್ವಿನಿ said...

@karkerac

ನನ್ನ ಬ್ಲಾಗಿಗೆ ಸ್ವಾಗತ. ಧನ್ಯವಾದಗಳು ಸರ್