Monday, September 25, 2006

ಹನಿಯ ಮುತ್ತು

ಕಣ್ಣಿಂದ ಕಣ್ಣೀರು ಹರಿ ಹರಿದು
ಹನಿಯಾಗಿ ಒಡೆದೊಡೆದು
ಜಾರುತಿರಲು
ಹನಿಯೊಂದು ಕೆನ್ನೆಯನಪ್ಪಿ
ಮೃದುವಾಗಿ ಮುತ್ತಿಕ್ಕಿ
ನಗು ಎಂದಿದೆ

14 comments:

bhadra said...

ಕಲ್ಪನೆ ಬಹಳ ಅದ್ಭುತವಾಗಿದೆ. ದುಃಖ ನೋವುಗಳ ಸಂಕೇತವಾದ ಹರಿಯುವ ಕೋಡಿಯ ಮಧ್ಯೆ ಒಂದು ಪುಟ್ಟ ಹನಿ ಕಣ್ಣೊರೆಸಿ, ನಗು ಎಂದು ಜೀವನದ ಪರಿಯನ್ನು ತಿಳಿಸುತ್ತಿದೆ.

ಬರೆದುದು ಆರೇ ಸಾಲಾದರೂ, ಜೀವನವನ್ನು ಪೂರ್ಣವಾಗಿ ಅಳೆದು ತೋರಿಸಿದೆ. ಸೂಪರ್ ಕವನ. ಇಂದಿನ ನನ್ನ ದಿನ ದಿವ್ಯವಾಯಿತು.

ಮನಸ್ವಿನಿ said...

ತುಂಬಾ ಧನ್ಯವಾದಗಳು ಸರ್.

Sushrutha Dodderi said...

ಮುತ್ತಿನ ಹನಿ ಮುತ್ತಿಡುವ ಕಲ್ಪನೆ ಮುದ್ದಾಗಿದೆ. ಸ್ವಲ್ಪ ಉಪ್ಪುಪ್ಪಾಗಿದೆ ಸಹ.

ಮನಸ್ವಿನಿ said...

ಸುಶ್ರುತ,
ಧನ್ಯವಾದಗಳು. ಉಪ್ಪು ನೀರಿಗೆ ಸ್ವಲ್ಪ adjust ಮಾಡಿಕೊಳ್ಳಿ :)

Anveshi said...

ಪೂರ್ತಿಯಾಗಿ ಓದಿದ್ಮೇಲೆ ಕಣ್ಣೀರು ಬಂತು :)

ಮನಸ್ವಿನಿ said...

ಹೌದಾ ಅನ್ವೇಷಿಗಳೇ? ;)

Mahantesh said...

ಏನೆಂದು ನಾ ಹೇಳಲಿ ಮುತ್ತina bagge :)-

ಮನಸ್ವಿನಿ said...

@mahantesh

nange gottilla :)

VENU VINOD said...

ಮನಸ್ವಿನಿ,
ಕಣ್ಣೀರಿನ ಕಾರಣ ಖುಷಿಯೋ ನೋವೋ ಗೊತ್ತಾಗಲಿಲ್ಲ, ಏನೇ ಆದರೂ ಸುಂದರ ಹನಿಗವನ.
ಪ್ರಯತ್ನ ಮುಂದುವರಿಯಲಿ

Phantom said...

ನಗು ಎಂದಿದೆ ಮಮ್ಜಿನ ಬಿಂದು, ಇಷ್ಟೈಲ್ ನಲ್ಲಿ,
ನಗು ಎಂದಿದೆ, ಕಣ್ಣೀರ ಬಿಂದು :)

ಮನಸ್ವಿನಿ said...

@ ವೇಣು,

ಕಣ್ಣೀರಿನ ಕಾರಣ ಖುಷಿ ಆಗಿದ್ರೆ, ಕಣ್ಣೀರ ಹನಿ ನಗು ಅಂತ ಇರ್ಲಿಲ್ಲ ಅಲ್ವ? ;)

ಭೂತ,
ನಕ್ಕರೆ ಆಯ್ತು...ಏನಂತೀಯ?

Unknown said...

kanneera haniya muttu jaari 15 dina aadarOO hoasa muttu jaarilla Why?

Achyutha said...

Manaswiniyavare ,
Thumba chennagi baritira.

ಮನಸ್ವಿನಿ said...

ಅಚ್ಯುತರವ್ರೇ,
ನನ್ನ ಬ್ಲಾಗ್ ಗೆ ಸ್ವಾಗತ, ಪ್ರತಿಕ್ರಿಯೆಗೆ ,ಪ್ರೋತ್ಸಾಹಕ್ಕೆ ಧನ್ಯವಾದಗಳು.