ಕಟ್ಟೆಯ ಮೇಲೆ
ಕಳೆದ ವರುಷಗಳ
ಕನಸುಗಳ ಹರವಿಕೊಂಡಿದ್ದೇನೆ
ಹರಾಜಿಗೋ, ಮಾರಾಟಕ್ಕೋ
ಇಲ್ಲ, ದಾನಕ್ಕೋ
ಭುವಿಯ ಎದೆಯಲೋ
ನದಿಯ ಮಡಿಲೊಳೋ
ಮುಗಿಸುವ ಇರಾದೆಯಿಲ್ಲ
ನನ್ನ ಹುಚ್ಚುತನ ನನಗಿಂತ ಬಲ
ಎದೆ ಬಗೆದೋ
ನದಿಯ ಮಡಿಲಲಿ ಧುಮುಕಿಯೋ
ಹುಡುಕಿ ಹೊರತೆಗೆದೀತು!
ಹೋಗಿ ಬರುವ ಜನರದ್ದು ಉದಾಸೀನ
ತೀಕ್ಷ್ಣ್ಣ ನೋಟ
ಅಪಹಾಸ್ಯ, ಗಹಗಹಿಕೆ
ಸಖಿ ಕೇಳುತ್ತಾಳೆ
ನನ್ನ ಕನಸಿನ ದಾನ ಯಾರಿಗೇಕೆ ಎಂದು!
ನೀ ಬಂದು ಉತ್ತರ ನೀಡುವೆಯಾ?
Subscribe to:
Post Comments (Atom)
14 comments:
nice lines!!
ಮನಸ್ವಿನಿ,
ಕವನ ಚೆನ್ನಾಗಿದೆ. ಆದರೆ ನನ್ನದೊಂದು ಸಲಹೆ: ಕನಸುಗಳನ್ನು ಹೇಗೋ ಕೊಟ್ಟು ಬಿಡುವುದಕ್ಕಿಂತ ಜೋಪಾನವಾಗಿ ಇಟ್ಟುಕೊಳ್ಳುವುದೇ ಸರಿಯಲ್ಲವೆ?!
ಕವನ ಚೆನ್ನಾಗಿದೆ.
Nice poem madam,
Visit my blog too.
Nice Lines madam...:)
kavana chennaagi moodibandide.
manasviniyavare,kavana chennaagide.kanasu kanasaagiddare chenna.pratikriye anaagiddaru anubhavisalebekallave..?
nice one
niceone
superb
ಚೆನ್ನಾಗಿದೆ :-)
ಮನದಲ್ಲಿರುವ ಮಾತುಗಳು ಕಾವ್ಯವಾಗಿ ಹೊರ ಹೊಮ್ಮಿದೆ.ಒಟ್ಟಿನಲ್ಲಿ ಸೊಗಸಾಗಿದೆ ನಾನಿನ್ನು ಈ ಕಾವ್ಯ ಪ್ರಪಂಚಕ್ಕೆ ಹೊಸದಾಗಿ ಕಾಲಿಡುತ್ತಿದ್ದೇನೆ.ನನ್ನ "ಚಿತ್ರಕಾವ್ಯ"
ಬ್ಲಾಗ್ಲ್ ಸ್ಪಾಟ್.ಕಾಮ್ ಗೆ ಭೇಟಿಯಿತ್ತು ದಯವಿಟ್ಟು ಸಲಹೆ
ಸೂಚನೆಗಳನ್ನು ನೀಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.ತಪ್ಪುಗಳಿದ್ದಲ್ಲಿ ಖಂಡಿತ ತಿಳಿಸಿ
ಮನಸ್ವಿನಿಯವರೇ, ಸಾಂಕ್ಷೇಪ ಸಾರ ಕವನದಲ್ಲಿ ಹೇಳಬಹುದು ಎನ್ನುವುದು ನಿಮ್ಮ ಕವನದ ಮೂಲಕ ತಿಳಿದೆ... ಚನ್ನಾಗಿದೆ.
Post a Comment