ಬಸ್ ಇಳಿದು, ರಸ್ತೆ ದಾಟಿ, ಸಣ್ಣದೊಂದು ಗಲ್ಲಿಯಲ್ಲಿ ನಡೆದು ಮನೆಗೆ ಹೋಗುತ್ತಿದ್ದ ನನ್ನನ್ನು ಅಲ್ಲೇ ಆಡುತ್ತಿದ್ದ ಮಕ್ಕಳ ಗುಂಪು ಸೆಳೆಯಿತು. ೪-೫ ಮಕ್ಕಳು. ಒಬ್ಬಳ ಹತ್ರ ಚಂದದ ಪುಟಾಣಿ ಸೈಕಲ್ ಇತ್ತು. ಸ್ಟೈಲಾಗಿ ಬಂದು ಸೈಕಲ್ ಹತ್ತಿದ್ಲು. ಇನ್ನು ಉಳಿದವರು ಅವಳನ್ನೇ ನೋಡ್ತಾ ಇದ್ರು. ಪುಟ್ಟ ಪುಟ್ಟ ಕಣ್ಣುಗಳಲ್ಲಿ ಸೈಕಲ್ ಮೇಲಿನ ಆಸೆ.
ಅವರ ನಡುವೆ ನಡೆದ ಸಂಭಾಷಣೆ ಹೀಗಿತ್ತು .
ಸೈಕಲ್ಲಿನ ಹುಡುಗಿ (ಸೈ.ಹು): ಹೇ ಸರಿಯೋ. ದಾರಿ ಬಿಡೋ.
ಪುಟಾಣಿ ಹುಡುಗ(ಪು.ಹ೧) : ಆಯ್ತು ಹೋಗೇ.
ಮತ್ತೊಬ್ಬ ಪುಟಾಣಿ (ಪು.ಹು೨) ಓಡಿ ಬಂದು ಸೈಕಲ್ ರಾಣಿಯನ್ನ ನಿಲ್ಲಿಸಿದ.
ಸೈ.ಹು : ಏನೋ?
ಪು.ಹು೨ (ಕಿವಿಯಲ್ಲಿ ನಿಧಾನಕ್ಕೆ ) : ನನಗೊಂದು ರೌಂಡ್ ಕೊಡೇ. ( ಎಲ್ಲಾರಿಗೂ ಗೊತ್ತಾದ್ರೆ, ಎಲ್ಲರೂ ಅವಳನ್ನ ಕೇಳಿದ್ರೆ, ತನಗೆ ಅವಕಾಶ ಕಡಿಮೆ ಆಗಬಹುದು ಅಂತ ಗುಸುಗುಸು ಮಾಡಿದ ಅಂತ ನನ್ನ ಅಂದಾಜು.)
ಸೈ.ಹು : ಊಹೂಂ, ಈಗ ಆಗೋಲ್ಲ .
ಪು.ಹು೨: ಕೊನೆಗೆ ಕೊಡ್ತೀಯಾ?
ಸೈ.ಹು: ಊಹೂಂ .
ಪು.ಹು೨: ಪ್ಲೀಸೆ .....
ಸೈ.ಹು: ಇಲ್ಲಪ್ಪ, ಅಪ್ಪ ಬಯುತ್ತೆ .
ಪು.ಹು೨: ಇಲ್ವೇ, ಒಂದೇ ರೌಂಡ್. ಪ್ಲೀ........ಸೇ
ಸೈ.ಹು: ಇಲ್ಲಪ್ಪ, ಅಪ್ಪ ಬಯುತ್ತೆ .
ಪು.ಹು೨: ಹೋಗೇಲೇ( ಪೂರ್ತಿ ಟೋನ್ ಬದಲಾವಣೆ, ಇದ್ದಕಿದ್ದ ಹಾಗೆ!)..ನಿಂದೊಬ್ಬಳದೇನಾ ಸೈಕಲ್?... ನಮ್ಮ ಅಪ್ಪಂಗೂ ಹೇಳಿ ನಾನು ತಗೋತೇನೆ, ನೋಡ್ತಾ ಇರು. ನಿನಗಿಂತ ಚೆನ್ನಾಗಿರೋದು.
ಸೈ.ಹು: ಆಯ್ತು, ತಗೋಳೋ. ಮತ್ಯಾಕೆ ಕೇಳ್ತೀಯಾ?( ಪೂರ್ತಿ ಸ್ಟೈಲು)
ಪು.ಹು೨: (ಉಳಿದವರ ಹತ್ರ) ಸರಿ ಬನ್ರೋ, ನಾವು ಆಡೋಣ, ಅವಳ್ನ ಸೇರಿಸ್ಕೊಳ್ಳೋದು ಬೇಡ.
ಸೈ.ಹು: (ಹಾಗೆ ನಿಂತು, ಅಳೋ ಮುಖ ಮಾಡ್ಕೊಂಡು) ಅಮ್ಮಾ.................
ಅದನ್ನೇ ನೋಡ್ತಾ ಇದ್ದ ನಂಗೆ ಒಳ್ಳೆ ತಮಾಷೆ ಅನ್ಸ್ತು. ಇನ್ನು ನಾನು ನೋಡ್ತಾ ಇರೋದು ನೋಡಿ, ಆ ಸೈ.ಹು "ಅಪ್ಪಾ........... " ಅನ್ನೋ ಮೊದಲೇ ಜಾಗ ಖಾಲಿ ಮಾಡಿದೆ.
( ಮಕ್ಕಳ ಮಾತು ಕೇಳ್ತಾ ಇದ್ರೆ, ಎಂತ ಚಿಂತೆ ಆದ್ರೂ ಸ್ವಲ್ಪ ಮಟ್ಟಿಗೆ ಕಳೆದು ಹೋಗುತ್ತೆ. ಅಲ್ವಾ? )
Subscribe to:
Post Comments (Atom)
5 comments:
ಸೈ.ಹು."ಅಪ್ಪಾ..." ಅನ್ನೋ ಮೊದಲೆ ಜಾಗ ಖಾಲಿ ಮಾಡಿದೆ.
Wonderful!
-ಕಾಕಾ
ಹಾ ಹಾ ಹಾ..
ಮಜ್ವಾಗಿರುತ್ತೆ ಮಕ್ಳು ಆಡೋ ಮಾತನ್ನಾ ಕೇಳ್ತಾ ಇರೋಕೆ.
ಸುನಾಥ ಮೇಲೆ ಹೇಳಿದ್ ಸಾಲ್ಗೇ ನನ್ಗೂ ನಗೆ ಬಂತು..
as usual ಹುಡ್ಗೀರ್ ಕೊನೆ ಅಸ್ತ್ರ 'ಕುಯ್ಯೋ.. ಮರ್ರೋ..'
"ಅಪ್ಪಾ..." ರಾಗಾ ಎಳೆದೇ ಬಿಡೋದು.
http://www.kannadaprabha.com/News.asp?ID=KPO20080608110013
ಕನ್ನಡಪ್ರಭದ ಮುಖಪುಟದಲ್ಲಿ ಮಿಂಚಿದ್ದಕ್ಕೆ ಅಭಿನಂದನೆಗಳು. ನೀವು ಬ್ಲಾಗಿನಿ/ಬ್ಲಾಗಿಣಿ ಅಂತ ಅನ್ಕೊಂಡಿದ್ದೆ. ’ಬ್ಲಾಗಿಗ’ ಆಗಿ ಪರಿವರ್ತನೆಯಾಗಿದ್ದಕ್ಕೂ ಹೃತ್ಪೂರ್ವಕ ಅಭಿನಂದನೆಗಳು :-)
ಏನಾಯ್ತು ಮನಸ್ವಿನಿಯವರೆ. ಸೈಕಲ್ಲು ಪಂಕ್ಚರ್ ಆಗಿದೆಯೇ? ನಿಂತೇಬಿಟ್ಟಿದೆಯಲ್ಲ !
Post a Comment