Friday, October 17, 2008

ಕೊನೆಗೊಂದು ಹಾಡು

ಮರಳುಗಾಡಿನಂತ ಬಿಸಿಲ ಉರಿ.
ನನ್ನ ಕಾಲಿಗಂಟಿ ಜೊತೆಬರುವ
ಕರಿಯ ದೊಡ್ಡ ನೆರಳು.
ಅದರ ಎದೆಯಲ್ಲೊಂದು ನಡುಕ
ಅದರೆದೆಯಿಂದ ಕಾಲಿಗಿಳಿದ
ಚಳಿ,ಭಾರೀ ಚಳಿ,
ನನ್ನ ಪಾದದೊಳಗೂ ಸೇರಿ
ಎದೆಯ ಗೂಡಿನೊಳಗೆಲ್ಲ
ನಡುಕ ,ಅಸಾಧ್ಯ ನಡುಕ.

ತುಟಿಯ ಪಟಪಟ,
ಸೆಟೆದು ನಿಂತ ರೋಮ.
ದಾರಿ ತಪ್ಪಿದ ಬಾಣ
ಬೆನ್ನ ಸೀಳಿ,
ಉಸಿರ ಬಿಗಿದಂತೆ.
ಕಣ್ಣು ಕತ್ತಲು.
ಅಡಿ ಕೆಳಗಿನ ಭೂಮಿ
ಒಡೆದು ಒಳ ಎಳೆಯುವಂತೆ
ಇಲ್ಲೇ ಇದ್ದ ನಾನು
ಇನ್ನಿಲ್ಲವಾಗುವಂತೆ
ಇಲ್ಲಿ ಎಲ್ಲವೂ
ಕೊನೆಗೊಂದು ಹಾಡು ಕಟ್ಟುತ್ತಿವೆ.

20 comments:

harish said...

ಕರಿಯ ದೊಡ್ಡ ನೆರಳು, ಅದರ ನಡುಕ, ಎದೆಯ ಗೂಡಿನೊಳಗೆಲ್ಲ ನಡುಕ...ಇಲ್ಲೇ ಇದ್ದು ಇನ್ನಿಲ್ಲವಾಗುವ ಪರಿ- ಇಲ್ಲೂ ನಿಮಗೆ ಹಾಡು ಕೇಲಿಸಿದ್ದೇ ವಿಸ್ಮಯ!!!

harish said...

ಕರಿಯ ದೊಡ್ಡ ನೆರಳು, ಅದರ ನಡುಕ, ಎದೆಯ ಗೂಡಿನೊಳಗೆಲ್ಲ ನಡುಕ...ಇಲ್ಲೇ ಇದ್ದು ಇನ್ನಿಲ್ಲವಾಗುವ ಪರಿ- ಇಲ್ಲೂ ನಿಮಗೆ ಹಾಡು ಕೇಳಿಸಿದ್ದೇ ವಿಸ್ಮಯ!!!

Niveditha said...

ಕವಿತೆ ತುಂಬಾ abstract ಆಗಿ ಇದೆ.. ನನಗೆ ಇಷ್ಟ ಆಯ್ತು.. specially
ಇಲ್ಲೇ ಇದ್ದ ನಾನು
ಇನ್ನಿಲ್ಲವಾಗುವಂತೆ
ಇಲ್ಲಿ ಎಲ್ಲವೂ
ಕೊನೆಗೊಂದು ಹಾಡು ಕಟ್ಟುತ್ತಿವೆ.
saalugaLu.

sunaath said...

ನೆರಳ ಕಾಲಿನ ಚಳಿ ಎದೆಯ ಗೂಡಿಗೆ ಸೇರುವದು ತುಂಬಾ ಅರ್ಥಪೂರ್ಣವಾಗಿದೆ.

Unknown said...

ಉರಿ ಬಿಸಿಲು, ಮರಳುಗಾಡು, ಕರಿ ನೆರಳು, ಛಳಿ ಆ ತುದಿಯಿಂದ ಈ ತುದಿಯವರೆವಿಗೆ ಮನದಲಿ ಅಲೆಗಳ ಹೊಯ್ದಾಟ - ಬಹಳ ಸುಂದರವಾದ ಇನ್ನೊಂದು ಕವನ. :)

ಚಳಿಯ ಬದಲು ಛಳಿ, ಒತ್ತು ನೀಡುತ್ತಿತ್ತೇನೋ - ಹಾಗೆಯೇ ತುಟಿಯ ಪಟಪಟದೊಂದಿಗೆ ಹಲ್ಲುಗಳ ಕಟಕಟ ಸೇರಿಸಬಹುದಿತ್ತೇನೋ

jomon varghese said...

nice

Kumara Raitha said...

ಇಲ್ಲಿ ರೂಪಕಗಳು ಕ್ಲೀಷೆಯಂತೆ ಬಳಸಲ್ಪಟಿವೆ.ಮರಳುಗಾಡಿನಂತ
ಬಿಸಿಲ ಉರಿ;ಎಂದರೇನು.’ಮರಳುಗಾಡು”ಎನ್ನುವುದೇ ಅಲ್ಲಿಯ ಸ್ಥಿತಿ ವಿವರಿಸುತ್ತದೆ.ಇಡೀ ಕವನವೇ ಗೊಂದಲಮಯ

Prakash Payaniga said...

kawana chennagide. praasabaddhawaagi brediddare innashtu sundarawaagi moodibaruttittu.

ಸುಪ್ತದೀಪ್ತಿ suptadeepti said...

ನೆರಳಿನಿಂದಲೇ ಛಳಿಯೇರುವ ಕಲ್ಪನೆ ವಿಶೇಷವಾಗಿದೆ.

Anonymous said...

ಕವನ ಇಷ್ಟವಾಯಿತು.

MD said...

ಕವಿತೆಯ ಶೀರ್ಷಿಕೆಯೇ ನಿಮ್ಮ ಅಭಿಪ್ರಾಯವಾದ ಹಾಗಿದೆ!!!

Seeji said...

Where are you? You havent written for a long time now. We are waiting.

'Konegondu haadu' yenaadroo koneya haada??

Please come back with more.

ಮನಸ್ವಿನಿ said...

Thank you all for the comments. I will be back very soon.

Wish you all a happy new year.

Santhosh Rao said...

Chennagide..

Anonymous said...

ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟ

Pramod P T said...

ಯಾಕ್ ಸುರೇಕಾ, ಎನೂ ಬರೀತಿಲ್ಲಾ ಇತ್ತೀಚೆಗೆ?

ಮಿಥುನ ಕೊಡೆತ್ತೂರು said...

ಚೆಂದದ ಕವನ

ಮಿಥುನ ಕೊಡೆತ್ತೂರು said...

ಚೆಂದದ ಕವನ

ರಾಜೇಶ್ ನಾಯ್ಕ said...

ಸುರೇಖಾ,

ತಮ್ಮ ಈಮೈಲ್ ವಿಳಾಸವನ್ನು ತಿಳಿಸಬಹುದಾ? ಇಲ್ಲಿಗೆ
r26n at yahoo dot co dot in ಮೈಲ್ ಮಾಡುವಿರಾ?

Mahesh kumar M H said...

ಇಲ್ಲೇ ಇದ್ದ ನಾನು
ಇನ್ನಿಲ್ಲವಾಗುವಂತೆ...ಕವನ ಚೆಂದ ಇದೆ...