ಸೆರಗಂಚಿನಿಂದ ಕಣ್ಣೀರ ಒರೆಸಿ
ನಿಮ್ಮ ಪಾದಗಳಿಗೊರಗುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಪುಣ್ಯ ಸ್ಪರ್ಶವೆಂದು
ಮೆಲ್ಲನೆ ನೀವು ಹೊಸ್ತಿಲನು ದಾಟಿ
ಕದ ಹಿಡಿದು ಹಿಂತಿರುಗಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಕಡೆಯ ಹೊನ್ನ ದಿನವೆಂದು
ಪಂಚೆಯೆತ್ತಿ ಮೆಟ್ಟಿಲನು ಇಳಿಯುತ್ತ
ಅಂಗಳದ ರಂಗೋಲಿ ನೋಡುವಾಗ
ತಿಳಿದಿರಲಿಲ್ಲ ನನಗಂದು
ಬಣ್ಣದ ಕಡೆಯ ಮೆರುಗೆಂದು
ಮಲ್ಲಿಗೆ ಬಳ್ಳಿಯಿಂದಾರಿಸಿ
ಬಿರಿದ ಮೊಗ್ಗು ನೀವು ಮುಡಿಯಿಲ್ಲಿಡುವಾಗ
ತಿಳಿದಿರಲಿಲ್ಲ ನನಗಂದು
ಬಾಳ ಕಡೆಯ ಕಂಪೆಂದು
ಅಂಗಳವ ದಾಟಿ, ಕೇರಿಯ ದಾರಿಯಲ್ಲಿ
ನೀವು ನಡೆಯುತ್ತ, ತಿರುಗುವಾಗ
ತಿಳಿದಿರಲಿಲ್ಲ ನನಗಂದು
ನಿಮ್ಮ ಕಡೆಯ ನೋಟವೆಂದು
Subscribe to:
Post Comments (Atom)
21 comments:
ಅಳಿಸಿಬಿಟ್ಟಿ ಕಣೆ.....
ಹ್ಮ್.. :(
ಹಾಯ್,
ತುಂಬಾ ದಿನ ಆಗಿತ್ತಲ್ವಾ ಇಂತ ಕವನ ಬರಿದೆನೆ!
ಮೊದಲ ಸಲ ಓದಿದಾಗ ಸ್ವಲ್ಪ confuse ಆದ್ರೂ, ಆಮೇಲೆ ಅರ್ಥ ಆಯ್ತು :)
good one!
ಮನಸ್ವಿನಿ,
ನಮ್ಮ ಮನೆಗೆ ಭೇಟಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು
ತಪ್ಪನ್ನು ಸರಿಪಡಿಸಿದ್ದೇನೆ. ಅದು ಟೈಪಿಸೋದ್ರಲ್ಲಿ ತಪ್ಪಾಗಿತ್ತು :-)
ಹೊಸ ಮಗು (ಕವನ)ಬಂದಿದೆ ನಿಮ್ಮ ಮನೆಯಲ್ಲಿ !
ಇನ್ನೊಮ್ಮೆ ಬಂದು ಮಾತಾಡಿಸಿ ಹೋಗುವೆ :-)
Magale naanu, shaanu..enidu ishtondu emotional kavana..tumba chennagide..Hats off. Ninge phone maadteeni weekendnalli. TC.
ಮನಸ್ವಿನಿ,
ಇದೇನು ಒಗಟು? ಹೇಗೆ ಬಿಡಿಸೋದು? ನಿಮ್ಮೂರಲ್ಲಿ ನೀರು ಕಡಿಮೆಯಾದರೆ, ಕಣ್ಣೀರು ಬರಿಸೋ ಕವನಗಳನ್ನು ಹಾಕಿದ್ರಾಯ್ತು ಅಂತ ನಿರ್ಧಾರ ಮಾಡಿದ್ದೇಕೆ?
ಮನಸ್ವಿನಿ,
ಸುಂದರ ಭಾವಗೀತೆ.
ಯಾಕೋ ಈ ಮನುಷ್ಯ ಜೀವಿಯೇ ವಿಚಿತ್ರ ನೋಡಿ.
ಇದ್ದಾಗ ಅದರ ಮಹತ್ವ ತಿಳಿಯದೆ ಟೇಕನ್ ಫಾರ್ ಗ್ರಾಂಟೆಡ್ ಅಂದುಕೊಂಡುಬಿಟ್ಟಿರುತ್ತೇವೆ, ಮರೆಯಾದ ಕ್ಷಣವೇ ಅದರ ತುಡಿತ ಹೆಚ್ಚಾಗುತ್ತದೆ. ಅದರ ಮಹತ್ವ ತಿಳಿಯುತ್ತೆ.
nice one really !
ಚೆನ್ನಾಗಿದೆ.
ನನ್ನ ಬ್ಲಾಗ್ ಫ್ರೆಂಡ್,
http://kavimanasu.blogspot.com/
ಬಸು,
sorry :(
ಸುಶ್ರುತ,
:(
ಪ್ರಮೋದ್
Thanks :)
md,
ಹೌದು.. ನೀವು ಹೇಳಿದ್ದು ಸತ್ಯ. ಹಾಡನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.
ಶಾನು,
ನಿನ್ನ comment ಓದಿ ತುಂಬಾ ತುಂಬಾ ಖುಶಿ ಆಯ್ತು :)
ಅನ್ವೇಷಿಗಳೆ,
ಒಗಟು ಬಿಡಿಸಿ, ಬಹುಮಾನ ಗೆಲ್ಲಿ :)
ಕಣ್ಣೀರು ಬರಿಸೋದಾ!! ಹಾಗೇನಿಲ್ಲ :)
ಶ್ರೀನಿವಾಸರವರೇ,
ನನ್ನ ಬ್ಲಾಗಿಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.
ಮತ್ತೆ, ಯಾಕ್ ಬರೀತಾ ಇಲ್ಲ ಇತ್ತೀಚೆಗೆ?!
ಯಾಕೀ ವಿಷಾದ ರಾಗ? ಓದಿ ಹೃದಯ ಭಾರವಾಯ್ತು .
well written.. brought tears in my eyes ....
ಸು-ಮನಸ್ವಿನಿ,
ಓದಿದ ಕೂಡಲೇ ಪ್ರತಿಕ್ರಿಯೆ ಬರೆಯಲಾಗಲಿಲ್ಲ.
ಇವತ್ತು ಮತ್ತೆ ಓದುವಾಗಲೂ ಅವತ್ತು ಮೂಡಿದ ಆರ್ದ್ರತೆಯೇ ಮನದ ತುಂಬಾ.
ಚೆನ್ನಾಗಿದೆ.
ಯಾಕೆ ಬೇರೆ ಏನೂ ಬರೆದಿಲ್ಲ ಇತ್ತೀಚೆಗೆ?
ಸತೀಶ್, ಸಿಂಧು,
ಬರೆಯುತ್ತೇನೆ. ಧನ್ಯವಾದಗಳು. :)
ಚಿರವಿರಹಿ,
ಧನ್ಯವಾದಗಳು. ವಿಷಾದ ಯಾಕೆ ಅಂತ ಗೊತ್ತಿಲ್ಲ..:(
reborn,
ಧನ್ಯವಾದಗಳು.
ಇನ್ನೂ ಅವನ ಹುಡುಕಾಟದಲ್ಲೇ ಇದ್ಯಾ? ಹಾಗೆ ಸ್ವಲ್ಪ ಬಿಡುವು ಮಾಡ್ಕೊಂಡು ಬ್ಲಾಗ್-ನಲ್ಲಿ ಹೊಸ ಕವನ ಬರಿ.
ಕರವಸ್ತ್ರ ಹಾಳಾಗಿದೆ. ಹಾಗಾಗಿ ಅಳಲಿಕ್ಕೆ ಆಗಲ್ಲ. ಒಳ್ಳೆ ಪ್ರೇಮಕವನ ಬರಿ.
kavana chennagide...
ದಾರಿ ಕಾದದ್ದು ಸಾಕು.
ಹೊಸ ಕವಿತೆ ಬರೆಯಿರಿ ಬಹುಶಃ ಅದನ್ನು ಓದೋ ನೆಪದಿಂದಾದರೂ ಬಂದಾನೂ...
ಸುಂದರ ಕವನ. ಸುಂದರ ಪದಗಳು. ಬಹಳ ಮೆಚ್ಚಿಕೊಂಡೆ.
ಕವನದಲ್ಲಿ ಕಡೆಯ ನೊಟ ಆದರೆ ನನಗೆ ಮಾತ್ರ ಮೊದಲನೆಯದು...
ಕವಿತೆ ಶಕ್ತಿಯೇ ಇದು, ಹೆಳೊಕಾಗ್ದೆ ಇರೊದನ್ನ, ತು೦ಬ, ತು೦ಬ ಹೆಳಲೇ ಬೇಕಾಗಿರೊದನ್ನ ಎನಕ್ಕೂ ಕಮ್ಮಿ ಆಗದ೦ತೆ ಹೆಳೊದು. ಅದನ್ನ ನೀವು perfect ಆಗಿ ಮಾಡಿದ್ದೀರ. ದೋಣಿ ಸಾಗಲಿ....
ಭಾಗವತ,
ಯಾರ ಹುಡುಕಾಟ?
ದಿನೇಶ್, ಸ್ವಗತ
ನನ್ನ ಬ್ಲಾಗಿಗೆ ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.
md,
:)
ರಾಜೇಶ್,
ತುಂಬಾ ಧನ್ಯವಾದಗಳು.
madam please send me ur mail ID... I have become great fan of you.... sukshma bhavanegalanna chennagi etti thoristhira... surajchandargi.blogspot.com is my blog....
Post a Comment