ಹೊಳೆವ ಹೊಳೆಯ ದಂಡೆಯಲ್ಲಿ
ಅಂದು ನಗುತ ಕುಳಿತೆವಲ್ಲಿ
ಬಾನ ತುಂಬ ಹಕ್ಕಿ ಗುಂಪು
ಗಾಳಿಗಿತ್ತು ಮಧುರ ಕಂಪು
ಮರದ ತುಂಬ ಹೂವ ರಾಶಿ
ಮನದ ತುಂಬ ಒಲಮೆ ಸೂಸಿ
ನಿನಗೆ ನಾನು,ನನಗೆ ನೀನು
ಬರೆದ ಹಾಡು ಭಾವ ಜೇನು
ಇಂದು ಬರಿಯ ಅಕ್ಷರ
ಪ್ರೀತಿ ತಂತೇ ಬೇಸರ?
ಕೆರೆಯ ಹರಿವ ನೀರಾಗಿ
ಮರದ ಬಾಡೋ ಹೂವಾಗಿ
ಒಲವು ಮರೆಯಾಯಿತೆ?
ಇಂದು ಮರೆತು ಹೋಯಿತೆ?
Subscribe to:
Post Comments (Atom)
31 comments:
ಹಾಯ್ ಸುರೇಖಾ,
ಕವನ ಎಂದಿನಂತೆ ಸಕ್ಕತ್ ಆಗಿದೆ...ಪದಗಳ ಜೋಡಣೆ.. ಮರುಮಾತಿಲ್ಲಾ..!
ಆದರೆ ಈ ಸಾಲುಗಳು ಕವನದ ಮೊದಲಿನ ೪ ಸಾಲುಗಳಿಗೆ ಹೇಗೆ ಹೊಂದಿಕೆಯಾಗುತ್ತೆ (ನನ್ನ ಭಾಷೆಯಲ್ಲಿ ಒಳಾರ್ಥ!) ಅಂತ ಸ್ವಲ್ಪ ಹೇಳ್ತಿಯಾ?
"ನಿನಗೆ ನಾನು,ನನಗೆ ನೀನು
ಬರೆದ ಹಾಡು ಭಾವ ಜೇನು
ಇಂದು ಬರಿಯ ಅಕ್ಷರ
ಪ್ರೀತಿ ತಂತೇ ಬೇಸರ?".
ಪ್ರಮೋದ್,
ಪ್ರತಿಕ್ರಿಯೆಗೆ ಧನ್ಯವಾದಗಳು.
ಅಂದು ಒಲವಿತ್ತು, ಒಲವಿಂದ ಸುತ್ತ ಮುತ್ತಲಿನ ವಾತವರಣ ಚೆನ್ನಾಗಿತ್ತು, ನಾವು ಬರ್ದಿರೊ ಹಾಡಲ್ಲಿ ಭಾವಗಳಿದ್ವು, ಆದ್ರೆ ಇವತ್ತು ಒಲವಿಲ್ಲ, ವಾತವರಣ ಕೂಡ ಬೇಸರ ಮೂಡಿಸೊ ಹಾಗಿದೆ, ನಮ್ಮ ಹಾಡು ಕೂಡ ಅಕ್ಷರಗಳ ಬರಿ ಗುಂಪು ಆಗಿದೆ ಅಂತ ಅಷ್ಟೆ...
ಅರ್ಥ ಆಯ್ತಾ? ಆಗಿಲ್ಲ ಅಂದ್ರೆ ಹೇಳು...ತಿಳಿಸ್ತೇನೆ. :)
ಕಾಲ ಬದಲಾಗುತ್ತಲೇ ಇರುತ್ತದೆ. ನಿನ್ನೆ ಜನನ, ಇಂದು ಯೌವನ, ನಾಳೆ ಮುದಿತನ. ಯಾವುದನ್ನೂ ಒಂದರೆ ಕ್ಷಣ ಹಿಡಿದಿಡಲಾಗುವುದಿಲ್ಲ
ಅಂದು ಇಂದಿನ ನಿರೂಪಣೆ ಬಹಳ ಚೆನ್ನಾಗಿದೆ. ಮತ್ತೊಂದು ಷಟ್ಕಾರಕ್ಕೆ ಶುಭಾಶಯಗಳು.
ನಿನಗೆ ನಾನು,ನನಗೆ ನೀನು
ಬರೆದ ಹಾಡು ಭಾವ ಜೇನು
ಇಂದು ಬರಿಯ ಅಕ್ಷರ
ಅಂದ್ರೆ ಮಗನ ಹೆಸರು 'ಅಕ್ಷರ' ಅಂತ ಅಲ್ವ?:-)
ತವಿಶ್ರೀ ಸರ್,
ಹಾಡನ್ನ ಮೆಚ್ಚಿಕೊಂಡಿದ್ದಕ್ಕೆ ತುಂಬಾ ಧನ್ಯವಾದಗಳು.
ಪಿಜೆ,
ನಿನ್ನ ತಲೆ ಬೊಂಡ
ಅರೆರೆರೆರೆ!! ನೀನು ಬ್ಯುಸಿ ಇರ್ತೀಯಾ, ಹಾಂಗಾಗಿ ಏನೂ ಬರ್ದಿರಲ್ಲ ಅಂತ ಅಂದ್ಕೊಂಡಿದ್ದೆ!ನಿನ್ ಬ್ಲಾಗು ನೋಡೆ ಇರ್ಲಿಲ್ಲ!! ಈಗ ನೋಡ್ತೀನಿ, ಒಂದು ಮಸ್ತ್ ಮಸ್ತ್ ಕವನ ಬರ್ದಿದೀಯಾ.. ಸೊಗಸಾಗಿದೆ ಕಣೆ, ಜೊತೆಗೆ ಪ್ರಾಸ ಬೇರೆ:)
ಬರೆದ ಹಾಡು ಭಾವ ಜೇನು- ಯಾಕೋ ಈ ಸಾಲು ಖುಷಿಯಾಯ್ತು!.
ಕವನ ಚೊಲೊ ಇದ್ದು.
ಜಗಲಿ ಭಾಗವತರು ಪೇಳಿದ ಹಾಗೆ, ಇಲ್ಲವೆಂದು ಭಾವಿಸುವೆ.
ಇಂತಿ
ಭೂತ ;)
ನಮಸ್ಕಾರ ಶ್ರೀನಿಧಿ,
ಹಾಡನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. :)
ಹಾಡು ಇಷ್ಟ ಆಯ್ತ ಅಂದೆ ಅಲ್ಲ, ಅದೇ ಖುಷಿ
ಭೂತ,
ಹಾಡನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. :)
ಭಾಗವತ pj ಹೊಡದ್ರೆ, ನೀನು ತಲೆ ಅಲ್ಲಾಡಿಸ್ತೀಯಾ?
ಭಾಗವತಂಗೆ ತಡಿ ಪೂಜೆ ಮಾಡ್ತೀನಿ
ಓಹೋ!!
ಯಾವ ಹೊಳೆ ದಡದಲ್ಲಿ ಕುಳಿತಿದ್ದು!!?? ;)
ತಂಗಾಳಿಯ ನಡುವೆ ಬೆಚ್ಚಗಿನ ನಗುವಿನಂತಿದೆ, ಈ ನಿನ್ನ ಕವನ....!!
ಅಂತಹ ಮಧುರ ಪ್ರೇಮವನ್ನು ಮರೆತ/ಬೇಡವಾದ ಅವನಿಗೆ ಅದನ್ನು ವ್ಯಾಖ್ಯಾನಿಸಿಯಾದರೂ ಏನು ಪ್ರಯೋಜನ, ಅಲ್ಲವೆ!!
ನಿನ್ನೆಯವರೆಗೆ ಆಪ್ಯಾಯವಾದ ಹೂವಿನ ರಾಶಿಯನ್ನು ಇಂದು ಬಾಡೋ ಹೋವಿನಂತೆ ಕಂಡು, ಕಾಲ್ಚೆಂಡಿನಂತೆ ಒದ್ದು ಹೋಗುವವನ ಏನನ್ನ ಬೇಕು!!
ಆದರೆ ನಿನ್ನಲ್ಲಿನ ಕಾವ್ಯದೆಡೆಗಿನ ಒಲವು ಎಂದೂ ಬಾಡದಿರಲಿ!!
ಭಾವಜೀವಿ,
ಬರಿಯ ಕಲ್ಪನೆ ಮಾತ್ರ ಕಣಯ್ಯ :)
"ಆದರೆ ನಿನ್ನಲ್ಲಿನ ಕಾವ್ಯದೆಡೆಗಿನ ಒಲವು ಎಂದೂ ಬಾಡದಿರಲಿ!! " - ಖಂಡಿತ :)
ಓಹ್,
ಪೀಜೆಗೆ ಪೂಜೆ, ಜೊತೆಗೆ ಬೊಂಡ ಅಥವಾ ಬೋಂಡಾ ಎಲ್ಲಾ ಕೊಡ್ತಾರಾಂತ ಗೊತ್ತಾಯ್ತು...
ಹದಿನಾಲ್ಕು ಸಾಲುಗಳಲ್ಲಿ ಪ್ರೀತಿಯನ್ನು ಮುಗಿಸಿ ನೋವಿನ ಎಳೆಗೆ ಸಿಲುಕಿಸಿದ್ದೀರಲ್ಲಾ... ಅಷ್ಟು ಬೇಗ....!!!!
ಸುರೇಖಾ,
ಸುಂದರ ಸಾಲುಗಳು..
ಮೊದಲಾರ್ಧ ಬಹಳ ಮಧುರವಾಗಿದೆ..
ಇಷ್ಟು ಸುಲಲಿತವಾಗಿ ಸಾಗುತ್ತಿದ್ದ ಪ್ರೀತಿ ಬದುಕಿಗೆ 'ಇಂದು' ಯಾಕೇ ಹೀಗೆ ಬಾಡಿ ಹೋಗಿರಬಹುದು?
ತುಂಬಾ ಚೆನ್ನಾಗಿ ಮೂಡಿಬಂದಿದೆ!
ಅನ್ವೇಷಿಗಳೆ,
ಪೂಜೆಗೆ ಬಂದ ಬಿಡಿ :)
ಶಿವ್,
ಸುಮ್ನೆ ಬರ್ದದ್ದು ಈ ಹಾಡನ್ನ....ಕಾರಣ ಏನೂ ಇಲ್ಲ
alpazna
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು
ಮನಸ್ವಿನಿ,
ಸುಂದರ ಕವನ. ಕವನದ ಮೊದಲರ್ಧ ತುಂಬ ಚೆನ್ನಾಗಿ ಮೂಡಿಬಂದಿದೆ. ತುಂಬ ನವಿರಾದ ಸಾಲುಗಳು. ಸುಮ್ಮನೆ ಕಣ್ಣುಹಾಯಿಸಿದರೂ, ಸಾಲುಗಳನ್ನು ಗುನುಗುವಂತೆ ಪ್ರೇರೇಪಿಸುತ್ತವೆ.
ಆದರೆ ಮಧ್ಯದಲ್ಲಿ - ನಿನಗೆ ನಾನು,ನನಗೆ ನೀನು, ಬರೆದ ಹಾಡು ಭಾವ ಜೇನು - ಸಾಲುಗಳ ನಂತರ ಕವನದ ಓಘ ಮುರಿದು ಬಿದ್ದ ಹಾಗಿದೆ. ಇದರಿಂದ ಕವನದ ಬಂಧಕ್ಕೆ ಧಕ್ಕೆಯಾಗಿದೆ ಅಂತ ನನ್ನನಿಸಿಕೆ.
ಪ್ರೇಮದ ಗುಂಗಿನಲ್ಲಿರುವಾಗಿನ ಕಾವ್ಯಲಹರಿ ವಿಷಾದದಲ್ಲಿ ಮರೆಯಾಯ್ತೆ?
ಭಾಗವತ,
ನಿನ್ನ ಈ comment ಓದಿ ಖುಶಿ ಆಯ್ತು.
ಹಾಡು ಬರ್ದಾದ್ಮೇಲೆ, ನಂಗೂ ಅನ್ಸಿತ್ತು. ಕೊನೆಯ ಸಾಲುಗಳು ಅಷ್ಟು ಸರಿಯಾಗಿಲ್ಲ ಅಂತ.
ಆದ್ರೆ, ಆ ಹಾಡಿನ ಬಗ್ಗೆ ಇನ್ನ ಪದ ಹುಡುಕವಷ್ಟು ಸಹನೆ, ಸಮಯ ಇರ್ಲಿಲ್ಲ...ನಿನ್ನ ಪ್ರಾಮಾಣಿಕ ಪ್ರತಿಕ್ರಿಯೆಗೆ ಧನ್ಯವಾದಗಳು.
aMdada chaMdada iMpu
kaMpina padavanaaydu,
heNeyuttiddaaLe I taruNi
tannellA kushalateyiMda
kavitegaLa kaMthahaara
kannaDammana koraLige.
irali nannadU oMdu
mechchugeya jaikaara.
naanu nimma padyakke oMdu hrudayasparshi comment bareyONa aMta hOdre... Poornima avara comment muMde naMdenoo mahaa annisi summanaagibitte.
aMdu-iMdu eMdeMdoo
manaswiniya manadalli
hottukoLLuttave padagaLa panju
aagoMdu-eegoMdu.
haageye ee padyavoo oMdu
irali heegeyE nimma
kavanagaLa payaNa
eMdeMdoo !!!
--md
ಪೂರ್ಣಿಮಾ,
ನಮಸ್ಕಾರ, ನನ್ನ ಬ್ಲಾಗಗೆ ಸ್ವಾಗತ, ಹಾಡನ್ನು ಮೆಚ್ಚಿಕೊಂಡದ್ದಕ್ಕೆ ಧನ್ಯವಾದಗಳು :)
md,
ಹೃದಯಸ್ಪರ್ಶಿ ಸ್ಪಂದನಕ್ಕೆ ಧನ್ಯವಾದಗಳು. ಕವನಗಳ ಪಯಣ ಮುಂದುವರಿಸುವ ಭರವಸೆ ಕೊಡ್ತಾ,
ಮನಸ್ವಿನಿ
ಮನಸ್ವಿನಿ,
ಕವನಗಳ ಮೂಲಕವೇ ಎಷ್ಟೊಂದು 'ಹೃದಯ'ಗಳನ್ನ 'ಸ್ಪರ್ಶಿ'ಸ್ತಾ ಇದೀಯಾ:-D
..ಮುಂದಿನ ಕವನ ಎಲ್ಲಿ?
ಮನಸ್ವಿನಿ, ನನ್ನ ವಿಳಾಸ ತುಸು ಬದಲಾಗಿದೆ, ಅದನ್ನು ಗುರುತಿರಿಸಿಕೋ...
http://suptadeepti.blogspot.com/
ಧನ್ಯವಾದಗಳು.
AMdu haniya hADina ninAda
iMdu hoLeva hoLeya saMvada
muMdu varita irli heege nimma kaviteya haaDi...
ಸುಪ್ತದೀಪ್ತಿ,
ಆಯ್ತು ಲಿಂಕ್ ಬದಲಾಯಿಸಿದೆ.. ಧನ್ಯವಾದಗಳು.
ಮಹಾಂತೇಶ್,
ತುಂಬಾ ಧನ್ಯವಾದಗಳು.
ಕವನ ಮನ ಮುಟ್ತದೆ... ಜತೆಗೆ ನ೦ತರದ discussions ಸಖತ್ ಮಜಾ ಕೊಡ್ತವೆ!!
ಶ್ರೀ,
ಹಾಡು ಅದರ ಜೊತೆಗೆ ಇಲ್ಲಿಯ ಪ್ರತಿಕ್ರಿಯೆಯನ್ನ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. :)
Post a Comment