ಯಾವ ಸುಳಿವು ಇಲ್ಲದೆ
ಹಾಗೇ,ನೇರವಾಗಿ
ಆತ್ಮಕ್ಕೆ ಇಳಿದು
ನನ್ನ ಒಳಗಿನ ಜೀವದೆಳೆಗಳಿಗೆ
ಸಾವಿರ ದೀಪಗಳ ಬೆಳಕು
ಗುಲಾಬಿ ಪರಿಮಳದ ಲೇಪ
ಒಲವಿನ ಮಹಾನದಿಯ ಹರಿವು
ಹಸಿರ ಮರಗಳ
ಪುಟ್ಟಹಕ್ಕಿಯ ಇಂಪು
ತಂಪೆರೆಯುವ ಗಾಳಿ
ಅರಳಿ ನಗುತಿರುವ
ಬಳ್ಳಿ ಹೂ ಗೊಂಚಲು
ಅದೇನೋ ಧನ್ಯತಾ ಭಾವ
ಕ್ಷಣಮಾತ್ರದೊಳಗೆ
ನನ್ನ ಲೋಕವೆಲ್ಲ ಚಂದ ಚಂದ.
ಯುಗ ಯುಗಗಳವರೆಗೆ
ಇಲ್ಲಿ ಹೀಗೆ
ಇದ್ದು ಬಿಡುವ
ಎಂದೆನ್ನಿಸುವ
ನಿನ್ನ ಜೊತೆಗೆ
ನಾನೇನು ನೀಡಲಿ?
Subscribe to:
Post Comments (Atom)
26 comments:
simple n beautiful:)
ವಾಹ್ ವಾಹ್. ಅಂತೂ ಸಿಕ್ಬಿಟ್ನ? ಕಂಗ್ರಾಟ್ಸು.
"ಹೇಳು, ನಾನೇನು ನೀಡಲಿ? "
May be one masala dose?:-)
ಯಾವ ಸುಳಿವು ಇಲ್ಲದೆ
ಹಾಗೇ,ನೇರವಾಗಿ
ಆತ್ಮಕ್ಕೆ ಇಳಿದು
ನನ್ನ ಒಳಗಿನ ಜೀವದೆಳೆಗಳಿಗೆ
ಸಾವಿರ ದೀಪಗಳ ಬೆಳಕು
ಗುಲಾಬಿ ಪರಿಮಳದ ಲೇಪ
ಒಲವಿನ ಮಹಾನದಿಯ ಹರಿವು
ಸಾಲುಗಳು ತುಂಬಾ ಇಷ್ಟವಾದವು . ನಿಮ್ಮ ಬರವಣಿಗೆ ನಿರಂತರವಾಗಿರಲಿ, ನಿಲ್ಲಿಸದಿರಿ
ಮನಸ್ವಿನಿ,
ತುಂಬಾ ಸುಂದರವಾದ ಕವನ.
-ಕಾಕಾ
ಮ.ಮಾ:
(ಭಾಗವತರ ಮಸಾಲೆ ದೋಸೆಯ ಮೇಲೆ ಭರವಸೆ ಇಡೋ ಹಾಗಿಲ್ಲ.)
ಪ್ರೀತಿಯ ನಶೆ ಮೈ-ಮನದಲ್ಲಿ ಇಳಿದಾಗ ಅರಳುವ ಭಾವಗಳನ್ನು ಸೂಕ್ಷ್ಮವಾಗಿ ಸುಂದರವಾಗಿ ಚಿತ್ರಿಸಿದ್ದೀರ.
--masala dose (MD)
hige channagiroo kavanagalanna nidtha iriastu saku
ವ್ಹಾ ಸಖತ್ ಫೀಲಿಂಗ್ ಸೃಷ್ಟಿ ಮಾಡುತ್ತವೆ ಇಂತಹ moody ಸಾಲುಗಳು...ಬೆಳಗ್ಗಿನ ಕಾಫಿ ಜತೆಗೆ ಬಿಸ್ಕತ್ತಿನ ಹಾಗೆ
ಚಂದ ಕವನ,:)
"ಮನಸ್ಸು", ಮನಸ್ಸು ನೀಡಿದರೆ..
ಸುಂದರವಾದ ಕವನ, ಓದಿ ಸಂತೋಷವಾಯಿತು :)
ಮತ್ತೊಂದು ಸುಂದರವಾದ ಕವನ - ಅತಿ ಸುಂದರವಾದ ಪದಗಳ ಜೋಡಣೆ
ಮಹಾನದಿಯ ಅಣೆಕಟ್ಟಿನಲ್ಲಿ ಬಿರುಕು ಬಿಡುತ್ತಿದೆಯಂತೆ :D
ಸಂತೋಷದ ಸುದ್ದಿಯನ್ನು ಅತ್ತ ಕಡೆ ಬಂದು ಹೇಳಿ :P
ಭಾವಪೂರ್ಣ ಕವನ...ಚೆನ್ನಾಗಿದೆ.. ಇನ್ನೇನು ಹೇಳಲಿ? :)
ಕವಿತೆ ಚಂದ ಚಂದ.:)
mmjexpManaswini,
kavana tumbaa chennagide. Nanna salahe andre neevu patrikegu kalisi. Innu jaasti janarannu talupabahudu.(bitti salahe anta nagtira?]
Saraswathi Nataraj.
0
ಹೋಗಿ ಇದ್ದಬಿಟ್ಟರಾಯ್ತು, ಮತ್ತೇನನ್ನು ನೀಡುವ ಪ್ರಮೇಯ ಯಾಕೆ ಹೇಳಿ?
ಸುಂದರವಾಗಿ ಕವಿತೆ ಮೂಡಿಬಂದಿದೆ, ನಾನೇನು ನೀಡಲಿ? ಎಂದು ಕೇಳಿದ್ದೀರಾ....
"ಯಾವಾಗಲು ಹೀಗೆ ಇದಕ್ಕಿಂತ ಸುಂದರ ಕವಿತೆಗಳನ್ನು ಕೊಡುತ್ತಾ ಇರಿ" ಎಂದಷ್ಟೇ ಕೇಳುತ್ತೇನೆ
ಶ್ರೀ,
ಥ್ಯಾಂಕ್ಸ್ :)
ಭಾಗವತ,
ಗುರ್ರ್ ಗುರ್ರ್..ಬರಿಯ ಕಲ್ಪನೆ.
ಮಸಾಲೆ ದೋಸೆನಾ? ಪಾರ್ಸಲ್ ಮಾಡ್ಲಾ?
ಥ್ಯಾಂಕ್ಸ್ :)
ದಿವಂಗತ,
ಥ್ಯಾಂಕ್ಸ್ :)
ಕಾಕಾ,
ಥ್ಯಾಂಕ್ಸ್ :)..ಹೌದು..ನಂಗೂ ಭರವಸೆ ಇಲ್ಲ.
md,
ಥ್ಯಾಂಕ್ಸ್ :) ಭಾಗವತರು ನಿಮ್ಮ ಕರೀತಿದ್ದಾರೆ ನೋಡಿ.
ಪ್ರಾಂಜಲೆ,ಪಾಲಚಂದ್ರರೆ,
ನನ್ನ ಬ್ಲಾಗಿಗೆ ಸ್ವಾಗತ. ಸ್ಪಂದನಕ್ಕೆ ಧನ್ಯವಾದಗಳು.
ವೇಣು, ಶ್ರೀನಿಧಿ,
ಥ್ಯಾಂಕ್ಸ್ :)
ಶ್ರೀನಿವಾಸ್ ಸರ್,
ಥ್ಯಾಂಕ್ಸ್ :) ಬರಿಯ ಕಲ್ಪನೆ ಅಷ್ಟೆ. :)
ತೇಜಸ್ವಿನಿ, ಜೋಮನ್
ಥ್ಯಾಂಕ್ಸ್ :)
ಸರಸ್ವತಿಯವ್ರೇ,
ಬಹಳ ದಿನ ಆದ್ಮೇಲೆ ನಿಮ್ಮನ್ನು ಇಲ್ಲಿ ನೋಡಿ ಸಂತೋಷವಾಯ್ತು. ನೀವ್ಯಾಕೆ ಈಗೀಗ ಬರೆಯುತ್ತಿಲ್ಲ?
ನಿಮ್ಮ ಸಲಹೆಯನ್ನು ಖಂಡಿತ ಪರಿಗಣಿಸುತ್ತೇನೆ :) ಬರ್ತಾ ಇರಿ.
ಸಿಮ್ಮಾ,
ಥ್ಯಾಂಕ್ಸ್ :) ಬರಿಯ ಕಲ್ಪನೆ...ಎಲ್ಲಿಗೂ ಹೋಗುವ ಪ್ರಮೇಯ ಇಲ್ಲ :)
ಮನಸ್ವಿ,
ಥ್ಯಾಂಕ್ಸ್ :) ಹಾಗಂತೀರಾ? ಆಯ್ತು :)
thumba chennagide.. ishtavaythu
ಸುಂದರ ಹಾಗೂ ಸರಳ ಕವನ. ಇಷ್ಟವಾಯ್ತು.
ಶಿವು.ಕೆ
ಥ್ಯಾಂಕ್ಸ್ Seeji.
ಶಿವು,
ನನ್ನ ಬ್ಲಾಗಿಗೆ ಸ್ವಾಗತ. ಸ್ಪಂದನಕ್ಕೆ ಧನ್ಯವಾದಗಳು.
chennagide..ishTa aaitu :)
sakat ishta aaitu
superb naanu neevista patta books n film nannistadave aagive i love you
pls contact me ninnolumeyinda@gmail.com mobile 9738487662
ಕ್ಷಣಮಾತ್ರದೊಳಗೆ
ನನ್ನ ಲೋಕವೆಲ್ಲ ಚಂದ ಚಂದ.
ಯುಗ ಯುಗಗಳವರೆಗೆ
ಇಲ್ಲಿ ಹೀಗೆ
ಇದ್ದು ಬಿಡುವ
ಎಂದೆನ್ನಿಸುವ
ನಿನ್ನ ಜೊತೆಗೆ
really ತುಂಬಾ ಚೆನ್ನಾಗಿದೆ.... ಬಹುಶಃ ಪ್ರೀತಿ ಮಾಡಿದವರಿಗೆ, ಮಾಡುತ್ತಾ ಇರುವವರಿಗೆ ನಿಮ್ಮ ಕವನ ತುಂಬಾ ಪ್ರೇರಣೆ..... ಹೀಗೆ ಇನ್ನು ಒಳ್ಳೆ ಒಳ್ಳೇ ಕವನಗಳನ್ನ ಬರಿತ್ತಿರಿ ನಮಗು ಓದಲು ಅವಕಾಶ ಮಾಡಿಕೊಡಿ....
ಕ್ಷಣಮಾತ್ರದೊಳಗೆ
ನನ್ನ ಲೋಕವೆಲ್ಲ ಚಂದ ಚಂದ.
ಯುಗ ಯುಗಗಳವರೆಗೆ
ಇಲ್ಲಿ ಹೀಗೆ
ಇದ್ದು ಬಿಡುವ
ಎಂದೆನ್ನಿಸುವ
ನಿನ್ನ ಜೊತೆಗೆ
really ತುಂಬಾ ಚೆನ್ನಾಗಿದೆ.... ಬಹುಶಃ ಪ್ರೀತಿ ಮಾಡಿದವರಿಗೆ, ಮಾಡುತ್ತಾ ಇರುವವರಿಗೆ ನಿಮ್ಮ ಕವನ ತುಂಬಾ ಪ್ರೇರಣೆ..... ಹೀಗೆ ಇನ್ನು ಒಳ್ಳೆ ಒಳ್ಳೇ ಕವನಗಳನ್ನ ಬರಿತ್ತಿರಿ ನಮಗು ಓದಲು ಅವಕಾಶ ಮಾಡಿಕೊಡಿ....
Super!…… ಎಲ್ಲವೂ ಈ ಮುದ್ದು ಮನಸ್ಸಿನಿಂದ, ಮನಸಾರೆ..
Checkout my blog : http://muddumanassu.blogspot.com/
Post a Comment