Tuesday, October 31, 2006

ಸುವರ್ಣ ಕನ್ನಡ ರಾಜ್ಯೋತ್ಸವ

ಸುವರ್ಣ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

ಐವತ್ತು ವಸಂತಗಳಾದವು
ಲೆಕ್ಕವಿಲ್ಲದಷ್ಟು ದೀಪಗಳು ಹೊತ್ತಿದವು
ವಿಶ್ವಕ್ಕೆಲ್ಲ ಬೆಳಕು
ಶಿಖರದೆತ್ತರದ ಹೆಸರು
ಏನಾದರೇನು?
ಒಂದಿಷ್ಟು ಅರಿಶಿಣ, ಒಂದಿಷ್ಟು ಕುಂಕುಮ
ಮೂಡಬೇಕು ಅಸಂಖ್ಯ ಕನ್ನಡ ಮನಗಳಲ್ಲಿ


ಈ ಶುಭ ಉತ್ಸವದಲ್ಲಿ ನಮ್ಮ ಮನಗಳಲ್ಲಿ ಕನ್ನಡದ ದೀಪ ಹೊತ್ತಿಸೋಣ, ಕನ್ನಡದ ಬಾವುಟ ಏರಿಸಿ ಹಾರಿಸೋಣ.

20 comments:

Satish said...

nimagu ಕನ್ನಡ ರಾಜ್ಯೋತ್ಸವದ ಶುಭಾಶಯಗಳು

- Satish
prachamda.blogspot.com

MD said...

nimagoo kannaDa rajyotsavada shubhashayagaLu.

nimma kavitegaLu tumbane sundarvagirtave.

nanu ee tarah kannaDadalli padagalu siglikkilla andkonDidde..aadre nimma blog nODi nanu tappagidde ansutte.

Bareeta irri..navu Odta irteve.

--md

Phantom said...

ಒಂದೊಮ್ಮೆ ಈ ಕವನದ ಅಳಲು ಅರ್ಥವಾಗದಿದ್ದರೆ, ಅವನು/ಅವಳು, ಅದಾಗುತ್ತದೆ.

ಇಲ್ಲಿಯವರೆವಿಗು ಎಷ್ಟು ಚಳುವಳಿಗಳು ನಡೆದವೋ? ಎಷ್ಟೇ ನಡೆದರು, ಇನ್ನು ಚಳುವಳಿಯ ಅಗತ್ಯ ಇದ್ದೇ ಇದೆ.

ಈ ಸ್ತಿತಿ ಬದಲಾಗಬೇಕಾದರೆ, ಪ್ರತಿ ಒಬ್ಬ ಕನ್ನಡಿಗನ ಮನದಲ್ಲು ಕೀಳಿರಮೆ ಅಳಿಸಿ, ಕನ್ನಡದ ದೀಪ ಹಚ್ಚಬೇಕು.

೫೦ ವಸಂತಗಳಾದರೇನಂತೆ, ಈಗಲಾದರು ಅಥವ ಈಗಲೆ, ಹಚ್ಚುವ ಕನ್ನಡದ ದೀಪ.

ಭೂತ ಜಗತ್ತಿನಿಂದ, ಕನ್ನಡ ನಿತ್ಯೋತ್ಸವ ಹಾರೈಸುತ.

ಭೂತ

bhadra said...

ಕರ್ನಾಟಕದ ರಾಜ್ಯೋತ್ಸವದ ಸುವರ್ಣ ವರ್ಷದ ಹಾರ್ದಿಕ ಶುಭಾಶಯಗಳು

ಈ ಪುಟ್ಟ ಕವನದಲ್ಲಿ ಹೇಳಿರುವ ಕಡೆಯ ಸಾಲಿನ ಮಾತುಗಳು ಅಕ್ಷರಶಃ ನಿಜವಾಗಲಿ, ಕನ್ನಡ ನಾಡಿನಲಿ ಕನ್ನಡ ಮಾತ್ರ ಮೆರೆಯಲಿ, ಮೆರೆದು ಜನಗಳ ಮನವ ಹರಿದು ಅಕ್ಕ ಪಕ್ಕದಲ್ಲೆಲ್ಲಾ ಹರಿಯಲಿ. ಇಡೀ ಪ್ರಪಂಚವೇ ಕನ್ನಡಮಯವಾಗಲಿ. ಇದೇ ನನ್ನ ಕನಸು.

Anonymous said...

ಮನಸ್ವಿನಿ
ನಮಗೂ ಶುಭಾಶಯ, ನಿಮಗೂ ಶುಭಾಶಯ.

ಲೆಕ್ಕವಿಲ್ಲದಷ್ಟು ವಸಂತಗಳಾದವು ಅಂದ್ರಲ್ಲಾ,
ಅದು ಯಾವಸಂತೆಗಳು? ಬೆಂಗಳೂರಿನಲ್ಲಿ ತಮಿಳು-ತೆಲುಗು ಮಾತನಾಡುವ-ಸಂತೆಗಳೇ?
ಅವರೆಲ್ಲಾ ಕನ್ನಡವನ್ನು ಹೊತ್ತಿ ಉರಿಸುತ್ತಿದ್ದಾರಲ್ಲವೇ?

ಶ್ರೀನಿಧಿ.ಡಿ.ಎಸ್ said...

ಚೆನ್ನಾದ ಕವನ!!

Mahantesh said...

ಕನ್ನಡ ರಾಜ್ಯೋತ್ಸವದ ಶುಭಾಶಯಗಳು....nimage isTu olle padagaLu kavanadalli elli sugutte annodanna anweshigaLige shoda maaDi aMta keLona aMta idini...

ಮನಸ್ವಿನಿ said...

satish,
ನನ್ನ ಬ್ಲ್ಗಾಗ್ ಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸ್ವಿನಿ said...

md,

ನನ್ನ ಬ್ಲ್ಗಾಗ್ ಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರೋತ್ಸಾಹಕ್ಕೆ ಧನ್ಯವಾದಗಳು.ಆಯ್ತು ಬರೀತೀನಿ .

ಮನಸ್ವಿನಿ said...

ಭೂತರಾಯ,

ನಿನಗೂ ಕನ್ನಡ ನಿತ್ಯೋತ್ಸವದ ಹಾರೈಕೆ :)

ಮನಸ್ವಿನಿ said...

ತವಿಶ್ರೀ ಸರ್,

ಕನ್ನಡ ನಾಡಿನಲಿ ಕನ್ನಡ ಮಾತ್ರ ಮೆರೆಯಲಿ...ಅದೇ ನನ್ನ ಆಸೆ :)

ಮನಸ್ವಿನಿ said...

ಅನ್ವೇಷಿಗಳೇ,

ಇಲ್ಲ ಬರಿ ಕನ್ನಡ ಸಂತೆ ಮಾತ್ರ ನಡೆಸೋಣ...

ಮಹಾಂತೇಶ,
ಧನ್ಯಳಾದೆ
ಆಯ್ತು ಹೇಳಿ :)

ಮನಸ್ವಿನಿ said...

ಶ್ರೀನಿಧಿ,
ಧನ್ಯವಾದಗಳು

Enigma said...

ನಿಮಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಪವ್ವಿ said...

ಏರುತಿಹುದು ಹಾರುತಿಹುದು ನಮ್ಮ ಬಾವುಟ
ನಮ್ಮ ನೆಚ್ಚಿನ ಕನ್ನಡ ಕೆಂಪು-ಹಳದಿ ಬಾವುಟ
ಹೆಮ್ಮೆಯಿಂದ ತೊರುತ್ತಿರುವುದು ನಮ್ಮ ಭೂಪಟ
ಮುಂದಿನ ನವೆಂಬರ್ ಬರುವ ತನಕ ಕಾಯುತ್ತ
ಹರಿಯುತ್ತಿರುವುದು ನಮ್ಮ ಬಾವುಟ.

Seeji said...

Hi Manaswini,

I'm following your blog for nearly a month now. I must say, very impressive.

I have gone through all the previous posts. Your last post "Heegondu Male" is my personal favourite, which I have read repeatedly like an obsessive.

Keep Writing,

Seeji.

ಮನಸ್ವಿನಿ said...

@Seeji
ನನ್ನ ಬ್ಲ್ಗಾಗ್ ಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.
ದೊಡ್ಡ ಮಾತು :)

Anonymous said...

ನಿಮ್ಮ ಬ್ಲಾಗಿನ linkಅನ್ನು ನನ್ನ ಬ್ಲಾಗಿನಲ್ಲಿ ಸೇರಿಸುತ್ತಿದ್ದೇನೆ: ನೀವು ಆಕ್ಷೇಪಿಸಲಾರಿರಿ ಎಂಬ ಭರವಸೆಯೊಂದಿಗೆ.

ಅಂದ್ಹಾಗೆ, ಕವಿತೆ ಚೆನ್ನಾಗಿದೆ :)

ಧನ್ಯವಾದಗಳು.

ಮನಸ್ವಿನಿ said...

ಸುಶ್ರುತ,
ಆಯ್ತು...ಧಾರಾಳವಾಗಿ

ಧನ್ಯವಾದಗಳು

Unknown said...

Hi Mansvini,
Thumba chennagide nimma baraha