Wednesday, January 30, 2008

ಈಗೀಗ ರಾತ್ರಿಗಳಲ್ಲಿ

ಈಗೀಗ ರಾತ್ರಿಗಳಲ್ಲಿ
ಅವನು ಸೂತ್ರಗಳನ್ನು
ಸಡಿಲಗೊಳಿಸುತ್ತಿರಬೇಕು
ಆಕಾಶಕ್ಕೆ ಅಂಟಿಕೊಂಡ ಚುಕ್ಕಿಗಳೆಲ್ಲ
ಧಪ್ ಎಂದು ಮನೆಯಂಗಳದಲ್ಲಿ
ಬೀಳುತ್ತಿವೆ ; ಪಂಜುಗಳಾಗುತ್ತಿವೆ.
ಸ್ವಲ್ಪ ಮಿಸುಕಾಡಿದರೂ ಸಾಕು
ನಾನು ಹೊತ್ತಿಕೊಳ್ಳುತ್ತೇನೆ.
ಜೊತೆಗೆ ನನ್ನ ಗುಡಿಸಲು,
ಸುತ್ತಲಿನ ಕಪ್ಪು ಭೂಮಿ.
ಸಂಜೆಗಳಲ್ಲಿ ಮೂಲೆ ಸೇರಿಬಿಡುತ್ತೇನೆ,
ಏಳುವುದೇ ಇಲ್ಲ.
ಚುಕ್ಕಿಗಳು ಬೀಳುತ್ತಲೇ ಇವೆ.
ನನಗೆ ತಲೆಭಾರ.
ಈಗೀಗ ರಾತ್ರಿಗಳಲ್ಲಿ
ನಾನು ಅರೆ ಹುಚ್ಚಿ.

27 comments:

Sushrutha Dodderi said...

ಪಾಪ, ಮನಸ್ವಿನಿ.. ;-/

Anonymous said...

wow!!

-Shyama S.

Anonymous said...

welcome to the club ;-)

Sree said...

thumba chennaagide! sakhat mature writingu!

ಶಾಂತಲಾ ಭಂಡಿ (ಸನ್ನಿಧಿ) said...

ಮನಸ್ವಿನಿ...
ಸುಂದರ ಕಲ್ಪನೆ...
ಇಷ್ಟವಾಯಿತು.

VENU VINOD said...

ಅವ್ಯಕ್ತ ಅನುಭವದ ಅಭಿವ್ಯಕ್ತಿ ಇಷ್ಟವಾಯ್ತು

ಮಹೇಶ ಎಸ್ ಎಲ್ said...

ಈಗೀಗ ರಾತ್ರಿಗಳಲ್ಲಿ
ಅವನು ಸೂತ್ರಗಳನ್ನು
ಸಡಿಲಗೊಳಿಸುತ್ತಿರಬೇಕು.
ಆಕಾಶಕ್ಕೆ ಅಂಟಿಕೊಂಡ ಚುಕ್ಕಿಗಳೆಲ್ಲ
ಧಪ್ ಎಂದು ಮನೆಯಂಗಳದಲ್ಲಿ
ಬೀಳುತ್ತಿವೆ ; ಪಂಜುಗಳಾಗುತ್ತಿವೆ.
ಸ್ವಲ್ಪ ಮಿಸುಕಾಡಿದರೂ ಸಾಕು
ನಾನು ಹೊತ್ತಿಕೊಳ್ಳುತ್ತೇನೆ.
ಜೊತೆಗೆ ನನ್ನ ಗುಡಿಸಲು,
ಸುತ್ತಲಿನ ಕಪ್ಪು ಭೂಮಿ.
ಓದಿದ ತಕ್ಷಣಕ್ಕೆ ಅನಿಸುವುದು ಮತ್ತೊಂದು ಕಮರುತ್ತಿರುವ ಕನಸಿನ ಹಾಡಿದು ಅಂತ. ಆದರೆ ಕವಿತೆಯ ಆಳಕ್ಕೆ ಇಳಿದರೆ ಓದುವುವರಿಗೆ ಅರ್ಥವಾದಿತು ಮೇಲಿನ ಸಾಲುಗಳ ಕಲ್ಪನೆ
ಕವಿತೆ ಸದ್ಯದ ಪರಿಸ್ಥಿತಿಯನ್ನು ಹೇಳುತ್ತೆ ಅಲ್ವಾ?

MD said...

ವಾಹ್ !
ಮೊದಲನೆ ಅಕ್ಷರದಿಂದ ಕೊನೆ ಅಕ್ಷರದವರೆಗೆ ಎಲ್ಲವೂ ಚಿನ್ನ

Anonymous said...

Chennagide kavite....
-Poornima

Anonymous said...

ಈಗೀಗ ರಾತ್ರಿಗಳಲ್ಲಿ
ನಾನು ಅರೆ ಹುಚ್ಚಿ...

ಸುಮ್ಮನೆ ಕತ್ತಲಲ್ಲಿ ನಡೆದು ಹೋದರೆ ಸಾಕು.. ಎಲ್ಲ ಕಳೆದುಹೋಗುತ್ತದೆ!

ಮನಸ್ವಿನಿ said...

ಸುಶ್ರುತ,

ಹೌದು ! ನಾನು ಪಾಪ ;)

ಶ್ಯಾಮಾ, autumn nightingale,
ನನ್ನ ಬ್ಲಾಗಿಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.

alpazna,
thanks :)

ಶ್ರೀ, ಶಾಂತಲಾ, ವೇಣು, ಮಹೇಶ್,md, ಪೂರ್ಣಿಮಾ,
ಧನ್ಯವಾದಗಳು.

Seeji said...

Awesome...

This one is easily my favorite in your poems

ಮನಸ್ವಿನಿ said...

Seeji,

Thanks a lot. Welcome back.

Jagali bhaagavata said...

ಮನಸ್ವಿನಿ,

ಸೂತ್ರಧಾರನಿಗೆ ಫೋನಾಯಿಸಿ, ದಬಾಯಿಸಿ, ತಾಕೀತು ಮಾಡಿದ್ದೇನೆ " ಇನ್ನು ಮೇಲೆ ಸೂತ್ರಗಳನ್ನು ಸಡಿಲಿಸಬೇಡ, ಮನಸ್ವಿನಿಗೆ head weight (ತಲೆಭಾರ) ಆಗತ್ತೆ" ಅಂತ :-)

Anonymous said...

ಕವಿತೆ ಇಷ್ಟವಾಯಿತು.
ನಾವಡ

Shiv said...

ಮನಸ್ವಿನಿ,
ಇಲ್ಲಿ ಇದ್ದಾಗಲೇ ಸರಿ ಇದ್ದಿರಿ ಅಲ್ವಾ ;)

ಚೆನ್ನಾಗಿ ಮೂಡಿಬಂದಿದೆ..

ಮನಸ್ವಿನಿ said...

ಭಾಗವತ,
ತುಂಬಾ thanks. ನೀನು ಸೂತ್ರಧಾರನಿಗೆ ಫೋನ್ ಮಾಡಿ, ದಬಾಯಿಸಿದ ಮೇಲಾದ್ರೂ ಸೂತ್ರಗಳು ಗಟ್ಟಿಯಾಗಿರ್ತಾವೇನೊ! ನೋಡೋಣ :)


ನಾವಡರೇ,
ತುಂಬಾ ಧನ್ಯವಾದಗಳು.

ಶಿವ್,
ಇರಬಹುದು :). ತುಂಬಾ ಧನ್ಯವಾದಗಳು.

Anonymous said...

ಪ್ರತಿಭ ನಂದಕುಮಾರ್ ನೆನಪಾಯಿತು...

...and that's a compliment :)

Anveshi said...

ಗೊತ್ತಾತು... ;-)

ಮನಸ್ವಿನಿ said...

Decemberstud,
Thanks a lot. :)
ನನ್ನ ಬ್ಲಾಗಿಗೆ ಸ್ವಾಗತ .

ಅನ್ವೇಷಿಗಳೆ,
ಏನ್ರಿ ನಿಮ್ಗೆ ಗೊತ್ತಾಗಿದ್ದು? ;)

Anonymous said...

ಹಾಗೆ ನೋಡಿದರೆ, ಈ ಕವತೆ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾಗಬಹುದಲ್ಲವೇ? am i wrong? ಅಥವಾ ನಿಮ್ಮ ಭಾವನೆಗಳನ್ನು ಇಲ್ಲಿ ನೇರವಾಗಿ ಕಾಣಬಹುದಾಗಿದೆಯೇ? just asking, not criticising.

btw, ಒಂದು ಸಲಹೆ - ಈ ರೀತಿ ವಿಚಾರ ವಿನಿಮಯಗಳಿಗೆ, ಓದುಗರಿಗೆ ನೀವೋಂದು ಪ್ರತ್ಯೇಕ ಈ-ಮೈಲ್ id ಯಾಕೆ ನೀಡಬಾರದು?

Pramod P T said...

ಬ್ಲಾಗ್-ಗೆ ಹೊಸ ರೂಪ!
ಚೆನ್ನಾಗಿದೆ.

sunaath said...

ಭಾವಪೂರ್ಣ ಕವನ.

ಶ್ವೇತಾ ಹೆಗಡೆ said...

aakashakke antikonda chukkigalella biddu tale bharavaguva kalpane nijakkoo nanage khushi tanditu...

ಮನಸ್ವಿನಿ said...

ಅನಾನಿಮಸ್,

ಧನ್ಯವಾದಗಳು.
ಕವಿತೆ-- ಅವರಿಗೆ ಬೇಕಾದ ಹಾಗೆ ಅರ್ಥೈಸಿಕೊಳ್ಳಬಹುದಾಗಿದೆ.
ನಿಮ್ಮ ಸಲಹೆಗೆ ಧನ್ಯವಾದಗಳು.

ಸುನಾಥರೇ,ಸವಿಗನಸು......
ಬ್ಲಾಗಿಗೆ ಸ್ವಾಗತ. ಧನ್ಯವಾದಗಳು.

ಪ್ರಮೋದ್
ಧನ್ಯವಾದಗಳು.

Deep said...

Tumba dinagalada mele .. nimma blog ge bandiddene..

Heege barta irali Manaswini nimma kavya sudhe..

ಮನಸ್ವಿನಿ said...

deep,
ಧನ್ಯವಾದಗಳು.