ಬೇಲಿ ಮ್ಯಾಲಿನ ಬಳ್ಳಿ
ಬಳ್ಳ್ಯೊಳು ಹೂ ಬೆಳ್ಳಿ
ಸಾಲಾಗಿ ಅರಳಿ ನಿಂತ್ಯಾವ, ನನ್ನವ್ವ
ಕೈಬೀಸಿ ನನ್ನ ಕರೆದಾವ
ಮಣ್ಣಿನ ಮಡಿಕೆಯು
ಬೆಣ್ಣಿಯ ಗಡಗಿಯು
ಬೆರಳಿಡಿದು ನನ್ನ ನಡೆಸ್ಯಾವ, ನನ್ನವ್ವ
ನನ್ ಕೂಡೆ ಭಾರಿ ನಗುತಾವ
ಅಂಕಣದ ಚಪ್ಪರ
ಹರಿದರಿದು ನೋಡ್ಯಾರ
ಚಂದಿರ,ನೂರು ಚುಕ್ಕಿಗಳು, ನನ್ನವ್ವ
ಮನದುಂಬಿ ನನ್ನ ಹರಸಾರ
ಬೆಟ್ಟದ ಮೇಲಿನ
ಕಟ್ಟೆಯ ಕರಿದೇವ
ಕರುಣೆಯ ಕಣ್ಣ ತೆರಕೊಂಡು, ನನ್ನವ್ವ
ಕಾದಾನೆ ನನ್ನ ಕೈಬಿಡದೆ
ಚಿಂತಿಮಾಡತಿ ಯಾಕ?
ನಗ್ತೀನಿ ಇರತನಕ
ಉಸಿರಾಗ ನಿನ್ನ ಹಾಡೈತಿ ,ನನ್ನವ್ವ
ಹಸಿರಾಗತೈತಿ ನನ ಬಾಳ
Subscribe to:
Post Comments (Atom)
28 comments:
ಮನಸ್ವಿನಿ,
ಎನ್ ಚೆಂದಾ ಬರಿದೀ ಬೆ..
ಭಾಳ ಚಲೋ ಅನಿಸ್ತು ನೋಡು.
>>ಅಂಕಣದ ಚಪ್ಪರ ಹರಿಹರಿದು ನೋಡ್ಯಾರ..
ಓ ಇದ್ಯಾವುದಾ ಭಾರೀ ತರಲೆ ಚಂದಿರನೇ ಇರಬೇಕು ನೋಡು :)
ಆ ಕರಿದೇವ ಹಿಂಗಾ ಕರುಣೆ ತೋರಿಸಿ ಹಿಂಗಾ ಚೆಂದಕೆ ಇಟ್ಟರಿಲಿರಿ
ಇಷ್ಟ ಆಯ್ತು, ಚೆನ್ನಾಗಿದೆ.
ಎತ್ತೆತ್ತ ನೋಡಿದರು
ಹೊಸಕವನ ಹರಿದಾವ
ಇಷ್ಟೊಳ್ಳೇ ಕವನ ಸಿಗವಲ್ದು,ನಮ್ಮವ್ವ
ಎಂದೆಂದು ಹಿಂಗೇ ಬರಿ ನೀನು...!
:-)
ಭೋ ಸಂದಾಕಿದೆ ಕಣವ್ವೋ. ಯಾರ್ ಯೋಳ್ಕೊಟ್ಟಿದ್ದು? ಅಮ್ಮ? ಅಜ್ಜಿ? ಚಿಕ್ಕಮ್ಮ? ದೊಡ್ಡಮ್ಮ?
ನಿನ್ನ ತಲೆಲಿ ಇದೆಲ್ಲ ಹ್ಯಾಂಗೆ ಹುಟ್ಟತೆ ಮರಾಯ್ತಿ!? :-)
ಬಹಳ ಸೊಗಸಾಗಿದೆ
ಜಾನಪದ ಶೈಲಿಯಲ್ಲಿ ಹಳ್ಳಿಯ ಹಿರಿಯರು ಹೆಣ್ಣುಮಗಳಿಗೆ ಹರಸುತ್ತಿರುವ ಧಾಟಿ ಚೆನ್ನಾಗಿದೆ.
ಅಂಗಳದಾ ಬಳಿ ನಿಂದು
ಪುಟ್ಟೀಯ ಕರೆತಂದು
ಮುತ್ತೈದೆಯರೆಲ್ಲಾ ಹರಸೀರೇ
ಮುತ್ತೈದೆಯರೆಲ್ಲಾ ಹರಸೀರೇ, ನಮ್ಮವ್ವ
ಪದ್ಯಾವ ಬರೆದೂ ಲೋಕವ ತಣಿಸೀಯೆ
ಇಂತಹ ಪದ್ಯಗಳು ಕ್ಷಣಕ್ಕೊಂದರಂತೆ ಹರಿಯುತಿರಲಿ - ಹರಿದು ಹೊಳೆ ಸೇರುತಿರಲಿ - ಹೊಳೆ ಸೇರಿ ಮಾನವಕುಲಕೆ ಜೀವನ ಪರಿಯ ತಿಳಿಸುತಿರಲಿ
ಒಳ್ಳೆಯದಾಗಲಿ
ಗುರುದೇವ ದಯಾ ಕರೊ ದೀನ ಜನೆ
ಬೆಟ್ಟದ ಮೇಲಿನ
ಕಟ್ಟೆಯ ಕರಿದೇವ
ಕರುಣೆಯ ಕಣ್ಣ ತೆರಕೊಂಡು, ನನ್ನವ್ವ
ಕಾದಾನೆ ನನ್ನ ಕೈಬಿಡದೆ
ಶೈಲಿ ಮಸ್ತ್ ಮಸ್ತ್!ಭಾಳ್ ಚೊಲೊ ಬರ್ದೀ ಬಿಡು!
ಏ, ಮಸ್ತ್ ಗೀಚ್-ಬಿಟ್ರಿ. ಭಾಳ ಹಿಡಿಸ್ತ್ರಿ.
ಶರಣ್ರಿ ಶಿವ್,
ಚಲೊ ಅನ್ಸ್ತೇನ್ರಿ ? ಖುಶಿ ಆತೇನ್ರಿ ? :))
ಧನ್ಯವಾದಗಳು
alpazna,
ಧನ್ಯವಾದಗಳು :)
ಶ್ರೀ,
ಹ ಹ ಹ ...ಆಯ್ತು :)
ಭಾಗವತ,
ಸಂದಾಕೈತಾ? ಯಾರು ಯೋಳ್ಕೋಟ್ಟಿಲ್ಲ,ನಾನೇ ಬರ್ದಿವ್ನಿ :)
ಸುಮಂಗಲ,
ಹ ಹ ಹ ..ಗೊತ್ತಿಲ್ಲ :)
ತವಿಶ್ರೀ ಸರ್,
ತುಂಬಾ ಧನ್ಯವಾದಗಳು
ಶ್ರೀನಿಧಿ,
ಇಷ್ಟ ಆಯ್ತಾ? ಸದ್ಯ !!! ಧನ್ಯೆ :)
ರಾಜೇಶ್ ಸರ,
ಭಾಳ ಥಾಂಕ್ಸ್ರಿ :)
ಹೊಸತರ...ಚೆನ್ನಾಗಿ ಬರ್ದಿದ್ದೀಯಾ..
superb kanreeeeee
next
ನಿಮ್ಮ ಕಲ್ಪನೆಗಳು ಮತ್ತು ತಾಯಿಯ ಪ್ರೀತಿ, ಜನಪದ ರೀತಿಯಲ್ಲಿ ಬರೆದ ಅಕ್ಷರಗಳಲ್ಲಿ ಜೀವಂತವಾಗಿವೆ !
"ಮಣ್ಣಿನ ಮಡಿಕೆಯು
ಬೆಣ್ಣಿಯ ಗಡಗಿಯು
ಬೆರಳಿಡಿದು ನನ್ನ ನಡೆಸ್ಯಾವ, ನನ್ನವ್ವ
ನನ್ ಕೂಡೆ ಭಾರಿ ನಗುತಾವ"
ಮೇಲಿನ ಸಾಲುಗಳ ಅರ್ಥ ತಿಳಿಯಲಿಲ್ಲ ನನಗೆ.ಕವಯಿತ್ರಿ ಇಲ್ಲಿ ಏನು ಹೇಳ ಬೇಕೆಂದಿದ್ದಾರೆ ಎಂದು ತಿಳಿಸುತ್ತೀರಾ ?
ಭೋ ಪಸಂದಾಗೈತೆ ಕಣ್ರೀ....
:))
ಪ್ರಮೋದ್,
ಧನ್ಯವಾದಗಳು :)
......
ನನ್ನ ಬ್ಲಾಗಿಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.
ಭಾಗವತ,
ಸಹನೆ , ಸಹನೆ :)
ಅನ್ವೇಷಿಗಳೆ,
ಎಲ್ಲಿ ಕಾಣೆಯಾಗಿದ್ರಿ? ಅಸತ್ಯ ಅನ್ವೇಷಿಸ್ತಾ ನೀವೆ ಕಳೆದು ಹೋದಿರೋ? ;)
md,
ಪ್ರತಿಕ್ರಿಯೆಗೆ ಧನ್ಯವಾದಗಳು.
ಈ ಹಾಡಿನಲ್ಲಿ, ಅವಳು ತನ್ನ ತಾಯಿಯನ್ನು ನೆನೆಯುತ್ತಾಳೆ, ತಾಯಿಗೆ ತನ್ನ ಕಷ್ಟ ಸುಖಗಳನ್ನು ಮನಸ್ಸಿನಲ್ಲೆ ಹೇಳುತ್ತಾಳೆ. ತನ್ನ ಮನೆಯಲ್ಲಿ ಬರಿಯ ಮೌನವಿದೆಯೆಂದೂ, ತನ್ನ ಜೊತೆ ಈಗ ಅಡುಗೆ ಮನೆಯ ಗಡಿಗೆ,ಮಡಿಕೆಗಳೆ ತನ್ನ ಸುಖ ದುಃಖ ಹಂಚಿಕೊಳ್ಳುತ್ತಿವೆಯೆಂದೂ, ನನ್ನನ್ನು ಸದಾ ಮಾತನಾಡಿಸುತ್ತ, ನಗಿಸುತ್ತ, ನನ್ನ ಕೈ ಹಿಡಿದು ನಡೆಸುತ್ತಿವೆಯೆಂದೂ, ತಾಯಿಯಾದ ನೀನು ಚಿಂತೆ ಮಾಡಬಾರದೆಂದು ಹೇಳುತ್ತಾಳೆ.
ಹಾಗೆಯೆ ಹೋವಿನ ಬಗ್ಗೆ, ಚಂದ್ರ, ತಾರೆಗಳ ಬಗ್ಗೆ, ಬೆಟ್ಟದ ಮೇಲಿನ ದೇವರ ಬಗ್ಗೆ ತಾಯಿಯಲ್ಲಿ ಹೇಳಿಕೊಳ್ಳುತ್ತಾಳೆ .
ವಿಚಿತ್ರವಾಗಿದೆಯಾ ? :))
ಹೊಸ ಪ್ರತಿಮೆ,
ಹೊಸ ಶೈಲಿ,
ಹೊಸ ಹೂರಣ,
(ಆದರೆ ಸದ್ಯ ಅದೇ ಹಳೆಯ ಮನಸ್ವಿನಿ!! ;))
ಎಲ್ಲವೂ ಹೊಸತು.. ಒಂದರೆ ನಿಮಿಷ ಕಳೆದು ಹೋಗಿದ್ದೆ! ಕಾಡಡವಿಯಲ್ಲಿ ದಾರಿತಪ್ಪಿದ ಕರುವಿನಂತೆ!! ಕೊನೆಗೆ ಬೇಲಿಯ ಹೂವು, ಗಡಿಗೆಗಳು, ಚಂದಿರ, ಚುಕ್ಕಿ ಎಲ್ಲವೂ ದಾರಿ ತೋರಿಸಿದವು!!
ಹಳೆಯ ಬಳ್ಳಿಯಲ್ಲಿ ಇನ್ನಷ್ಟು ಮತ್ತಷ್ಟು ಬಣ್ಣ ಬಣ್ಣದ ಬೆಡಗಿನ ಹೊಸತಾದ ಹೂವುಗಳು ಅರಳುತ್ತಿರಲಿ!!
ಭಾವಜೀವಿ,
ತುಂಬಾ ಧನ್ಯವಾದಗಳು.
ಚಿಕ್ಕ, ಚೊಕ್ಕ ಕವನ. ತುಂಬಾ ಹಿಡಿಸ್ತು
ವೇಣು,
ಧನ್ಯವಾದಗಳು :)
Post a Comment