Sunday, May 17, 2009

ನಿನ್ನೆಗಳ ಇರಾದೆ

ಹಿಂದಿನದೆಲ್ಲ ಹಿಂದೆ ಬಿಟ್ಟು
ಇಂದಿನದರಲ್ಲಿ ನಾ
ಇದ್ದು ಬಿಡಬೇಕು

ಇಲ್ಲೇ ಒಂದು ಗುಂಡಿ ತೋಡಿ
ಬೇಡದ ಬೇವ ಮುಚ್ಚಿ
ನಿಟ್ಟಿಸಿರು ಬಿಟ್ಟು ಬಿಡಬೇಕು

ಬೆಂಕಿ ಹಚ್ಚಿ,ಆ ದಿಕ್ಕಿಗೆ ಬೂದಿಯ ಹಾರಿಸಿ
ಬೆನ್ನು ತಿರುಗಿಸಿ
ಇಷ್ಟಗಲ ಬಾಯಿ ತೆರೆದು
ಸುಮ್ಮನೆ ನಕ್ಕುಬಿಡಬೇಕು

ಗಂಗೆಯ ಒಡಲಿಗೆ ತೇಲಿ ಬಿಟ್ಟು
ಎರಡು ಹನಿ ಸುರಿಸಿ
ದೊಡ್ಡ ಅಡಿಗಳನಿಟ್ಟು
ನಾಳೆಗಳ ಬರಮಾಡಿಕೊಳ್ಳಬೇಕು

ಹೀಗೆಲ್ಲ ಅಂದುಕೊಂಡದ್ದಷ್ಟೇ ಬಂತು
ನಿನ್ನೆಗಳು ನನ್ನ ಬಿಡುತ್ತಿಲ್ಲ
ನನ್ನ ಪೂರ್ಣ ಸುಡುವ ಇರಾದೆ
ಹಾಳಾದ ನಿನ್ನೆಗಳದು

36 comments:

ರಾಜೇಶ್ ನಾಯ್ಕ said...

ಆಹಾ! ಎಷ್ಟು ತಿಂಗಳುಗಳ ಬಳಿಕ ಒಂದು ಪೋಸ್ಟ್!

sunaath said...

ಮನಸ್ವಿನಿ,
ನಿಮ್ಮ postಗಾಗಿ ಕಾಯುತ್ತಲಿದ್ದೆ.
It's an appealing poem, ಆದರೆ ರೋಷ ಯಾಕೆ?

Anonymous said...

ಇಂದಿನದರಲ್ಲಿ ನಾ
ಇದ್ದು ಬಿಡಬೇಕು
ಎಂಬ ಆಸೆಯಲ್ಲಿಯೇ ಇಂದು ಕಳೆದು ಹೋಗುವುದಿಲ್ಲವೇ?

jithendra hindumane said...

ನಿಜ.. ನೆನಪುಗಳಲ್ಲಿ ಇರುವದು ಸುಖ.
ನೆನಪುಗಳೇ ಜೀವ.. ನಿನ್ನೆಗಳೇ ಜೀವಾಳ..

ಜಲನಯನ said...

ಮನಸ್ವಿನಿ
ಇಂದುಗಳನ್ನು ಹಚ್ಚಿಕೊಳ್ಳದೇ, ನಿನ್ನೆಗಳನ್ನು ಮುಚ್ಚಿಬಿಡುವ ತವಕ, ಒಳ್ಳೆಯ ನಾಳೆಗಳ ಆಸೆಯಲ್ಲಿ ಚಡಪದಿಸುವ ಮನಸು..ಎಲ್ಲಾ ಕೇವಲ ಕನಸೆನ್ನುವ ಕೊನೆಯ ಸಾಲುಗಳು. ಚನ್ನಾಗಿ ಮೂಡಿದೆ ಮನಸಿನಲ್ಲಿ ಮೂಡಿದ ದ್ವಂದ್ವಗಳ ತಾಕಲಾಟದ ಮಂಥನ.....ನಮ್ಮನ್ನೂ ಸ್ವಲ್ಪ ಟೀಕಿಸಿ ಬಂದು ನಮ್ಮ ಗೂಡಿಗೆ...!!

heggere said...

ಈ ನಿನ್ನೆಗಳೇ ಹೀಗೆ
ನಾವು ಹುಡುಗಿಯರೇ ಹೀಗೆ..
ಎಂದು ಹೇಳುವವರನ್ನೆ
ನೆನಪು ಮಾಡಿಕೊಂಡು
ನಾಳೆಗಳನ್ನು
ಮರೆತು ಬಿಡುತ್ತವೆ...!

ಕವಿತೆ ಚೆನ್ನಾಗಿದೆ
ಬರವಣಿಗೆ ಮುಂದುವರಿಸಿ

ಆರಾಧ್ಯ
ಮೈಸೂರು.

Jayashree said...

sogasaada poem. ninnegaLa irade kavanadalli iLidmele manasu haguraagirbeku?

Seeji said...

Its intense,.... poignant at times especially the last stanza.... The 'yearning', followed by 'despair' has been beautifully depicted in this poem... truly a masterpiece...worth the wait...

I'm happy you are back...

ಸುಪ್ತದೀಪ್ತಿ suptadeepti said...

ಅಯ್ಯೋ ಮಾರಾಯ್ತಿ, ನಿನ್ನೆಗಳ ಹಂಗಿಲ್ಲದೆ ಬರೇ ಇಂದಿನಲ್ಲೇ ಬದುಕುವಿಯಾದರೆ ನಮ್ಮನ್ನೆಲ್ಲ, ನಿನ್ನೆಗಳಲ್ಲಿ ಹೆಜ್ಜೆಗುರುತು ಹಂಚಿಕೊಂಡವರನ್ನೆಲ್ಲ ಬಿಟ್ಟುಬಿಡುತ್ತೀಯಾ, ಹೇಗೆ?

jomon varghese said...

ಚೆನ್ನಾಗಿದೆ.

ರಜನಿ ಹತ್ವಾರ್ said...

Manasvini,
Kavana tumba chennagide. Adare bedada bevinallu aushadi gunavide alva?:)
ninnegalinda pallayanageyyade...
indinadinavannu sampurnavagi anubhavisutta... naalegala tumba nirikshe irali...
Preetiyinda
Rajani

ಇಳಾ said...

please see http://ilaone.blogspot.com

Shiv said...

ಮನಸ್ವಿನಿ,

ನೆನ್ನೆಗಳ ಮರೆಯುವುದಕ್ಕೆ ನೀವು ಯಾವಾಗ ಹೊರಟರೋ ಆವಾಗ ಗೊತ್ತಾಗಬೇಕಿತ್ತು , ನಮ್ಮಗಳ ನೆನಪು ಇರಲ್ಲ ಅಂತಾ :)

ಎನ್ರೀ ಸುದ್ದಿನೇ ಇಲ್ಲಾ..

Pramod P T said...

ಯಾಕೆ, ಎನೂ ಬರಿತಿಲ್ಲಾ!!

diwa..... said...

Manaswini.....
neevu tumba chennagi bareeteera....
eevotte first time nimma blog nodtha irodu....
fan aagbitte....

ಕನಸು said...

ತುಂಟ್ ಹುಡುಗಿಯ ಮುದ್ದು ಕಂಗಳಂತೆ
ನಿಮ್ಮ ಕವಿತೆ ಚೆನ್ನಾಗಿದೆ

ಸಾಗರದಾಚೆಯ ಇಂಚರ said...

ತುಂಬಾ ಚಂದದ ಕವಿತೆ

Suresh Sathyanarayana said...

su,

enaaytu.... yaake ee aakrosha? anyways.... neenu baredirodu aksharashaha nija.... nennagalu bidodilla indu samadhanavaagi kaleduhogokke... matte bheti aagbeku

Anonymous said...

swalpa improve madabahudu. aadare good try maga :)

Unknown said...

ninnegalige antikonde jeevana,,,
nalegala ashayadalle jeevana
indinadu nadeyuvudu gocharake silukadene,,,

Ramesha said...

Nimma kavana naijatheinda koodide, odi thumba santosha patte, heege saguthirali nimma kavanagala saramaale...

Ramesha Banasamudra Ramegowda

"ನವ್ಯಾಂತ" said...

ಕವಿತೆ ತುಂಬಾ ಚೆನ್ನಾಗಿದೆ

Vallish Kumar S said...

ಚನ್ನಾಗಿದೆ....

Vallish Kumar S said...

ಈ ನೆನಪುಗಳು ಹಲ್ಲಿಗೆ ಸಿಕ್ಕ ನಾರಿನ ಹಾಗೆ, ಯಾವುದೇ ಕೆಲಸದ ಕಡೆ ಗಮನ ಹೋಗದಂತೆ ತನ್ನ ಬಗ್ಗೆಯೇ ಚಿಂತಿಸುವಂತೆ ಮಾಡುತ್ತದೆ...

ಲೋಕು ಕುಡ್ಲ.. said...

ಸೊಗಸಾಗಿದೆ...ಆಂತರ್ಯ ಇಷ್ಟವಾಯಿತು, ನೇರ ಕಾಳಜಿಯ ತುಮುಲವಿಲ್ಲದ ಬರಹ..ಶುಭವಾಗಲಿ.

Ravishankara Shastry C said...

Good poem...

nagusa dani said...

nice one..

suragange.blogspot.com said...

channagide.

shobha said...

ನಮಸ್ತೆ ಮನಸ್ವಿನಿ ಮೇಡಂ ಅವರಿಗೆ, ಆರಾಮಾಗಿದ್ದೀರಾ???ನಿಮ್ಮ ಬ್ಲಾಗು ತುಂಬಾ ಚೆನ್ನಾಗಿದೆ, ಎಲ್ಲಾ ಕವನಗಳು ಮನಸ್ಸಿಗೆ ಮುದ ನೀಡುದಂತಿವೆ. ಹೀಗೆ ಬರೀತಾ ಇರಿ. ನಿಮ್ಮಂತಹ ಒಳ್ಳೆಯ ಬರಹಗಾತಿ೵ಗೆ ನಮ್ಮಂತ ಓದುಗರು ಯಾವಾಗಲು ತರುತ್ತೇವೆ.

prashasti said...

ಅಬ್ಬ !! ಎಂಥಾ ಕವನ .. ಚೆನ್ನಾಗಿದೆ :-)

prashasti said...

ಅಬ್ಬ !! ಎಂಥಾ ಕವನ .. ಚೆನ್ನಾಗಿದೆ :-)

prashasti said...

ಅಬ್ಬ !! ಎಂಥಾ ಕವನ .. ಚೆನ್ನಾಗಿದೆ :-)

prashasti said...

ಅಬ್ಬ !! ಎಂಥಾ ಕವನ .. ಚೆನ್ನಾಗಿದೆ :-)

prashasti said...

ದಯವಿಟ್ಟು ಕ್ಸಮಿಸಿ .Browser ತಾಂತ್ರಿಕ ದೋಷದಿಂದ ಹೀಗೆ ನಾಲ್ಕು ಬಾರಿ ಪೋಸ್ಟ್ ಆಗಿದೆ.. ನಿಮ್ಮ ಬ್ಲಾಗು, ಇತರ ಕವನಗಳೂ ಚೆನ್ನಾಗಿವೆ :-)

ಪ್ರವರ ಕೊಟ್ಟೂರು said...

ನಿನ್ನೆಯೆಂದರೇ ಹಾಗೆ!
ಬೆನ್ನು ಬಿಡದ ಭೂತದಂತೆ,

ನಿಮ್ಮ ನಿನ್ನೆಯ ಪದ್ಯ ಓದಿಸಿತು, ಮತ್ತೊಮ್ಮೆ ಓದಿಸುವಂತಾಗಿತು.....

ಜಲನಯನ said...

ಮನಸ್ವಿನಿ..ಚನ್ನಾಗಿದೆ...ಹೌದು ಇತ್ತೀಚೆಗೆ ಬ್ಲಾಗ್ ಬಿಟ್ಟು ಎಫ್ಬಿಲಿ ಮಗ್ನರಾಗಿ ಹೀಗೇ... ರೋಷಾವೇಶ ಇದಕ್ಕೇನಾ...??