Thursday, December 07, 2006

ಮಲ್ಲಿಗೆಯ ಕಂಪು

ಮಡಿಲಲ್ಲಿ ಮಲ್ಲಿಗೆಯ ತುಂಬಿ
ದಂಡೆಯನು ಹೆಣೆಯುತ್ತ
ನಸು ನಗುತಿಹಳು ತನ್ನಷ್ಟಕ್ಕೆ ತಾನೆ
ಏನನ್ನೋ ನೆನೆ ನೆನೆದು
ಅವಳಲ್ಲೂ ಅರಳಿರಬೇಕು ಒಲವಿನ ಮಲ್ಲಿಗೆ
ತುಂಬಿರಬೇಕು! ಅವಳೆದೆಯ ಮಲ್ಲಿಗೆಯ ಕಂಪು

22 comments:

Unknown said...

nimma klpanege kavanda moortha roopa kottidderi. citra kannige kattidantaayitu.
nana blogalli kannada premi america erina story ide purusottu iddare nodi

bhadra said...

ಕೆ.ಎಸ್.ನರಸಿಂಹಸ್ವಾಮಿ ಕವನ ನೆನಪಿಸುತ್ತಿದೆ. ಕನ್ನಡಿಯ ಮುಂದೆ ನಿಂತು ಏನನ್ನೋ ನೆನೆದು ನಸುನಗುತ್ತಿರುವ ಚಿತ್ರ ಕಣ್ಮುಂದೆ ಬರುತ್ತಿದೆ. ವಾಹ್ ಸುಂದರ ಕಲ್ಪನೆ, ಸುಂದರ ಪದರಚನೆ. ಮನತಣಿಯಿತು.

Anonymous said...

ಮನಸ್ವಿನಿ
ಇದನ್ನು ಓದಿದಾಗ ನನಗೆ
ನೆನೆ ನೆನೆದು ಏನೋ ಒಂದು ನೆನಪಾಯಿತು.
ಆದರೆ ಏನು ನೆನಪಾಗಿದ್ದು
ಅಂತ ನೆನಪಾಗ್ತಾನೇ ಇಲ್ಲವಲ್ಲಾ!
:(

MD said...

ಸೂಪ್ಪರ್..
ಕಲ್ಪನೆ..ಪದ ಜೋಡಣೆ..ಚಿಕ್ಕ ಕವನವನ್ನು ಚೊಕ್ಕವಾಗಿ ಬರೆದಿದ್ದೀರ.
ತವಿಶ್ರಿ ಹೇಳಿದಂತೆ, ಕೆ.ಎಸ್.ಎನ್ ರವರ ಕವಿತೆ ನೆನಪಿಗೆ ಬರುತ್ತೆ.

ನಿಮ್ಮ ಕವನ ನನಗೆ ಈ ಕೆಳಗಿನ ಹಂಸರ ಸಾಲುಗಳನ್ನು ನೆನಪಿಸಿತು:
ನಗುವ ಹೂ ನಗೆ ನಗುವ ಆ ನಗೆ
ನಗುವೆ ನಾಚಿತು , ನಾಚಿ ನಕ್ಕಿತು
ನಗುವ ಈ ಬಗೆ , ಬೇಕು ಹೂವಿಗೆ
ಕಲಿಸು ಹೂವಿಗೆ ನಿನ್ನ ಹೂನಗೆ
ನಗುವೆ ಅಂದ, ನಗುವೆ ಚಂದ..ಈ ನಗುವೆ ಚಂದ, ನಿನ ನಗುವೆ ಅಂದ
--md

ಮನಸ್ವಿನಿ said...

@ಜೀತೇಂದ್ರರೆ,
ಧನ್ಯವಾದಗಳು.. ಆಯ್ತು,ನಿಮ್ಮ ಬ್ಲಾಗನ್ನು ಓದುವೆ

ಮನಸ್ವಿನಿ said...

ತವಿಶ್ರೀ ಸರ್,

ತುಂಬಾ ಧನ್ಯವಾದಗಳು. ಕೆ.ಎಸ್.ನರಸಿಂಹಸ್ವಾಮಿಯವರ ಹಾಡುಗಳಂತು....ಆಹಹ....ಪದಗಳಿಲ್ಲ ನನ್ನಲ್ಲಿ

ಮನಸ್ವಿನಿ said...

@ ಅನ್ವೇಷಿಗಳೆ,

ಮತ್ತೆ ಈ ಹಾಡನ್ನು ಓದಿ....ನೆನಪಾಗಬಹುದು. :)

ಮನಸ್ವಿನಿ said...

@md,

ಧನ್ಯಳಾದೆ....ಸದ್ಯ ಯಾವ treatment ಇಲ್ವಲ್ಲ !!!

ಹಂಸರ ಸಾಲುಗಳು ತುಂಬಾ ಚೆನ್ನಾಗಿವೆ

Pramod P T said...

ಯಾರವಳು :) ?

Anonymous said...

Typical ಕೆಎಸ್‍ನ styleಉ! 'ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ...' ನೆನಪಾಯ್ತು.

Phantom said...

ಅವಳೆದೆಯ ಮಲ್ಲಿಗೆಯ ಕಂಪು,
ಅವನ ಮೂಗಿಗೆ ಬಡಿಯುವ ಮುನ್ನ
ಮಸುಕಾಗದಿರಲಿ :)

*ಚಿಂಚಿ*

ಇಂತಿ
ಭೂತಪ್ಪ

ಮನಸ್ವಿನಿ said...

ಪ್ರಮೋದ್,

ಯಾರೋ ಒಬ್ಬಳು..

ಮನಸ್ವಿನಿ said...

ಸುಶ್ರುತ,

ಧನ್ಯವಾದಗಳು

ಮನಸ್ವಿನಿ said...

ಭೂತಪ್ಪ,

ಆ ಕಂಪು ಯಾರಿಗೆ ಸೇರಬೇಕು ಅವ್ರಿಗೆ ಸೇರಲಿ :)

MD said...

Manaswini kshamisi..
nimage comment bareyo badloo naanu kelavu links kodta iddeni..
plz visit w/o fail

http://www.chitra-kaavya.blogspot.com

http://kuncha-prapancha.blogspot.com

http://mysore-engineer.blogspot.com

http://pramodgreetings.blogspot.com

ಮನಸ್ವಿನಿ said...

ನಮಸ್ಕಾರ md,

ಪ್ರಮೋದನ ಚಿತ್ರಗಳನ್ನೆಲ್ಲ ನೋಡಿದ್ದೇನೆ.

Mahantesh said...

namsakara kaviyatrivarige!!!!
e nasu naguvaLu elli sigatane aMta heLidre tuMbane anakUla agta ittu... :)-

ಮನಸ್ವಿನಿ said...

ನಮಸ್ಕಾರ ಮಹಾಂತೇಶ್,

ನಿಮ್ಮ ಪ್ರಶ್ನೆ ನನಗೆ ಅರ್ಥ ಆಗಿಲ್ಲ.

ನಸು ನಗುವವನು ಎಲ್ಲಿ ಸಿಗ್ತಾನೆ ಅನ್ನೋದು ನಿಮ್ಮ ಪ್ರಶ್ನೆ ಆಗಿದ್ರೆ ನಸು ನಗುವವನು ನಿಮಗ್ಯಾಕೆ? ;)
ನಸು ನಗುವವಳು ಎಲ್ಲಿ ಸಿಗ್ತಾಳೆ ಅನ್ನೋದು ನಿಮ್ಮ ಪ್ರಶ್ನೆ ಆಗಿದ್ರೆ ನಿಮಗೆ ಗೊತ್ತಿರ್ಬೇಕು!! ;)

Anonymous said...

ಮಲ್ಲಿಗೆಯ ಕಂಪನು ಹೊತ್ತು ತಂದಿದೆ ಈ ಕವನ..
ಸುವಾಸನೆಯಿಂದ ಕೂಡಿದೆ..
ಹೀಗೆ ಮನದ ಮಲ್ಲಿಗೆ ಅರಳಲಿ..

ಮನಸ್ವಿನಿ said...

ಶಿವ್,

ನಿಮ್ಮ ಹಾರೈಕೆಗೆ ಧನ್ಯವಾದಗಳು.

ಭಾವಜೀವಿ... said...

ಅಲ್ಲವೇ, ಆ ಮಲ್ಲಿಗೆ ಕಂಪು ಎದೆಯನ್ನಾವರಿಸಿದರೆ, ನಸುನಗದೇ ಇನ್ನೇನು ಮಾಡಿಯಾಳು ಅವಳು...!!
ಮುಗ್ಧ ಮಗುವಿನ ನಗುವಿನಂತಹ ಸುಂದರ ಸಾಲುಗಳು...!!

ಮನಸ್ವಿನಿ said...

ಭಾವಜೀವಿ,

ನನ್ನ ಬ್ಲಾಗಿಗೆ ಸ್ವಾಗತ, ಧನ್ಯವಾದಗಳು