Thursday, December 13, 2007

ಹಳೆಯ ಹನಿಗಳು

ಕಾರಣವಿಲ್ಲದೆ
ಮುಖ ತಿರುಗಿಸಿ ಹೋದವಳ
ಹಿಂದೆ ಹೋಗಲು
ಕಾರಣ ಹುಡುಕುತ್ತಿದ್ದೇನೆ

~~~*~~~

ಚಂದ್ರನ ಮೊಗವ ನೋಡಲು
ನನ್ನ ಚಂದ್ರಮುಖಿ ಕಣ್ಣೆತ್ತಲು
ಚಂದ್ರ ಅವಳ ಕಣ್ಮಿಂಚಿಗೆ ನಾಚಿ
ಮೋಡಗಳ ಸೆರಗು ಎಳೆದುಕೊಂಡ

~~~*~~~

ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು

~~~*~~~
ಅವಳು ಒಂದೇ ಸಮನೆ
ಬಿಕ್ಕುತ್ತಿದ್ದಳು; ಕಾರಣರ್ಯಾರೋ?
ಜಾರುವ ಆ ಕಣ್ಣ ಹನಿಗಳಲ್ಲಿ
ನನ್ನದೇ ಮುಖವಿತ್ತು

(ಕೊನೆಯ ಹನಿಯ ಪದಜೋಡಣೆಯನ್ನು ಸರಿಪಡಿಸಿದ ಸ್ನೇಹಿತನಿಗೆ ಹೃತ್ಪೂರ್ವಕ ವಂದನೆಗಳು)

25 comments:

Anveshi said...

ನಾನು ಕೂಡ ಪದ ಜೋಡಣೆಯನ್ನು ಸರಿಪಡಿಸುವ ಸಲಹೆಯೊಂದನ್ನು ನೀಡುತ್ತಿದ್ದೇನೆ....

ಈ ಸಾಲುಗಳಲ್ಲಿ "ಅವಳು" ಇದ್ದುದನ್ನು "ಅವನು" ಅಂತ ಸರಿಪಡಿಸಬೇಕಾಗಿ ವಿನಂತಿ.

ಭಾವಜೀವಿ... said...

ಮನಸ್ವಿನಿ,
ಇದು ಖಂಡಿತಾ ಅನ್ಯಾಯ!!
ನಮಗೂ ಹಾಗೂ ನಮ್ಮನ್ನು ತೋಯಿಸುವ ಈ ಪಾಪದ ಹನಿಗಳಿಗೂ ಘೋರ ಅನ್ಯಾಯ!! ;)
ಅಲ್ಲಾ, ಎಲ್ಲಾ ರೀತಿಯಿಂದಲೂ ನವ ನವೀನವಾಗಿರುವ ಇವಕ್ಕೆ ಹಳೆಯ ಹನಿಗಳು ಎಂದು ಹೇಗೆ ಹೇಳ್ತಾ ಇದೀಯ ಅಂತಾ ಗೊತ್ತಾಗ್ತಾ ಇಲ್ಲ!!?
ನೋಡೋಣ!!

Sushrutha Dodderi said...

ಚೆನ್ನಾಗಿವೆ.. ತುಂಬಾ ಚೆನ್ನಾಗಿವೆ..

Pramod P T said...

"ಕಾರಣವಿಲ್ಲದೆ
ಮುಖ ತಿರುಗಿಸಿ ಹೋದವಳ
ಹಿಂದೆ ಹೋಗಲು
ಕಾರಣ ಹುಡುಕುತ್ತಿದ್ದೇನ"

ಪಾಪ...ಅವನು!!

ಚೆನ್ನಾಗಿವೆ..ಎಲ್ಲವು..

MD said...

ಮನಸ್ವಿನಿ,
All are FRESH...
ನೀವು ಮೊದ್ಲು ಬರೆದಿರುವುದರಿಮ್ದ "ಹಳೆಯ ಹನಿ" ಗಳಾಗಿರಬಹುದು. ಆಸರೆ ಓದುಗರಿಗೆ ಇವು ತುಂಬ ಹೊಸವು .

Seema S. Hegde said...

ಮನಸ್ವಿನಿ,
ಎಲ್ಲವೂ ತುಂಬಾ ಚೆನ್ನಾಗಿವೆ.
ಮೊದಲನೆಯ ಹನಿಯಂತೂ ತುಂಬಾನೆ ಚೆನ್ನಾಗಿದೆ.
ಮತ್ತು.... ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು.....really wonderful!!

ಸಿಂಧು sindhu said...

ಸುಮನಸ್ವಿನೀ

ಎಲ್ಲ ಹನಿಗಳೂ ಸೊಗಸಾಗಿವೆ. ಇಷ್ಟ ಆಯಿತು.
ಶಂಕರ್ ಹೇಳಿದ್ದು ಸರಿ - ಹನಿಯು ಹಳೆಯದಾದರೇನು ಭಾವ ನವನವೀನ.

ಪ್ರೀತಿಯಿಂದ
ಸಿಂಧು

ಶಾಂತಲಾ ಭಂಡಿ (ಸನ್ನಿಧಿ) said...

ಮನಸ್ವಿನಿ ಅವರೆ...
"ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು"

ಓದಿದ ಮೇಲೆ ಪ್ರಯತ್ನಿಸುತ್ತಲೇ ಇದ್ದೇನೆ ವರ್ತುಲದ ಮೂಲೆಗಳ ಹುಡುಕಲು!
ತುಂಬ ಸೊಗಸಾಗಿದೆ.

ಮನಸ್ವಿನಿ said...

ಅನ್ವೇಷಿಗಳೆ,
ಸಲಹೆಗೆ ಧನ್ಯವಾದಗಳು :)

ಭಾವಜೀವಿ, md, ಸಿಂಧು,
ಮೊದಲೆ ಬರೆದ ಹನಿಗಳಾಗಿದ್ದರಿಂದ ’ಹಳೆಯ ಹನಿಗಳು’ ಅಂತ ಕರೆದೆ :)
ತುಂಬಾ ಧನ್ಯವಾದಗಳು.

ಸುಶ್ರುತ, ಪ್ರಮೋದ್, ಶಾಂತಲ,
ತುಂಬಾ ಧನ್ಯವಾದಗಳು. :)

ಸೀಮಾ,
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ಧನ್ಯವಾದಗಳು. ಬರುತ್ತಿರಿ :)

Anonymous said...

ಮನಸ್ವಿನಿಯವರೇ,
ನಿಮ್ಮ ಬ್ಲಾಗ್ ನೋಡಿದ್ದು ಇಂದೇ ಮೊದಲು. ಚೆನ್ನಾಗಿದೆ. ನಿಮ್ಮ ಬ್ಲಾಗ್ ನ ಹೆಸರಿನ ಕೆಳಗಿನ ಪಂಚ್ ಲೈನ್ ಚೆನ್ನಾಗಿದೆ. ಆ ಭಾಗ್ಯ ನನಗೂ ಕರುಣಿಸಲಿ ಎಂಬುದು ನನ್ನ ಕೋರಿಕೆ ಸಹ.
ನಿಮ್ಮ ಹನಿಗಳಲ್ಲಿ ಇವು ತಟ್ಟಿದವು.

"ನಾನೇ ಕಟ್ಟಿಕೊಂಡ
ವರ್ತುಲ ಬೇಲಿಯಲ್ಲಿ
ಮೂಲೆಗಳನ್ನ ಹುಡುಕುತ್ತಿದ್ದೇನೆ
ಅವಿತುಕೊಳ್ಳಲು"

ನಾವಡ

Enigma said...

ella hanigavangallana odi innu hanigalu barali endu harisuthene

Poornima Prabhu said...

nimma hanigavanagalu chennagive..
neevu hanigavanagala sanchikeyannu yaake prakatisabaradu??

Poornima Prabhu said...

nimma blogina linkannu nanna bloginalli hakiddene. [:)]

ಮನಸ್ವಿನಿ said...

ನಾವಡರೇ,
ನನ್ನ ಬ್ಲಾಗಿಗೆ ಸ್ವಾಗತ. ಪ್ರತಿಕ್ರಿಯೆಗೆ, ಪ್ರೋತ್ಸಾಹಕ್ಕೆ ಚಿರಋಣಿ.
ಧನ್ಯವಾದಗಳು. ಬರುತ್ತಿರಿ.

Enigma,
ನಿಮ್ಮ ಹಾರೈಕೆಗೆ ಧನ್ಯವಾದಗಳು. ಬರುತ್ತಿರಿ

ಪೂರ್ಣಿಮಾ,
ಧನ್ಯವಾದಗಳು. ಸಂಚಿಕೆ ಪ್ರಕಟಣೆ! :) ನೋಡ್ತೇನೆ.
ಲಿಂಕ್ ಹಾಕಿದ್ದಕ್ಕೆ ಧನ್ಯವಾದಗಳು.

MD said...

ಎಲ್ಲ ಬ್ಲಾಗಿಗರಿಗೆ ಸಿಹಿ ಸುದ್ದಿ.
ಮನಸ್ವಿನಿ ಕಾಣೆಯಾಗಿದ್ದಾಳೆ
.
.
.
.
.
.
.
.
ofcourse ಬ್ಲಾಗ್ ಬಳಗದಿಂದ

ಮಹೇಶ ಎಸ್ ಎಲ್ said...

ಹನಿಗಳು ಚೆನ್ನಾಗಿವೆ

ಮನಸ್ವಿನಿ said...

md,
ನಾನು ಕಾಣೆ ಆದ್ರೆ ಅದು ನಿಮಗೆ ಸಿಹಿ ಸುದ್ದಿನಾ? :(
ಅಂದ ಹಾಗೆ ನಾನು ನಾಪತ್ತೆ ಆಗಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತೇನೆ :)

ಮಹೇಶ್
ಧನ್ಯವಾದಗಳು .

ತೇಜಸ್ವಿನಿ ಹೆಗಡೆ said...

ಹಳೆಯ ಹನಿಗಳು.. ಹಳೆಯದೆನಿಸುತ್ತಿಲ್ಲ.. ಓದಿದಷ್ಟೂ ಹೊಸತೆನಿಸುತ್ತಿವೆ. ಆರಮಾ? ನಾನು ತೇಜಸ್ವಿನಿ ಹೆಗಡೆ ಹೇಳಿ.

MD said...

ಮನಸ್ವಿನಿ,
ನನಗೆ ಸಿಹಿ ಸುದ್ದಿ ಅಂತ ಹೇಳಿಲ್ಲ, ಎಲ್ಲ ಬ್ಲಾಗಿಗರಿಗೆ ಅಂತ ಹೇಳಿದೆ ಅಷ್ಟೇ :-)

ನಿಮ್ಮ ಹೆಸರಿನಲ್ಲಿ ಇನ್ಯಾರದರೂ ಕಮೆಂಟು ಹಾಕಬಹುದಲ್ಲ ! ನೀವು ನಾಪತ್ತೆ ಆಗಿಲ್ಲ ಅನ್ನೋದನ್ನ ಸಾಬೀತುಪಡಿಸಬೇಕಾಗುತ್ತೆ.

ಬಾನಾಡಿ said...

ಕಾರಣ ಹುಡುಕುತ್ತಾ ಹೋದರೆ
ಮುಖ ತಿರುಗಿಸಿದವರೊಂದಿಗೆ
ಮುಖ ತೋರಿಸಿದವರೂ
ಓಡಿ ಹೋದಾರು

ಪ್ರೀತಿಗೇಕೆ ಕಾರಣ

reborn said...

nice ones ... But nothing updated off late ... why??

ಶಾಂತಲಾ ಭಂಡಿ (ಸನ್ನಿಧಿ) said...

ಮನಸ್ವಿನಿ...

ದಯಮಾಡಿ ಒಂದು ಪೋಸ್ಟ್ ಕೊಡುವಂತವರಾಗಿ. :)

ಮನಸ್ವಿನಿ said...

ತೇಜಸ್ವಿನಿ,

ನಮಸ್ಕಾರ. ನನ್ನ ಬ್ಲಾಗಿಗೆ ಸ್ವಾಗತ. ಆರಾಮು. :)
ಬರ್ತಾ ಇರಿ. ಧನ್ಯವಾದಗಳು.

md,
ನಾಪತ್ತೆ ಆಗಿಲ್ಲ.. ೧೦೦ ಸಲ ಓದ್ಕೊಳ್ರಿ :)(೧೦೦ ಸಲ ಹೇಳಿದ್ದೇನೆ :))

ಬಾನಾಡಿ,
ನನ್ನ ಬ್ಲಾಗಿಗೆ ಸ್ವಾಗತ. ಧನ್ಯವಾದಗಳು.

reborn, ಶಾಂತಲಾ ,
ಧನ್ಯವಾದಗಳು. ಬರೆಯುತ್ತೇನೆ :)

ನಗೆ ಸಾಮ್ರಾಟ್,
ಆಯ್ತು, ನಿಮ್ಮ ಬ್ಲಾಗ್ ಓದುತ್ತೇನೆ.

sunaath said...

ಈ ನಾಲ್ಕು ಹನಿಗಳು ಜೇನುಹನಿಗಳು. ಇವಕ್ಕೆ ಶಾಯರಿ ಎಂದು ಕರೆಯಬಹುದೇನೊ? ತುಂಬಾ ಚೆನ್ನಾಗಿವೆ.

ಮನಸ್ವಿನಿ said...

ಸುನಾಥರೇ,

ಧನ್ಯವಾದಗಳು. :)