ನಮ್ಮ ಅಮ್ಮ ,ಸೋದರ ಅತ್ತೆ ಉಪಯೋಗಿಸೋ ಕೆಲವು ಗಾದೆಗಳು/ನಾಣ್ಣುಡಿ..ನಾನು ಈ ಗಾದೆಗಳನ್ನೆಲ್ಲ ಅವರ ಬಾಯಲ್ಲೆ ಮೊದ್ಲು ಕೇಳಿದ್ದು . ಗಾದೆ ಉಪಯೋಗಿಸೊ ಸಂದರ್ಭ ಬಂದಾಗೆಲ್ಲ, ಅದೇನೋ ಅಂತಾರಲ್ಲ ಅಂತ ಹೇಳಿ ಆಮೇಲೆ ಗಾದೆ ಹೇಳೋದು ನಮ್ಮ ಅಮ್ಮನ ರೂಢಿ.
೧. ಶೆಟ್ಟಿ ಹತ್ರ ಕಷ್ಟ ಹೇಳ್ಕೊಂಡ್ರೆ,ನಾಲ್ಕಾಣೆ ಇಟ್ಟು ಹೋಗು ಅಂದಿದ್ನಂತೆ ( ಶೆಟ್ರೆಲ್ಲಾ ಬೇಜಾರು ಮಾಡ್ಕೋಬೇಡಿ, ಇದು ಯಾವ ಕಾಲದ್ದೊ! :) )
೨. ತನ್ನ ಬಗುಲಲ್ಲಿ ಆನೆ ಸತ್ರು ಪರ್ವಾಗಿಲ್ಲ,ಬೇರೆಯವ್ರ ತಟ್ಟೆಲಿ ನುಶಿ ಸತ್ತಿದ್ದು ಕಾಣುತ್ತೆ ಇವರಿಗೆ ( ನುಶಿ = ಸೊಳ್ಳೆ)
೩. ಮಾಡೋದು ದುರಾಚಾರ,ಮನೆ ಮುಂದೆ ಬೃಂದಾವನ
೪. ವಾರಗಿತ್ತಿ ಎಂದಿದ್ರೂ ದಾರಿ ಮುಳ್ಳು
೫ ರೋಣಿ ಮಳೆ ಹೊಯ್ದರೆ,ಓಣಿಯೆಲ್ಲಾ ಕೆಸರು
೬. ಸೋಜಿಗದ ಬೆಕ್ಕು ಮಜ್ಜಿಗೆ ಆಮ್ರ ಕುಡಿದಿತ್ತಂತೆ ( ಆಮ್ರದ ಅರ್ಥ ಗೊತ್ತಿಲ್ಲ, ನಮ್ಮ ಅಮ್ಮ ಸಿಟ್ಟು ಬಂದಾಗ ಈ ಗಾದೆ ಹೇಳೊದು ಜಾಸ್ತಿ, ಆಗ ನನ್ನ ಹತ್ರ ಅರ್ಥ ಕೇಳೋಕೆ ಆಗಲ್ಲಪ್ಪ )
೭. ಮುನ್ನೋಡಿ ಪಾಯಸ ಉಣ್ಣೊ ಮೂಳಾ ಅಂದ್ರೆ ಅವ ಯಾವ ಹೊಲದ ಗಸಗಸೆ ಅಂದ್ನಂತೆ
೮. ಹಾಡಿದ್ದೇ ಹಾಡೋ ಕಿಸ್ಬಾಯಿ ದಾಸ
೯. ಮದುವೆಯಾಗೋ ಬ್ರಾಹ್ಮಣ ಅಂದ್ರೆ ನೀನೆ ನನ್ನ ಹೆಂಡತಿ ಅಂದ
೧೦.ನವಿಲು ಕುಣಿಯುತ್ತೆ ಅಂತ ಕೆಂಭೂತ ಕುಣಿಯೋಕಾಗತ್ತ? (ಅಲ್ವಾ ಮತ್ತೆ ?)
೧೧.ಮನೇಲಿ ಗದ್ಲ ಅಂತ ಮಂಜ್ಗುಣಿ ತೇರಿಗೆ ಹೋಗಿದ್ರಂತೆ
೧೨.ಬೇರೆಯವ್ರ ಮನೆ ಎಮ್ಮೆ ಸಗಣಿನೂ ರುಚಿನೆ ಇವ್ರಿಗೆ ( ಯಾರಿಗೆ? ನಂಗೊತ್ತಿಲ್ಲ )
೧೩.ಓಡ್ಹೋಗುವನ ಚಡ್ಡಿ ಹರಕಂಡಷ್ಟೆ ಲಾಭ.
೧೪ ತಾನೂ ತಿನ್ನ,ಪರರಿಗೂ ಕೊಡ.
೧೫ ಆರು ಕೊಟ್ರೆ ಅತ್ತೆ ಕಡೆ,ಮೂರು ಕೊಟ್ರೆ ಮಾವನ ಕಡೆ
೧೬.ಬಡ ದೇವ್ರನ್ನ ಕಂಡ್ರೆ ಬಿಲ್ಪತ್ರೆನೂ ಭುಸ್ ಅನ್ನುತ್ತೆ
Subscribe to:
Post Comments (Atom)
24 comments:
ಹ ಹ ಚೆನ್ನಾಗಿದೆ collections.. ನಂಗೂ ಒಂದೆರಡು ನೆನಪು ಬರ್ತಾ ಇದೆ.. ಅಜ್ಜಿ ಹೇಳ್ತಾ ಇದ್ದಿದು
ಅಬ್ಬೆಗೆ ಅರಿವೆ ಚಿಂತೆ ಆದ್ರೆ ಮಗ್ಳಿಗೆ ...... ಚಿಂತೆ
ಮಕ್ಳು ಇರುವಲ್ಲಿ ನನ್ನ ಹೂಳ್ಬೇಡಿ ಅಂತ ಬ್ಯಾರಿ ಹೇಳ್ತಾ ಇದ್ದ ಅಂತೆ
ಉತ್ತರ ಕನ್ನಡದ ಮತ್ತೊಂದು ಫೇಮಸ್ ಗಾದೆಯೆಂದ್ರೆ ಊರ್ಗೊಂದಾದ್ರೆ ಪೋರ್ಗೊಂದು - ಊರಿಗೆ ಒಂದು ರೀತಿಯಾದ್ರೆ ... ಈ ಪೋರ(ಹುಡುಗ/ಹುಡುಗಿ)ನಿಗೊಂದು ಬೇರೇನೆ.
ನೀವು ಅಮ್ಮ ಹೇಳಿದ್ದ ಅಷ್ಟೂ ಗಾದೆಗಳನ್ನು ನೆನಪಿಟ್ಟುಕೊಂಡಿದ್ದು ಗ್ರೇಟ್.
soopar collection
ವಾ ವಾ ವಾ - ಗಾದೆಗಳಲ್ಲೂ ಫಸ್ಟ್ ಕ್ಲಾಸ್ - ಎಷ್ಟೋ ಗಾದೆಗಳನ್ನು ನಾನು ಕೇಳೇ ಇರ್ಲಿಲ್ಲ.
ವಂದನೆಗಳು
:))
ಅಮ್ರ ಅಂದರೆ ಬಹುಷಃ ಮಜ್ಜಿಗೆ ಹುಳಿ ಇರಬಹುದೇ??
ಆರು ಕೊಟ್ಟರೆ ಅತ್ತೆ ಕಡೆ ಮೂರು ಕಡೆ ಸೊಸೆ ಕಡೆ ಅಂತಾ ನಮ್ಮ ಕಡೆ ಇದೆ
ಎಷ್ಟೋಂದು ಗಾದೆಗಳ್ನ ಕೇಳೇ ಇರ್ಲಿಲ್ಲ. ದನ್ಯವಾದಗಳು.
ಹಾ.. ನನಗೀಗ ಒಂದು ನೆನಪಿಗೆ ಬಂತು: "ಅಂತಿತವ್ರು ಸೇರಿ ಸಂತೆಗೋದ್ರೆ, ಸಂತೆಲ್ಲಿ ಅಂತವ್ರ್ ಇಬ್ರಿದ್ರಂತೆ" :)
ಗಾದೆ ಬಗ್ಗೆ ಬ್ಲಾಗ್ ನೋಡಿ ಬಹಳ ಸಂತಸ ಆಯಿತು, ಈ ಹಿಂದೆ ನಾನು ಕೂಡ ಬ್ಲಾಗಿಸಿದ್ದೆ.
ಭಾಗ -೧
http://chum-banavaasi.blogspot.com/2006/11/blog-post.html
ಭಾಗ -೨
http://chum-banavaasi.blogspot.com/2006/11/blog-post_05.html
ಈ ಬಾರಿ ಪೂರ್ತಿ ಅಂಕ(!) ನಿನ್ನ ಅಮ್ಮಂಗೆ....
collection ಮಾಡಿದ್ದಕ್ಕೆ ನಿನಗೆ thanks....
namaskara,
tamma blog link orkutalli sikkitu.. tamma gadegala post nannanu nanna shala dinigalanna nenapisitu :)
vandanegalu :)
poornima.
ps: visit me at http://www.poornimaprabhu.blogspot.com
ರೀ ಮನಸ್ವಿನಿ ರವರೆ,
ನಿಮ್ಮ ಅಮ್ಮನ ಗಾದೆಗಳು ನನಗೆ ನಮ್ಮ ಅಜ್ಜೆಯ ನೆನಪು ತಂದಿದೆ..!!
ಓಳ್ಳೆಯ ಕಲೆಕ್ಷನ್
-ಯುವಪ್ರೇಮಿ
ಪ್ರೇಮ ಕವಿತೆಗಳು ಎಲ್ಲಿ?
ವಿಜೇಂದ್ರ,
ಪ್ರತಿಕ್ರಿಯೆಗ ಧನ್ಯವಾದಗಳು. "ಮಕ್ಳು ಇರುವಲ್ಲಿ ನನ್ನ ಹೂಳ್ಬೇಡಿ ಅಂತ ಬ್ಯಾರಿ ಹೇಳ್ತಾ ಇದ್ದ ಅಂತೆ " ಅರ್ಥ ಆಗಿಲ್ಲ. ದಯವಿಟ್ಟು ತಿಳಿಸುವಿರಾ?
ರಾಜೇಶ್,
"ಊರ್ಗೊಂದಾದ್ರೆ ಪೋರ್ಗೊಂದು" - ಕೇಳಿದ್ದೇನೆ . ಅಮ್ಮನ ಗಾದೆಗಳು ಇನ್ನೂ ಎಷ್ಟೆಲ್ಲಾ ಇವೆ. ಸಮಯಕ್ಕೆ ತಕ್ಕಂತೆ ನೆನಪಿಗೆ ಬರುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು
ಜಯಂತ್,ತವಿಶ್ರೀ ಸರ್,
ಧನ್ಯವಾದಗಳು
ಶಿವ್,
ಅಮ್ರ ಅಂದ್ರೆ ಮಜ್ಜಿಗೆ ಹುಳಿ ,ಮಜ್ಜಿಗೆ ಅಂಬ್ಲಿ ಅಂತೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಚೇತನ್,
ನನ್ನ ಬ್ಲಾಗಿಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು."ಅಂತಿತವ್ರು ಸೇರಿ ಸಂತೆಗೋದ್ರೆ, ಸಂತೆಲ್ಲಿ ಅಂತವ್ರ್ ಇಬ್ರಿದ್ರಂತೆ" :) ಚೆನ್ನಾಗಿದೆ
ಪವ್ವಿ,
ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರಮೋದ್,
ಆಯ್ತು, ನಿನ್ನ ಅಂಕ ಅಮ್ಮಂಗೆ ತಿಳಿಸ್ತೇನೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಯುವಪ್ರೇಮಿ,
ನನ್ನ ಬ್ಲಾಗಿಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು
ಭಾಗವತರೇ,
ಪ್ರೇಮ ಕವಿತಗಳು . ಬರುತ್ತವೆ :)
ಪ್ರೇಮ ಕವಿತೆಗಳು ಬರತ್ತಾ? ಯಾವಾಗ? ಕಾದು ಕಾದು ಸುಸ್ತಾಯ್ತು
ಇವತ್ತೂ ಏನೂ ಬರ್ದಿಲ್ಲ. ಪ್ರೇಮ ಕವಿತೆಗಳು ಎಲ್ಲಿ? ಎಲ್ಲಿ? ಎಲ್ಲಿ?
ಎಲ್ಲಿ? ಎಲ್ಲಿ? ಎಲ್ಲಿ? ಬಸ್ ತಪ್ಪಿ ಹೋಯ್ತಾ?:-))
??????
ಕೊನೇಯಲ್ಲಿರುವ ಗಾದೆ (16ನೇದು) ಇಲ್ಲಿ ಅನಿಸಿಕೆ ಬರೆದ ಯಾರಿಗೋ ಒಬ್ಬರಿಗೆ ಅನ್ವಯ ಆಗುವ ಹಾಗಿದೆ! ಯಾಕ್ರೀ ತಲೆ ಕೊರೀತೀರ?
ಪೂರ್ಣಿಮಾ,
ನನ್ನ ಬ್ಲಾಗಿಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು
ಭಾಗವತ,
ತಡ್ಕೋಳಪ್ಪ
ಅನಾನಿಮಸ್
:))
ನಮ್ ಉತ್ತರ ಕರ್ನಾಟಕದ ಒಂದೆರಡು "ಶ್ಲೋಕ"ನು ಸೇರಿಸಿ ಬರೆದಿದ್ದ್ರರ ಅದರ ಗಮ್ಮತ್ತೆ ಬೇರೆ ಇರುತಿತ್ತು ನೊಡ್ರಿ.ವಿಭಿನ್ನ ಪ್ರಯತ್ನಕ್ಕೆ ಸ್ವಾಗತ.ಕೆಲ ಗಾದೆ ಮಾತುಗಳ ತಲೆ ಬುಡಾನು ತಿಳಿಲಿಲ್ಲಾ..
ಚಿರವಿರಹಿ,
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು. ಉತ್ತರ ಕರ್ನಾಟಕದ ಶ್ಲೋಕ !! :) ಯಾವುದರ ತಲೆ, ಯಾವುದರ ಬುಡ ಅರ್ಥ ಆಗಿಲ್ಲ?
"Roni Male" andhre gotta? "Rohini Nakshatra" da Male antha....
Matte hale kavithe galu ealli??
aamra annuvudu bahushah aamla padada apabhrmsha irabahudu anisutte. amla andare acid - huli.
ನಿಮ್ಮ ಗಾದೆಗಳನ್ನ ಎತ್ತಿಕೊಂಡು ವಿಕಿಕೋಟ್ಸ್ ಗೆ ಸೇರ್ಸಿದೀನಿ. :)
ಉತ್ತರ ಕನ್ನಡದ ಗಾದೆಗಳು
ಅನುಮತಿ ಕೊಡ್ತೀರಲ್ವಾ? :)
Post a Comment