ಮಂದಿ ಚಿಂತಿ, ಮಂದಿ ಚಿಂತಿ
ಒಂದ ಎರಡ? ಮುಗಿವಲ್ದು ಸಂತಿ
ಮದ್ವಿ ಚಿಂತಿ
ಮದ್ವಿ ಆದ್ರ ಮುನ್ನೂರ ಚಿಂತಿ
ಹೊಂದ್ ಬಂದಿಲ್ಲ? ಎಲ್ಲಿಲ್ಲದ್ ಚಿಂತಿ!
ಚಂದಕ್ಕಿದ್ರೆ ಮುರಿಯೋ ಚಿಂತಿ
ವರ್ಷಾತಂದ್ರ ಮಕ್ಕಳ ಚಿಂತಿ
ಮಕ್ಳ ಆದ್ರ? ಹೆಣ್ಣ? ಗಂಡ?
ಹೆಣ್ಣ? ಭಾರೀ ದಂಡ
ಮನೆಲ್ಲಿದ್ರ ಒಂದು ಚಿಂತಿ
ಪರದೇಸಿ ಆದ್ರ್ ಇನ್ನೊಂದ್ ಚಿಂತಿ
ಬಾಡಿಗಿ ಮನಿ? ಸ್ವಂತ ಮನಿ?
ದೊಡ್ದ್ ಮನಿ? ಸಣ್ಣ ಮನಿ?
ಸ್ಕೂಟ್ರು? ಕಾರು?
ಫಾರೀನ್ ಕಾರುಬಾರು?
ಮೆತ್ತಗಿದ್ರ ಚಿಂತಿ
ಗತ್ತಗಿದ್ರೂ ಚಿಂತಿ
ಏರಿದ್ರೂ ಚಿಂತಿ
ಇಳಿದ್ರೂ ಚಿಂತಿ
ಮಂದಿ ಚಿಂತಿ ಮಂದಿ ಚಿಂತಿ
ಒಣ ಬಾಯ್ಮಾತಿನ ಚಿಂತಿ
ಮಂದಿ ಚಿಂತಿ, ಮಂದಿ ಚಿಂತಿ
ಒಂದ ಎರಡ? ಮುಗಿವಲ್ದು ಸಂತಿ
Subscribe to:
Post Comments (Atom)
5 comments:
ವಾಹ್! ಚಿಂತೆಯೂ ಸಹ ಸುಂದರ ಕವನವಾಗಬಹುದು, ನೋಡಿ!
after a long time you posted something on your blog.... please keep writing.... love to read your writings
nice
chennagide ri
houdu chinti madta nee yak ninti
Post a Comment