Sunday, March 18, 2007

ದಡದಿಂದ ದಡಕೆ

ಕಡಲ ಈ ತೀರದಲಿ
ನನ್ನ ಬೆರೆಳಂಚು,ಉಸುಕಿನಲಿ
ಬರೆದದ್ದೆಲ್ಲಾ ನಿನ್ನ ಹೆಸರೆ
ಸೊಂಯ್ಯನೆ ಹರಿದು ಬರುವ ತೆರೆ
ನಿನ್ನ ಹೆಸರ ಕುಡಿಯೆ,ಎನಗೆ ಅಳುಕಿಲ್ಲ
ಆ ದಡದ ಅಲೆಯಲ್ಲಿ
ಸಿಕ್ಕಿರಬೇಕಲ್ಲಾ,ನಿನಗೆ ನನ್ನ ಒಲವೆಲ್ಲ!

29 comments:

ಸುಪ್ತದೀಪ್ತಿ suptadeepti said...

ಚಿಕ್ಕ-ಚೊಕ್ಕ ಸಾಲುಗಳಲ್ಲಿ ಮೃದು ಮಧುರ ಭಾವಗಳು; ಚೆನ್ನಾಗಿದೆ.

ಸುಪ್ತದೀಪ್ತಿ suptadeepti said...

ಮನಸ್ವಿನಿ, ನಿನಗೂ, ನಿನ್ನ ಓದುಗ ಬಳಗಕ್ಕೂ, ನಿನ್ನ ಮನೆಮಂದಿಗೂ ಯುಗಾದಿ ಹಬ್ಬದ ಶುಭಾಶಯಗಳು.

Shiv said...

ಮನಸ್ವಿನಿ,

ಸುಂದರ ಭರವಸೆಯುಕ್ತ ಸಾಲುಗಳು..
ಉಸುಕಿನಲಿ ಬರೆದ ಹೆಸರು ತೆರೆ ಅಳಿಸಿದರೂ ಹೃದಯದಿ ಬರೆದ ಹೆಸರು ತೆರೆ ಅಳಿಸಲಾದಿತೇ..

ಮನಸ್ವಿನಿ said...

ಸುಪ್ತದೀಪ್ತಿ,

ಹಾಡನ್ನು ಮೆಚ್ಚಿಕೊಂಡದಕ್ಕೆ ಧನ್ಯವಾದಗಳು.
ನಿಮಗೂ ಯುಗಾದಿಯ ಶುಭಾಶಯಗಳು.

ಮನಸ್ವಿನಿ said...

ಶಿವ್,

ಹೌದು .ಮನಸ್ಸಿನಲ್ಲಿ ಬರೆದ ಹೆಸರನ್ನ ಯಾರು ಅಳಿಸೋಕೆ ಆಗೊಲ್ಲ . ಧನ್ಯವಾದಗಳು.

Phantom said...

ಚೊಲೊ ಇದ್ದು ಕವನ. ಕಲ್ಪನೆ ಕೂಡ ಅಗಾಧವಾಘಿದ್ದು. ಆದರೆ, ನನ್ ಬಯ್ಯಲಾಗ, ಭಾಗವತ ಹೇಳೋದು ಸರಿ ಇರ್ತು :ನಾ

ಇಂತಿ
ಭೂತ

ಸಿಂಧು sindhu said...

chandada kavana.. nimma baravaNige aptavaagide.. :)

Shree said...

ಆ ದಡದ ಅಲೆಯಲ್ಲಿ
ಸಿಕ್ಕಿರಬೇಕಲ್ಲಾ,ನಿನಗೆ ನನ್ನ ಒಲವೆಲ್ಲ!...
imagination.. ತು೦ಬಾ ಹಿಡಿಸ್ತು.

ಮನಸ್ವಿನಿ said...

ಭೂತಪ್ಪ,

ಹಾಡು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು ...ನೀನು ಯಾರ ವಕೀಲ ಅಂತ ಗೊತ್ತಾತ್ ಬಿಡು ....:)

ಮನಸ್ವಿನಿ said...

ಸಿಂಧು,

ನನ್ನ ಬ್ಲಾಗಿಗೆ ಸ್ವಾಗತ. ತುಂಬಾ ಧನ್ಯವಾದಗಳು. :)

ಮನಸ್ವಿನಿ said...

ಶ್ರೀ,

ಹಾಡನ್ನ, ಕಲ್ಪನೆಯನ್ನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು :)

Anveshi said...

ಹೌದು...
ಹೃದಯದ "ಬರೆ"ಯನ್ನು ಈ ತೆರೆ ಅಳಿಸಲಾದೀತೇ???

ಶ್ರೀನಿಧಿ.ಡಿ.ಎಸ್ said...

ಮನಸ್ವಿನಿ,
ಚೆನ್ನಾಗಿದೆ!!:)

ಮನಸ್ವಿನಿ said...

ಅನ್ವೇಷಿಗಳೆ,

ನಂಗೆ ಗೊತ್ತಿಲ್ಲ :)

ಮನಸ್ವಿನಿ said...

ಶ್ರೀನಿಧಿ,

ಧನ್ಯವಾದಗಳು :)

ರಾಧಾಕೃಷ್ಣ ಆನೆಗುಂಡಿ. said...

ಚೆನ್ನಾಗಿ ಬರೆದಿರುವಿರಿ, ಕಡಲ ನಾಡಿನಲ್ಲಿ ಹುಟ್ಟಿ ಬೆಳೆದ ನಮಗೆ ಕಡಲ ಅಲೆಯ ಹಠ ನಾವು ಕಂಡವರು, ಆದರೆ ನಿಮ್ಮ ಸಾಲುಗಳು ಮತ್ತೆ ಮತ್ತೆ ನಮ್ಮನ್ನ ಕಡಲ ಕಿನಾರೆಯತ್ತ ಕೊಂಡು ಹೋಯಿತು.
ಪ್ರೀತಿ ಪಾತ್ರರ ಹೆಸರನ ಕೊಚ್ಚಿ ಹೋದಾಗ ಕೋಪ ಮಾಡದೇ ಅಲೆಯ ಅಬ್ಬರಕ್ಕೊಂದು ಸವಾಲದ ಕವನದ ಸಾಲು ತುಂಬಾ ಇಷ್ಟವಾಯಿತು.
ಮತ್ತೆ ಮತ್ತೆ ಬರೆಯುತ್ತಿರಿ, ಕಡಲ ಕಿನಾರೆಯಲ್ಲಿ ಅಲ್ಲ ಬ್ಲಾಗಿನಲ್ಲಿ.

http://radhakanasupreethi.blogspot.com -ಇದು ನನ್ನ ಬ್ಲಾಗಿಗೆ ಭೇಟಿ ಕೊಡಲು ದಾರಿ.

Jagali bhaagavata said...

ಡಿಸೆಂಬರ್-ನಲ್ಲಿ ಮಲ್ಲಿಗೆಯ ದಂಡೆ ಹೆಣೆಯುತ್ತಿದ್ದ ನಾಯಕಿ, ಕಳೆದ ತಿಂಗಳು ಹೊಳೆಯ ದಂಡೆಗೆ ಬಂದಿದ್ದಳು. ಈಗ ನೋಡಿದರೆ ಸೀದ ಕಡಲ ದಂಡೆಗೆ ಬಂದು ನಿಂತಿದ್ದಾಳೆ. ೪ ತಿಂಗಳಲ್ಲಿ ೨ ಭಡ್ತಿ:-))

ಮುಂದಿನದು ವಿರಹ ಕವನ ಇರಬೇಕು ಅಂತ ನಮ್ಮ ವಿಶೇಷ ತಜ್ಞರು ತಿಳಿಸಿದ್ದಾರೆ:-))

ಮನಸ್ವಿನಿ said...

ರಾಧಕೃಷ್ಣರವರೇ,

ಹಾಡನ್ನು ಮೆಚ್ಚಿಕೊಂಡದಕ್ಕೆ ಧನ್ಯವಾದಗಳು.
ಆಯ್ತು ನಿಮ್ಮ ಬ್ಲಾಗನ್ನು ನೋಡುತ್ತೇನೆ.

ಮನಸ್ವಿನಿ said...

ಭಾಗವತರೇ,

ಹೌದು! ಆಗಾಗ ನಾಯಕಿಗೆ ಬಡ್ತಿ ಕೊಡ್ತಾ ಇರ್ತೀನಿ..
ಮುಂದಿನ ಕವಿತೆ ಯಾವುದೆಂದು ಕಾದು ನೋಡಿ.ನಿಮ್ಮ ವಿಶೇಷ ತಜ್ಞರಿಗೂ ತಿಳಿಸಿಬಿಡಿ.

ಜಯಂತ ಬಾಬು said...

ಅಧ್ಬುತ ಕಲ್ಪನೆ..ಸೊಗಸಾದ ಶೈಲಿ..ತುಂಬಾ ಚೆನ್ನಾಗಿದೆ

ಮನಸ್ವಿನಿ said...

ಜಯಂತ್,

ತುಂಬಾ ಧನ್ಯವಾದಗಳು.

ಭಾವಜೀವಿ... said...

ಒಳ್ಳೆಯ ಕಲ್ಪನೆ!!
ಕಡಲು ಒಂದು ಅನಂತತೆ ಹಾಗೂ ಆಳಕ್ಕೆ ಪ್ರತೀಕ, ಅದಕ್ಕೆ ಹೋಲಿಕೆ ಪ್ರೀತಿಯೇ ಸರಿ. ಅದೂ ಅನವರತ!
ಅದಕ್ಕೆ ನನಗೆ ಇಂದಿಗೂ ಸಮುದ್ರವೆಂದರೆ ಅಷ್ಟು ಇಷ್ಟ, ಅದೂ ಸಂಜೆಯ ಕಡಲೆಂದರೆ.. ಒಹ್.. ಒಂದು ಮಧುರ, ಪ್ರಶಾಂತ, ಮನಸ್ಸಿಗೆ ಮುದನೀಡುವ ಅನುಭೂತಿ!! ಸದಾ ಅಲ್ಲೇ ಭೋರ್ಗರೆವ ಸದ್ದಾಲಿಸುತ್ತಾ ಕೂರಬೇಕೆಂಬ ಬಯಕೆ..
ಧನ್ಯವಾದಗಳು ಮನಸ್ವಿ ನಿ, ಈ ಸುಂದರ ಸಾಲುಗಳನ್ನು ಕಟ್ಟಿಕೊಟ್ಟಿದ್ದಕ್ಕೆ! ಹಾಗೂ ನನ್ನ ಕೆಳಗಿನ ಸಾಲುಗಳು ಇದರಿಂದ ಸ್ಫೂರ್ತಿಗೊಂಡು ಉಗಮಿಸಿದ್ದರಿಂದ ಅದನ್ನೂ ಸಹ ಇಲ್ಲೇ ಸಮರ್ಪಿಸುತ್ತಿದ್ದೇನೆ. ಅದಕ್ಕಾವ ಶಿರೋನಾಮಯ ಹಂಗೂ ಬೇಡವೆನಿಸುತ್ತದೆ..!!

ಬಿಡಬೇಡ ನಿನ್ನ ಒಲವನ್ನ
ಆ ಅಲೆಗಳಂಚಿನಲಿ,
ಯಾರ ಹಂಗಿಗೋ,
ಯಾವ ಬಿರುಗಾಳಿಯೋ
ಮತ್ತಾವ ತೀರಕ್ಕೋ
ತೇಲಿಸಿ ಬಿಡಬಹುದು..
ಅದು ಮರಳ ದಿಬ್ಬವಾಗದೆ
ಕತ್ತಲಲ್ಲಿ ತಡಕಾಡುವ ನನಗೆ
ದಡದಲ್ಲಿನ ದಾರಿದೀಪವಾಗಿ
ನಿನ್ನ ಬಳಿಯೆ ಇರಲಿ
ನಾನೆ ದೋಣಿಯಾಗಿ
ತಲುಪುತ್ತೇನೆ ನಿನ್ನನ್ನು!

ಮನಸ್ವಿನಿ said...

ಭಾವಜೀವಿ,

ಮೊದಲಿಗೆ ಹಾಡನ್ನು ಮೆಚ್ಚಿಕೊಂಡದಕ್ಕೆ ಧನ್ಯವಾದಗಳು.

ನೀನು ಬರೆದ ಹಾಡು ಚೆನ್ನಾಗಿದೆ. ಸುಂದರವಾದ ಕಲ್ಪನೆ.

ನಿನ್ನ ಬಳಿಯೆ ಇರಲಿ
ನಾನೆ ದೋಣಿಯಾಗಿ
ತಲುಪುತ್ತೇನೆ ನಿನ್ನನ್ನು!


ಯಾರನ್ನು? ;)

bhadra said...

ಮನದಿಂಗಿತವ ಉಸುಕಿನಲಿ ಬರೆದುದು ನೀರು ಅಳಿಸಿದರೇನಂತೆ,
ಮನದಲಿ ಅಚ್ಚಳಿಯದಂತೆ ಭಾವವು ಛಾಪೊತ್ತಿದೆ.
ಅದನು ಅಳಿಸಲಾಗುವುದೇ?
ಮನವೇ ಸಾಗರ,
ಚಿಂತನೆಗಳೇ ಅಲೆಗಳು,
ಇಂಗಿತವೇ ಇಂಕಾಗಿ
ಅಳಿಸಲಾರದ ಬರಹ ಮೂಡಲಿ

ಬತ್ತಲಾರದ ಆ ಸಾಗರದಿ,
ಬುಗ್ಗೆ ಏಳುವ ಅಲೆಗಳು
ಅಳಿಸಲಾಗದ ಬರಹಕೆ
ವೈರಿಯಾಗದಿರಲಿ
ಬರಹ ಚಿರಂಜೀವಿ ಆಗಿರಲಿ

Vijendra ( ವಿಜೇಂದ್ರ ರಾವ್ ) said...

ಭಾವಜೀವಿಯವರಿಂದ ನಿಮ್ಮ ಕವನಗಳ ಬಗ್ಗೆ ಕೇಳಿ ನಿಮ್ಮ ಬ್ಲೋಗ್ ನೋಡಿದೆ.
ಖಂಡಿತ ಏನೂ ಮೋಸವಾಗಿಲ್ಲ.. ಎಲ್ಲ ಕವನ ತುಂಬಾ ಚೆನ್ನಾಗಿದೆ..
ಹೀಗೆ ಬರೀತಾ ಇರಿ.
ನಿಮಗೆ ನನ್ನ ಹಾರೈಕೆಗಳು

Pramod P T said...

ಅಳ್ಟಿಯಾಗಿದೆ ಕಣೆ! :)

ಅಳ್ಟಿ=ಸಕ್ಕತ್

ಮನಸ್ವಿನಿ said...

ತವಿಶ್ರೀ ಸರ್,
ಧನ್ಯವಾದಗಳು

ವಿಜೇಂದ್ರರವರೇ,
ನನ್ನ ಬ್ಲಾಗಿಗೆ ಸ್ವಾಗತ. ತುಂಬಾ ಧನ್ಯವಾದಗಳು. ಬರೆಯುತ್ತಾ ಇರ್ತೀನಿ

ಪ್ರಮೋದ್,
ಧನ್ಯವಾದಗಳು. ಅಳ್ಟಿ!ಹೊಸ ಪದ ಪ್ರಯೋಗನಾ :)

ಸುಪ್ತದೀಪ್ತಿ suptadeepti said...

"ಅಳ್ಟಿ" / "ಅಲ್ಟಿ" ಕೇಳಿದ್ದೆ, ಅಲ್ಟಿಮೇಟ್ ಪದದ ಹೃಸ್ವರೂಪ, ಅಲ್ಲವೇ ಪ್ರಮೋದ್?

Anonymous said...

Modalaneyadaagi angla lipi yalli bareyuthiruvudakke kshame yaachisuve.

Kavanada shailiyu kalpanegu meeriddu..Kavanavannu oduthiddanthe manasu kadala prayaana madi banthu..Kavanada koneyallina ashavadada ingitha thumaba hidisithu. Olumeya bhavanegalannu 7 saalugalalli bandhisidha reethi shlaghaneeya.

Manaswini, Hats off to your work

Shrikanth