ಪ್ರೀತಿಯ ಸಾಧನಾ,
ಹೇಗಿದ್ದಿಯಾ? ನಾನಿಲ್ಲಿ ಆರಾಮವಾಗಿದ್ದೇನೆ. ನಿಂಗೆ ಪತ್ರ ಬರಿದೆ ಇದ್ದುದಕ್ಕೆ ಸಾರಿ. ಪಾಪು ನೋಡ್ಕೊಳೊದ್ರಲ್ಲೆ ಸಮಯ ಆಗಿ ಹೋಗುತ್ತೆ.
ನಿಂಗೆ ಗೊತ್ತಲ್ಲ .ಜೀವನ್ ಕಥೆ. ೨-೩ ತಿಂಗಳಿಂದ ಮನೆಗೆ ಬಂದಿರ್ಲಿಲ್ಲ. ನನ್ನ ಜೀವನದಲ್ಲಿ ಎಲ್ಲ ಮುಗಿದು ಹೋಯ್ತು ಅಂತ ಅಳೋದು ಒಂದೆ ಆಗಿತ್ತು. ಮನೆಲಿ ಯಾರು ಮಾತೆ ಆಡ್ತಿರ್ಲಿಲ್ಲ. ಸ್ಮಶಾನ ಮೌನ. ನಾನಂತು ಹಾಸಿಗೆ ಮೇಲೆ, ಚಾದರದ ಒಳಗೆ ಲೋಕ ಮಾಡ್ಕೂಂಡು ಅಳೋದನ್ನ ಆಸ್ತಿ ಮಾಡ್ಕೊಂಡಿದ್ದೆ. ಅಲ್ಲಿ ಇಲ್ಲಿ ಸ್ವಲ್ಪ ಧೈರ್ಯ ಮಾಡಿ ಜೀವನ ನಡಿತಿತ್ತು ಅದರ ಪಾಡಿಗೆ ಅದು. ಒಂದು ದಿನ ಮಾವ ಬಂದು ನನ್ನ ಮುಂದೆ ಗೊಳೊ ಅಂತ ಅತ್ರು. 'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ, ನನ್ನ ಮಗ ಬೇಕಾ ಬಿಟ್ಟಿ ಏನೇನೊ ಅಭ್ಯಾಸ ಮಾಡ್ಕೊಂಡ' ಅಂದ್ರು. ಅದೆಲ್ಲಿ ಧೈರ್ಯ ಬಂತೊ ಗೊತ್ತಿಲ್ಲ ಸಾಧು,ಪಾಪುನ ಕರ್ಕೊಂಡು ಬಂದು, ಅವರ ಕೈಯಲ್ಲಿ ಹಾಕಿ, ' ಮಾವ, ಪೂರ್ಣ ಚಂದ್ರ ಇದ್ದಾಗ, ಅಮವಾಸ್ಯೆ ಎಲ್ಲಿ ಅಂದೆ, ಮಾವ, ನಾವು ಜೀವನನ ಇಷ್ಟೇನಾ ಕಂಡಿರೋದು....ಬದುಕ ಬೇಕು, ನಮ್ಮ ಆದ್ಯತೆಗಳನ್ನ ನಾವೇ ಮಾಡ್ಕೊಬೇಕು ಅಂದೆ' ಅವ್ರು ಅದಕ್ಕೆ, ನಂದೇನಿದೆ!! ೬೦ ಆಯ್ತಲ್ಲ ...ಅರಳು ಮರಳು ಅಂದ್ರು. ನಾನು ' ೬೦- ಅರಳು, ಮರಳು ಅಲ್ಲ...೬೦ಕ್ಕೆ ಮರಳಿ ಅರಳು ಅಂದೆ' . 'ಏನಿದು, ನನ್ನ ಮಗಳು ಇವತ್ತು ಬುದ್ಧಿವಂತೆ ಆಗಿದ್ದಾಳೆ' ಅಂದ್ರು. ನಾನು ' ನಮ್ಮ ಬೇಂದ್ರೆ ಮಾಸ್ತರ್ದು' ಅಂದೆ. ಅವತ್ತಿಂದ ನಾವು ಹೊಸ ಜೀವನ ಶುರು ಮಾಡಿದ್ದೀವಿ.
ಮಾವ ಮತ್ತೆ ಕೆಲ್ಸಕ್ಕೆ ಸೇರಿಕೊಂಡಿದ್ದಾರೆ. ಅತ್ತೆ ಸುಧಾರಿಸಿ ಕೊಂಡಿದ್ದಾರೆ. ನಾನು ಕೆಲ್ಸಕ್ಕೆ ಹೋಗ್ತಿದ್ದೀನಿ. ಮಾವಯ್ಯಂಗೆ ಬೇಂದ್ರೆ ಮಾಸ್ತರ ಹುಚ್ಚು ಈಗ. ಮೊನ್ನೆ ' ನಾಕು ತಂತಿ' ಪುಸ್ತಕ ತಂದು ಕೊಟ್ಟೆ. ತುಂಬಾ ಅತ್ರು. ನೀನೆ ನನ್ನ ಮಗ ಅಂತ.
ಹೇಗಿದ್ದಾರೆ ನಿಮ್ಮ ಮನೆಯವ್ರು? ಇನ್ನ ಹರುಕು ಮುರುಕು ಕನ್ನಡ ಮಾತಡ್ತಾರ? ಸರಿಯಾಗಿ ಕಲ್ಸು ಅವ್ರಿಗೆ. ಊರಿಗೆ ಬಾ ಮಾರಾಯ್ತಿ. ಪತ್ರ ಬರಿ.
ಸರಿ ಸರಿ, ನನ್ನ ಹಾಡು ಬರ್ತ ಇದೆ ರೇಡಿಯೋದಲ್ಲಿ ಬೇಂದ್ರೆ ಮಾಸ್ತರ್ದು. ಸಿಗ್ತೀನಿ ಟಾಟಾ
ಶಾಲು
Subscribe to:
Post Comments (Atom)
25 comments:
ವಾಹ್ ಸೂಪರ್ ಆಗಿದೆ ಸಣ್ಣ ಕಥೆ
ಈ ಪದಗಳ ಉಪಯೋಗ ಬಹಳ ಸ್ವಾರಸ್ಯಕರವಾಗಿದೆ.
'ಶಾಲು, ನಿನ್ನ ಜೀವನ ಅಮವಾಸ್ಯೆ ಆಗಿ ಹೊಯ್ತಲ್ಲ,
ಕಥೆಯನ್ನು ಇನ್ನೂ ಸ್ವಲ್ಪ ಜಾಸ್ತಿ ಬರೆಯಬಹುದಿತ್ತಲ್ವಾ? ಸಮಯ ಆಗೋದೇ ಕಷ್ಟ ಅಲ್ವಾ? ಒಳ್ಳೆಯ ಪ್ರಯತ್ನ. ಅಲ್ಲ, ಇಲ್ಲಿಯವರೆವಿಗೂ ಯಾಕೆ ಯಾವುದನ್ನೂ ಪ್ರಕಟಣೆಗೆ ಕಳುಹಿಸಿಲ್ಲ. ವಿಕ್ರಾಂತಕರ್ನಾಟಕ ಅಂತ ಒಂದು ಹೊಸ ಇ-ಪತ್ರಿಕೆ ಪ್ರಾರಂಭವಾಗಿದೆ. ಅಲ್ಲಿಗೆ ಕಳುಹಿಸಮ್ಮ. ವಿಳಾಸ ಬೇಕೇ?
ವಹ್,
೬೦ ಕ್ಕೆ ಮರಳಿ ಅರಳು, ಉತ್ತೆಜನಕಾರಿ ಸಾಲು. ಬೆಂದ್ರೆ ನ ಬೇರೆ ನೆನಪು ಮಾಡ್ಬಿಟ್ಟೆ :)
ಒಳ್ಳೆ ಸಣ್ನ ಕಥೆ. ನೀ ಕಥೆ ಬರಿತಿ ಹೇಲಿ ಗೊತ್ತಿದಿಲ್ಲೆ. ಚೊಲೊ ಇದ್ದು.
ಇಂತಿ
ಭೂತ
ಉತ್ತಮ ಪ್ರಯತ್ನ. ನೀಳ್ಗತೆ ಬರೆಯಲು ಅಭ್ಯಾಸ ಮಾಡು. ಯಾವುದೋ ಅಳುಮುಂಜಿ ಕಥೆ ಬೇಡ. ದಟ್ಟ ಜೀವನಾನುಭವದಿಂದ ಹೊಮ್ಮಿದ ಕಥೆ ಆಗಿರಲಿ.
ಧ.ವಾ ಗಳು ತ ವಿ ಶ್ರೀ, ರಮೇಶ , ಭಾಗವತರಿಗೆ
ತವಿಶ್ರೀ,
ಕಥೆ ದೊಡ್ಡದೆ, ಮೊದಲು ಯಾವಗೊ ಬರ್ದಿದ್ದೆ. ಅದನ್ನ ಇಲ್ಲಿ type ಮಾಡಿ ಹಾಕುವಷ್ಟು ಸಮಯ ,ಸಹನೆ ಇರ್ಲಿಲ್ಲ. ವಿಳಾಸ ಕಳಿಸಿ ಸರ್.
ಜಗಲಿ ಭಾಗವತರೇ,
ತಾವು ಮಯ್ಯ ಅವರ? (mistaken identity ಅಲ್ಲ ತಾನೆ) ಇದು ಯಾರ್ದೊ ಜೀವನದ ಕಥೆನೆ ಮಾರಯ್ರೆ. ನಾನು ಬರ್ದಿದ್ದು ತುಂಬಾ ಸಂಕ್ಷಿಪ್ತವಾಗಿದೆ. ನಿಮ್ಮ ಪ್ರಾಮಾಣಿಕ ಅನಿಸಿಕೆಗ ಧ.ವಾ ಗಳು.ಪ್ರಯತ್ನಿಸುವೆ.
ಈ ವಿಳಾಸಕ್ಕೆ ನಿನ್ನ ಕವನ ಮತ್ತು ಸಣ್ಣ ಕಥೆಗಳನ್ನು ಕಳುಹಿಸು. veeresha@vikrantakarnataka.com
ಒಳ್ಳೆಯದಾಗಲಿ
ಗುರುವಿನ ಕರುಣೆ ಇರಲಿ
ಒಳ್ಳೆ ಸಣ್ಣ ಕಥೆ .sweets & Short ಆಗಿ ತುಂಬಾ ಚೆನ್ನಾಗಿದೆ.
ತುಂಬಾ ಧ.ವಾ ಗಳು ತವಿಶ್ರೀಯವರೆ
ಧ.ವಾ ಗಳು ಮಹಾಂತೇಶ
ಓದಿ ಆನಂದ ಪಟ್ಟೇ..
ಧ.ವಾ ಗಳು ಪ್ರಮೋದ್ :)
ಮಯ್ಯ mystery!! comments ಹಾಕಿ ಅಳಿಸಿದ್ದೀರಾ?
:)
ಅಬ್ಬ..
ನೋಡೇ ಇಲ್ಲ ಈ ಸೈಟ್...
ಪುಟ್ಟ ಕಥೆಯಲ್ಲಿ ಜೀವನದ ಕಟು ಸತ್ಯವನ್ನು ಹಿಡಿದಿಟ್ಟಿದ್ದೀರಿ... ಅದ್ಭುತವಾಗಿದೆ...
ಅದ್ಭೂತವಾಗಿದೆ ಅಂದ್ರೆ ಫ್ಯಾಂಟಮ್ಗೆ ಕೋಪ ಬರುತ್ತೋ....?
ಧ.ವಾಗಳು ಅಸತ್ಯಾನ್ವೇಷಿಗಳೆ.
ಯಾಕೆ ಅಸತ್ಯ ಹುಡುಕಿ ಹೊರಟಿರುವಿರಿ?
ನಿನ್ನನ್ನು 'ಅಳಿಸು'ವಂಥ comments ನಾನೇನು ಬರೆದೆ?:-))
ರಾಶಿ ದಿನ ಆಯ್ತಲ್ಲ, ಕಥೆ ಬರ್ದು...ನಿನ್ನ ವಿರಹಗೀತೆಗಳೆಲ್ಲ ಇತ್ತೀಚೆಗೆ ಕಡಿಮೆ ಆಗಿರುವುದರ ಕಾರಣ ಏನು?:-))
ಶಿರಸಿಯ ಪರಿಸರದ ಬಗ್ಗೆ, ನಿನ್ನನ್ನ ತೀವ್ರ ಆರ್ದ್ರಗೊಳಿಸುವ ನೆನಪುಗಳ ಬಗ್ಗೆ ಬರಿ...ಬಳೆಗಾರನ ಬಗ್ಗೆ ಬರೆದದ್ದು ಚೆನ್ನಾಗಿತ್ತು. ಸ್ವಲ್ಪ ಅಂಥದ್ದೆ ರೀತಿಯ ಲೇಖನ ಬರಿ, ಆದರೆ ದೊಡ್ಡದಾಗಿರಲಿ, ಶಬ್ದಸೂತಕ ಬೇಡ, ಸ್ವಲ್ಪ ಧಾರಾಳಿಯಾಗು. ಜೊತೆಗೆ ತೀರ ಭಾವುಕತೆಯೂ ಬೇಡ, ತಾಟಸ್ಥ್ಯ ನೀತಿಯಿರಲಿ:-)) ಉಪದೇಶ ತುಂಬಾ ಆಯ್ತಾ?:-))
ನನ್ನನ್ನು ಅಳಿಸುವಂತಹ ಕೆಲಸ ನೀವು ಮಾಡೊಲ್ಲ ಅಂತ ಅಂದುಕೊಂಡಿದ್ದೇನೆ. ;)
ಒಂದು ವಿರಹ ಗೀತೆ ಬರೆದದ್ದಕ್ಕೆ, ಹೀಗೆಲ್ಲ ಹೇಳುವುದಾ ತಾವು!! ನನ್ನ ವಿರಹ ಗೀತೆ ತಮಗೆನಾದ್ರು ಹಳೆಯದನ್ನು ನೆನಪಿಸ್ತಾ? ಇರಬೇಕು .
ನೀವು ಹೇಳಿದ ಹಾಗೆ ಬರೆಯಲು ಪ್ರಯತ್ನಿಸುವೆ.
ನಿಮ್ಮ ಜಗಲಿ ಕಾರ್ಯಕ್ರಮ ಶುರು ಆಗೋದು ಎಂದು?
ಮನಸ್ವಿನಿ ಅವರೆ,
ಗೆಳೆಯನೊಬ್ಬ ಇ-ಮೇಲ್ ಮೂಲಕ ಕಳುಹಿಸಿದ ಮಾಹಿತಿಯಲ್ಲಿ ಕೆಲವನ್ನು ಬಳಸಿಕೊಂಡ ಪರಿಣಾಮ ಲಂಚ ಗಟ್ಟಿಯಾಗಿ ನಿಲ್ಲಿಸಿದ್ದು. ಈ ಬಗ್ಗೆ ವಿಚಾರಿಸಿ ನೋಡಿದಾಗ ನೀವಂದದ್ದು ನಿಜ ಅಂತ ತಿಳಿಯಿತು. ನಿಮ್ಮ ಎಚ್ಚರಿಕೆಗೆ ಧನ್ಯವಾದಗಳು. ಅದರಲ್ಲಿ ತಿದ್ದುಪಡಿ ಪ್ರಕಟಿಸಲಾಗಿದೆ.
ಬಹುಶಃ ಅಸತ್ಯದ ಅನ್ವೇಷಣೆಯಲ್ಲಿ ಏನೋ ತೊಡಕಾಗಿದೆ. ಬೇರೆಯವರ ಕೊಡುಗೆ ತಿರಸ್ಕರಿಸಲು ಬೊ.ರ. ಬ್ಯುರೋ ಕ್ರಮ ಕೈಗೊಂಡಿದೆ. :)
ಧನ್ಯವಾದ.
ಅನ್ವೇಷಿಗಳೆ,
ಬೊ.ರ. ಬ್ಯುರೋ ಇಂದ ಇನ್ನಷ್ಟು ವಿಷಯಗಳು ತಿಳಿದು ಬರಲಿ :)
shaalu yaaronidige hos jeevana Aarambhisiddu gottaagilla
idu kathe endu nanage comment nodiye gottaagiddu. tumba vichitravaagide
@ jitendra
adu nimma drishTikona :)
DhanyavaadagaLu
viಕತೆ ಚನ್ನಾಗಿ ಬರ್ದಿದೀರ..
"ಅರವತ್ತಕ್ಕೆ ಮರಳಿ ಅರಳು"
ಬೇಂದ್ರೆ ಮಾಸ್ಟರ್ರ ಇಂತಹ ಪದ ಲಾಲಿತ್ಯಗಳೇ ಅವರನ್ನ ವರಕವಿಯನ್ನಾಗಿಸಿದ್ದು ಅನ್ಸತ್ತೆ..
ಉತ್ತಮ ಕಥೆ, ಅರ್ಧ ಪುಟದಲ್ಲಿ ಬಹಳಷ್ತ್ಟು ಮಾಹಿತಿಯನ್ನು ತಿಳಿಸಿದ್ಡೀರಿ. ಈ ರೀತಿ ಬರವಣಿಗೆಯ ಶೈಲೆ ನನಗೆ ಬಹಳ ಇಷ.
ಕಿರಣ್
I read ur shrt story Shalmali,liked it very much.I'm a Banker by profession.I like reading short stories-Masti,Anton Chekav,Munshi Premchandra & freshers like vasudhendra,Jogi etc.
Post a Comment