Saturday, February 23, 2008

ಹನಿಗಳು - ೨

ನಿನ್ನ ಕಿರುನಗೆಯಿಂದ
ನನ್ನೀ ಎದೆಯೊಳಗೆ
ಕನಸುಗಳ ದೀಪಾವಳಿ
************************
ಒಲವಿನ ಹಣತೆಯನ್ನು
ಎದೆಯೊಳಗೆ ಹೊತ್ತಿಸಿಟ್ಟಿದ್ದೆ
ಹಣತೆ ವಾಲಿ, ಹೃದಯ ಹೊತ್ತಿ
ಈಗ ಬರಿಯ ಬೂದಿ
************************
ನನ್ನವರೆಲ್ಲ ಜೊತೆಯಲ್ಲೇ
ನಡೆಯುತ್ತಿದ್ದಾರೆ
ನನ್ನ ದಾರಿಗೂ, ಅವರ ದಾರಿಗೂ
ಸಮಾನಾಂತರ!
************************
ಹೆಜ್ಜೆಗುರುತ ಹಿಡಿದು
ಹಿಂದೆ ಬರುತ್ತಿದ್ದವಳನ್ನು
ನೋಡಿ ನಕ್ಕು
ಗಾಳಿಯಲ್ಲಿ ತೇಲಿಹೋದ

17 comments:

Anonymous said...

'ಸರಿ'ಯಾದ ಹನಿಗಳು ಮನಮುಟ್ಟಿದವು.

Shiv said...

ಅದಕ್ಕೆ ಹೇಳೋದು ರೀ..
ಫೈರ್ ಫ್ರೂಪ್ ಹೃದಯ ಇರಬೇಕು ಅಂತಾ..ಆವಾಗ ಯಾವ ಹಣತೆ ವಾಲಿದರೂ ಎನೂ ಆಗೋಲ್ಲಾ :)

ಸವಿಯಾಗಿತ್ತು ಹನಿಗಳು

ನಾವಡ said...

ಎರಡನೇ ಮತ್ತು ನಾಲ್ಕನೇ ಹನಿಗಳು ಇಷ್ಟವಾದವು. ಹೇಗೇ ಬರೀತೀರೋ ?
ನಾವಡ

MD said...

:-)

ರಾಜೇಶ್ ನಾಯ್ಕ said...

ವೇದನೆ ಭರಿತ ಹನಿಗಳು. ಚೆನ್ನಾಗಿವೆ.

ಶಾಂತಲಾ ಭಂಡಿ (ಸನ್ನಿಧಿ) said...

ಮನಸ್ವಿನಿ...
ಅದೇನ್ ಬರೀತೀಯ ಅಂತ? ಎಲ್ಲಿಂದ ತಗೋಂಬರ್ತೀಯಾ ಸಾಲುಗಳನ್ನ? ಕಿಲೋಗೆ ಎಷ್ಟು ರೂಪಾಯಿ :)?

ಪ್ರತಿಸಾಲುಗಳೂ ಚೆನ್ನ, ಇದೇ ಸಾಲು ಅಂತ ಹೇಳೋಕೋದ್ರೆ ನಾನಿಲ್ಲಿ ಇಡೀ ಕವನನೇ ಬರೀಬೇಕಾಗತ್ತೆ.ತುಂಬ ಇಷ್ಟವಾಯ್ತು.

Deep said...

ತುಂಬಾ ಚನ್ನಾಗಿ ಬಂದಿವೆ ... ಹನಿಗಳು.. ...

ಶ್ವೇತಾ ಹೆಗಡೆ said...

boodiyadaddu hrudayavo, olavina hanateyo? athava iverado... ee bagge nannalli vishadavide....salugalu nijavagiyoo khushi kottavu

chethan said...

hanigaLella chennagive

sunaath said...

ಹನಿಗಳು Honey ಆಗಿವೆ. ಆದರೆ ಕಣ್ಣ ಹನಿ ಯಾಕೆ? ಜೇನು ಹನಿ ok!

Sushrutha Dodderi said...

ಏನೋ ಒಂಥರಾ ಚನಾಗಿದ್ದು! ಮೂರ್ನೇ ಹನಿ ’ತಾಗ್ಚು’.

ಸುಪ್ತದೀಪ್ತಿ suptadeepti said...

ಎಲ್ಲ ಹನಿಗಳೂ ಚೆನ್ನಾಗಿವೆ.

Anveshi said...

ಈ ಕಣ್ಣೀರ ಹನಿಗಳಿಗೆ ಮೊದಲನೇ honey ಯೇ ಮೂಲ ಕಾರಣ. ಹಾಗಾಗಿ ಕನಸುಗಳ ದೀಪಾವಳಿಯಿಲ್ಲದಿದ್ದರೆ ಬೂದಿಯೂ ಇಲ್ಲ, ನೋವೂ ಇರೋದಿಲ್ಲ...

ಮನಸ್ವಿನಿ ಅವರೆ, ಸ್ವಲ್ಪ ಸುಧಾರಿಸಿಕೊಳ್ಳಿ. ;)

ಮನಸ್ವಿನಿ said...

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು :)

Anonymous said...

Nieevu bareva reethi tumba tumba muddaagide..padagala jodane adbhutavaagide…

Nanna putaani blog

www.navilagari.wordpress.com

idakke nimma blaag rolnalli swalpa jaaga kodi:)

Nimma somu

ಮನಸ್ವಿನಿ said...

Somu,

ಆಯ್ತು :) ಜಾಗ ಕೊಟ್ಟಿದ್ದೇನೆ .

www.rajaravishankar.blogspot.com said...

ತುಂಬ ಚೆನ್ನಾಗಿ ಬರಿತಿರಾ ಕವಿತೆಗಳನ್ನು.ಸಾಫ್ಟ್ವೇರ್ ಇಂಜನಿಯರ್ ಆಗಿಯೂ ಇಷ್ಟೊಂದು ಸುಂದರವಾಗಿ ಕನ್ನಡದಲ್ಲಿ ಬರೆಯುವವರು ಈ ಕಾಲದಲ್ಲಿ ತುಂಬ ಅಪರೂಪ.ಸಾಹಿತ್ಯದ ಆಸಕ್ತಿ ಉಳಿಸಿಕೊಂಡ ಇಂಜನಿಯರಗಳು ಕಡಿಮೆ ಎನ್ನಲು ಅಡ್ಡಿ ಇಲ್ಲ.ನಿಮ್ಮ ಬರಹಗಳು ತುಂಬ ಖುಶಿ ಕೊಡುತ್ತವೆ.