Monday, December 04, 2006

ಸುಮ್ಮನೆ

ಭಾವಗಳು ಕಟ್ಟೆಯೊಡೆದು
ಕಣ್ಣಲ್ಲಿ ಹನಿ ಮೂಡಿದಾಗ
ಮಳೆ ನೀ ಇಳೆಗೆ ಇಳಿದು
ಕಣ್ಣೀರ ಒರೆಸಿದರೆ
ಕಣ್ಣು ತೋಯ್ದದಷ್ಟೆ ಲೋಕದ ಕಣ್ಣಿಗೆ
ಮನಸ್ಸು ತೋಯ್ದದ್ದು ನನ್ನ ಮನಸ್ಸಿಗೆ

15 comments:

Phantom said...

ಮನಸ್ಸಿನ ಮರುಕ ಮನಸ್ಸಿಗೆ,
ಪರಿಣಾಮ ಮಾತ್ರ ಕಣಿಗೆ

ಕೊನೆ ಎರಡು ಸಾಲುಗಳು *ಚಿಂಚಿ*

ಇಂತಿ
ಭೂತಪ್ಪ

ಮನಸ್ವಿನಿ said...

ಧನ್ಯವಾದಗಳು ಭೂತಪ್ಪ ;)

Anonymous said...

ಮನಸ್ವಿನಿ ಅವರೆ,

ಇಂಥ ನಮ್ಮ ಭಾವನ ಕಟ್ಟೆ ಒಡೆಸುವ ಕವನ ಹಾಕಿ
ಓದುಗರ ಮನಸ್ಸನ್ನೂ ತೋಯಿಸ್ತೀರ!

ಭೂತ ಚಿಂವ್ ಚಿಂವ್ ಅಂದಿದ್ದು ಏನನ್ನು?

ಮನಸ್ವಿನಿ said...

ಅನ್ವೇಷಿಗಳೆ,

ನಿಮ್ಮ ಮನ ತೋಯ್ಸಿದ್ದಕ್ಕೆ ಕ್ಷಮೆ ಇರಲಿ

ಚಿಂಚಿ =ಚಿಂದಿ ಚಿತ್ರಾನ್ನ

Pramod P T said...

ಅಬ್ಬಾ!!

ಮನಸ್ವಿನಿ said...

ಪ್ರಮೋದ್,
ಅಬ್ಬಬ್ಬ !!! ;)

Anonymous said...

ವಾಹ್ ವಾಹ್! ಚಿಕ್ಕದಾದರೂ ಚೊಕ್ಕದಾಗಿದೆ. ಮಥಿಸಿದಷ್ಟೂ ಹೆಚ್ಚಿನ ಅರ್ಥ ಕೊಡುತ್ತಿದೆ. ಲೌಕಿಕ ತೋರಿಸಿ, ಅಧ್ಯಾತ್ಮಿಕ ಅರ್ಥವನ್ನೀಯುತ್ತಿರುವ ಈ ಪುಟ್ಟ ಕವನ ಬಹಳ ಸೊಗಸೆನಿಸಿತು.

ಪ್ರಬುದ್ಧ ಕವನ.

ಮನಸ್ವಿನಿ said...
This comment has been removed by a blog administrator.
ಮನಸ್ವಿನಿ said...

ತವಿಶ್ರೀ ಸರ್,

ದೊಡ್ಡ ಮಾತು....ತುಂಬಾ ಧನ್ಯವಾದಗಳು.

Anonymous said...

'ಹನಿಯ ಮುತ್ತು', 'ಹೀಗೊಂದು ಮಳೆ', 'ಸುಮ್ಮನೆ' ... ಎಲ್ಲೆಡೆಯೂ ಮಳೆಯೇ! ಯಾಕೋ ಮಳೆಗಾಲ ಸುದೀರ್ಘವಾದಂತಿದೆಯಲ್ಲ?

ಮನಸ್ವಿನಿ said...

ಸುಶ್ರುತ,

ಮಲೆನಾಡಿನವಳಲ್ಲ... ಅದಕ್ಕೆ ಮಳೆ ಅಂದ್ರೆ ಜಾಸ್ತಿನೇ ಪ್ರೀತಿ :)

MD said...

ಓದಿದಾಗ ಮನಸ್ಸಲ್ಲೆಲ್ಲಾ ಮಳೆ.
ಸುಶ್ರುತ ಸರಿಯಾದ ಟ್ರೀಟ್ಮೆಂಟ್ ಕೊಟ್ಟಿದ್ದಾರೆ, ಮನಸ್ವಿನಿ ಯವರೆ
ನಮ್ಮಂಥ ಬಯಲು ಸೀಮೆಯ ಜನ ಕೂಡ ಒದ್ತಾರೆ ನಿಮ್ಮ ಬ್ಲಾಗನ್ನು. ನಮ್ಮ ಬಯಲು ಭೂಮಿಯ ಮೇಲೂ ಕವನ ಬರಲಿ

--md

ಮನಸ್ವಿನಿ said...

@md,
ಪ್ರತಿಕ್ರಿಯೆಗೆ ಧನ್ಯವಾದಗಳು...
ಆಯ್ತು....ಮಳೆಯನ್ನ ನಿಲ್ಲಿಸ್ತೇನೆ :)

Seeji said...

Fantastic concept. Though an old, much used thought, you have nicely blended it in your poetic insight.
Good one !!!!

This reminds me of
"..When you cry in winter time.. You can pretend it's nothing but the rain"
"Rain & tears are the same.... But in the sun you've got to play the game"
('Aphrodite's Child' climbed the charts with this hit number in early 70's).. Amazing song. Thought I will share this song with you.

Seeji.

PS: Without your permission I had linked your blog in my page. After going through the comments section of your previous post, it seems people are taking permission to link you... Hope you wont mind .. :)

ಮನಸ್ವಿನಿ said...

@Seeji,

ಧನ್ಯವಾದಗಳು
Thanks for sharing the song with me
ಲಿಂಕ ಹಾಕಿದ್ದಕ್ಕೇನು ಅಭ್ಯಂತರವಿಲ್ಲ .