Monday, September 11, 2006

ನೋಡಿ ಸ್ವಾಮಿ ನಾನಿರೋದೆ ಹೀಗೆ!

'ಬೆಂಗಳೂರು ಕನ್ನಡಿಗರ ಸ್ವತ್ತು. ಇಲ್ಲಿ ಯಾರ ಸೊಕ್ಕು ನಡೆಯುವುದಿಲ್ಲ, ಅದೂ ನನ್ನ ಮುಂದೆ' ಅಂತ ದಬಾಯಿಸ್ತಾ ಇದ್ದೆ ಒಬ್ಬ ಕೊಂಗನನ್ನ. ಹಾಗೆ ಮಾತನಾಡುತ್ತಿದ್ದಂತೆ ನನ್ನ ಕನ್ನಡ ಮಿತ್ರರೆಲ್ಲ ನನ್ನನ್ನು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದರು. ಅವರ ಮುಖದಲ್ಲಿ ನನಗಾಗಿ ಬೇಕಾದಷ್ಟು ಪ್ರಶ್ನೆಗಳಿದ್ದವು. ಕೆಲವರಂತು ಇದೆಲ್ಲ ಬೇಕಾ? ಯಾಕೆ ಜಗಳಗಂಟಿ ಆಗಿ ಬಿಟ್ಟಿದ್ದೀಯಾ? ಅನ್ನೋಕೆ ಶುರು ಮಾಡಿದ್ರು. ನಾನು ಅರೆರೆ! ಇವತ್ತು ಹೀಗೆ ಇವ್ನು ಮಾತಡ್ತಾನೆ, ನಾಳೆ ಇನ್ನೊಬ್ಬ. ಸುಮ್ನೆ ಇರಿ ಎಲ್ಲ. ಇವ್ರಿಗೆ ಅಲ್ಲಲ್ಲೆ ಪಾಠ ಕಲ್ಸಬೇಕು. ಎನ್ ಬೆಂಗಳೂರು ಇವರ ಅಪ್ಪಂದ ಅಂತ ಕೇಳ್ದೆ. ಆ ಕೊಂಗ ಸುಮ್ಮನಾದ, ನನ್ನ ಮಿತ್ರರಲ್ಲ. ನೀನು ಕೋಳಿ ಜಗಳ ಶುರು ಮಾಡ್ಬೇಡ. ನಾನು ಏನೂ ಮಾತನಾಡಲಿಲ್ಲ, ಸುಮ್ಮನೆ ಬಂದೆ. ನನ್ನ ಉದ್ದೇಶ ಇಷ್ಟೆ ಆಗಿತ್ತು... 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'


ಕನ್ನಡದ ಬಗ್ಗೆ ವಿಷಯ ಬಂದಾಗೆಲ್ಲ ನನ್ನ ಮೈ ರೋಮ ರೋಮ ಸೆಟೆದು ನಿಲ್ಲುತ್ತೆ. ಅದೂ ಹೆಚ್ಚ್ಚು ಕಮ್ಮಿ ಮಾತಾಡಿದ್ರೆ ಸುಮ್ನೆ ಇರೊಳಲ್ಲ ನಾನು. ನನ್ನ ಮಿತ್ರರೆಲ್ಲ ನಂಗೆ ' ನೀನು ಬಿಡಮ್ಮ, ಕನ್ನಡ ಅಭಿಮಾನಿ' ಅನ್ನೋಕೆ ಶುರು ಮಾಡಿದ್ರು. ಹೌದು ನಾನು , ನಿಮಗೆಲ್ಲ ಎನೂ ಅನ್ನೊಸೊಲ್ವ? ನಿಮ್ಮ ಅಮ್ಮನ್ನ ಬೈದ್ರೆ ಸುಮ್ಮನೆ ಬರ್ತೀರಾ? ಅಷ್ಟೆ ನನ್ನ ಪ್ರಶ್ನೆ 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

ನೋಡು , ಇವತ್ತು ನಾವೆಲ್ಲ forumಗೆ ಹೋಗೋಣ, ನೀನು ತರ್ಲೆ ಶುರು ಮಾಡ್ಬೇಡ ಅಂದ ನನ್ನ ಗೆಳತಿನ 'ನೋಡಮ್ಮ , ಬೆಂಗಳೂರು forumಗೆ ತಾನೆ ಹೋಗೊದು, ಮತ್ತೇನು ತರ್ಲೆ ಬಂತು. ನಂಗಿರೋದು ಒಂದೆ ವ್ಯಕ್ತಿತ್ತ್ವ, ನಂಗಿರೋದು ಒಂದೆ ಆತ್ಮ. ನಂಗಿರೋಳು ಒಬ್ಳೆ ಅಮ್ಮ, ಬೇರೆ ಬೇರೆ ಮುಖ್ವಾಡ ಹಾಕಿಕೊಂಡು ತಿರುಗೋಕೆ ಆಗೊಲ್ಲ' 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'

೪ ಜನ ಉತ್ತರ ಭಾರತೀಯರಿದ್ದ ಮಾತ್ರಕ್ಕೆ ಹಿಂದಿ ಶುರು ಮಾಡ್ಕೊಳೋದ್ರಲ್ಲಿ ಎನರ್ಥ? ಕರ್ನಾಟಕಕ್ಕೆ ಬಂದು ಎಷ್ಟು ದಿನಗಳಾದ್ವು? ತೀರ ಹೊಸಬರು ಆದ್ರೆ, englishನಲ್ಲಿ ಮಾತಾಡ್ತೀನಿ. ಅದೂ ಒಂದು ತಿಂಗಳು ಮಾತ್ರ, ಆಮೇಲೆ ಅದೆ ಮುಖ ಸಿಕ್ಕಿದ್ರೆ, ನನ್ನ ಬೈಬೆಡಿ 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ'


ಸಾರಾಂಶ : 'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ' :)

32 comments:

bhadra said...

ಇಂತಹ ಲೇಖನಗಳನ್ನು ಮತ್ತೆ ಮತ್ತೆ ಪತ್ರಿಕೆಗಳಲ್ಲಿ ಪ್ರಕಟಿಸಿ, ಮಲಗಿರುವ ನಮ್ಮ ಸಹೋದರ ಸಹೋದರಿಯರನ್ನು ಎಬ್ಬಿಸಬೇಕು. ನಮ್ಮವರು ಸಲುಗೆ ಕೊಟ್ಟಿದ್ದರಿಂದಲೇ ತಾನೆ, ಪರಭಾಷಿಗರು ನಮ್ಮ ತಲೆಯ ಮೇಲೆ ಕುಳಿತುಕೊಳ್ಳೋಕೆ ಪ್ರಯತ್ನಿಸುತ್ತಿರುವುದು. ಇದೇ ರೀತಿ ಬೇರೆ ರಾಜ್ಯಗಳಲ್ಲಿ ತರಲೆ ಮಾಡಲಾಗತ್ತಾ?

ನೀವು ಮಾಡುತ್ತಿರುವ ಕೆಲಸವನ್ನು ಮಿಕ್ಕ ಸ್ನೇಹಿತರೂ ಮಾಡಬೇಕು. ಆಗ ಹೊರಗಿನಿಂದ ಬಂದವರು (ಎಷ್ಟೋ ವರ್ಷಗಳಿಂದ ಬೆಂಗಳೂರಿನಲ್ಲಿರುವವರೂ ಕನ್ನಡ ತಿಳಿಯದವರಂತೆ ನಾಟಕ ಆಡ್ತಾರೆ), ಕನ್ನಡದಲ್ಲೇ ವ್ಯವಹರಿಸುತ್ತಾರೆ.

'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ' - ಈ ಮಾತನ್ನು ಕನ್ನಡಿಗರೆಲ್ಲರ ಬಾಯಿಯಿಂದ ಕೇಳಲು ಬಯಸುವೆ.

ಸಮಯೋಚಿತ ಲೇಖನಕ್ಕೆ ಧನ್ಯವಾದಗಳು.

Anveshi said...
This comment has been removed by a blog administrator.
Anveshi said...

ಬೆಂಗಳೂರಲ್ಲಿ ಹಿಂದಿಯವರು ಹಿಂದಿ ಮಾತಾಡ್ತಾರೆ, ಆಂಧ್ರದವರು ತೆಲುಗು ಮಾತಾಡ್ತಾರೆ, ತಮಿಳರು ತಮಿಳು ಮಾತಾಡ್ತಾರೆ... ಆದ್ರೆ ಕನ್ನಡಿಗರು ಮಾತ್ರ ಇಂಗ್ಲಿಷೇ ಮಾತಾಡ್ತಾರೆ ಅಂತ ಎಲ್ಲೋ ಓದಿದ ನೆನಪು.

ಅದಿರಲಿ
ಬೆಂದಕಾಳೂರಲ್ಲಿರೋ ಖಣ್ಣಢ ವಿರೋಢಿಘಲಿಘೆಳ್ಳಾ ಣಣ್ಣ ಹೆಛ್ಛರಿಖೆ ಏಣಂದ್ರೆ...

ಅನ್ಯ ಭಾಷೆಗಳ ಬಗ್ಗೆ ಅಭಿಮಾನವಿಲ್ದಿದ್ರೂ... ದುರಭಿಮಾನ ತೋರಿಸ್ಬೇಡಿ...

ಇಲ್ಲಾಂದ್ರೆ.....

ಮನಸ್ವಿನಿ ಅವರನ್ನು ಮತ್ತು ಅವರಂಥವರನ್ನು ಸೇರಿಸ್ಕೊಂಡು ಛೂ ಬಿಡ್ತೀವಿ... :)

ಮನಸ್ವಿನಿ said...

ತವಿಶ್ರೀ,

ಧನ್ಯವಾದಗಳು.

ಅನ್ವೇಷಿಗಳೆ,
'ಮನಸ್ವಿನಿ ಅವರನ್ನು ಮತ್ತು ಅವರಂಥವರನ್ನು ಸೇರಿಸ್ಕೊಂಡು ಛೂ ಬಿಡ್ತೀವಿ'

ನೀವೂ ಬರಬೇಕು ಅನ್ವೇಷಣೆಗೆ :)

Pramod P T said...

ಭೊರ್ಗರೆಯಲಿ ಅಭಿಮಾನ ಜೋಗದ ಜಲಪಾತದಂತೆ ಎಂದಿಗೂ,
ನಾವಿದ್ದೇವೆ ನಿಮ್ಮ ಜೊತೆ ಜೊತೆಯಲಿ.
ಹೆಮ್ಮೆಯೆನಿಸುತ್ತಿದೆ ನನಗೆ ಈ ಕನ್ನಡ ಅಭಿಮಾನಿ ನನ್ನ ಊರಿನವಳೆಂದು.
ತುಂಬಾ ಚೆನ್ನಗಿದೆ,
ಮುಂದುವರೆಯಲಿ....

ಮನಸ್ವಿನಿ said...

ಪ್ರಮೋದ್,

ಧನ್ಯಾಳಾದೆ. ನಿಮ್ಮ ಅಭಿಮಾನಕ್ಕೆ ಚಿರಋಣಿ :)

Arun said...

ಅದೇಕೋ ಗೊತ್ತಿಲ್ಲ. ಮಲೆನಾಡು ಹಾಗೂ ಉತ್ತರ ಕರ್ನಾಟಕದ ಜನಗಳಲ್ಲಿ ಇರೋ ಕನ್ನಡದ ಕಾಳಜಿ ದಕ್ಷಿಣ ಕರ್ನಾಟಕದಲ್ಲಿ ಕಾಣಿಸೊದಿಲ್ಲ. ಮೈಸೂರು ಪ್ರಾಂತದಲ್ಲಿ ಕನ್ನಡ ಕೃಷಿ, ಉತ್ತಮ ಸಾಹಿತ್ಯ ರಚನೆ ಬೇರೆಲ್ಲಿಗಿಂತ ಚೆನ್ನಾಗಿ ಆಗಿದ್ದರೂ ಜನಸಾಮಾನ್ಯರಲ್ಲಿ ತಮ್ಮ ಭಾಷೆಯ ಬಗ್ಗೆ ಹೆಮ್ಮೆ ಇಲ್ಲ. ಎಲ್ಲರೂ ಚಿಕ್ಕ ಹುಡುಗರಾಗಿದ್ದಾಗಿನಿಂದ ಕನ್ನಡ ಬಿಟ್ಟು ಬರೀ ಇಂಗ್ಲಿಷ್ ಕಲಿಯುವುದೇ ಕಾರಣ ಇರಬಹುದು.

Phantom said...

'ನೋಡಿ ಸ್ವಾಮಿ ನಾನಿರೋದೆ ಹೀಗೆ! adjust ಮಾಡ್ಕೊಳೊಕೆ ನನ್ನಿಂದ ಆಗೊಲ್ಲ ...ಅದೂ ಕನ್ನಡದ ವಿಷ್ಯದಲ್ಲಿ' :)

ಕ್ರಾಂತಿಕಾರಿ ಲೇಖನ. ಇರೋದೆ ಒಂದು ವರೆ ಲೀಟರ್ ರಕ್ತ. ಪೂರ ಕುದಿಯಿತು. ಸೌಮ್ಯವಾಗಿದ್ದರೆ, ಎಲ್ಲರು, ಹೇರಿ ಕೂರುವವರೆ. ನಿಂತರೆ, ಎಲ್ಲ ಖತಂ.

ಕುವೆಂಪು ಹೇಳಿದ ಹಾಗೆ, "ಸತ್ತಂತಿಹರನು ಬಡಿದೆಚ್ಚರಿಸು"
ಇಗೋ, ಬಾರಿಸು ಕನ್ನದ ದಿಂಡಿಮವಾ.

ಕಸ್ಮೊ ಮುಖವಾಡ ದರಿಸಿರುವ ಎಲ್ಲ ಕನ್ನಡಿಗರು, ಓದಲೇ ಬೇಕಾದ ಲೇಖನ.

ಭೂತ

ಮನ | Mana said...

ಬಹಳ ಉತ್ತಮವಾದ ಲೇಖನ.
ಈ ರೀತಿ ಲೇಖನಗಳನ್ನು ಬರೆಯುವರು, ಓದುವವರು ಮತ್ತು ಮುಖ್ಯವಾಗಿ ಲೇಖನದಲ್ಲಿರುವಂತೆ ಕನ್ನಡದ ವಿಷಯದಲ್ಲಿ ಅಡ್ಜಸ್ಟ್ ಮಾಡಿಕೊಳ್ಳದೆ ನಡೆದುಕೊಳ್ಳುವವರು ನೂರ್ಪಟ್ಟು ಹೆಚ್ಚಬೇಕಾಗಿದೆ.

"ನೋಡಿ ಸ್ವಾಮಿ ನಾನಿರೋದೆ ಹೀಗೆ" ಅನ್ನುವುದು ಕನ್ನಡಿಗರೆಲ್ಲರೂ ಒಟ್ಟಾಗಿ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಅನ್ನುವ ಕಾಲವನ್ನು ನಿರ್ಮಿಸಬೇಕಾಗಿದೆ.

ಕನ್ನಡ ನಾಡಿನಲ್ಲಿ ಕನ್ನಡವು ಶಾಶ್ವತವಾಗಿ ಉಳಿಸಬೇಕಾದಲ್ಲಿ, ಈ ಲೇಖನ ಮತ್ತು ಇದರಲ್ಲಿನ ಘಟನೆಗಳಿಂದ ಅನ್ಯಭಾಷಿಕರಿಗೆ ಪಾಠ ಕಲಿಸುವುದಷ್ಟೇ ಅಲ್ಲದೆ, "ಸತ್ತಂತಿಹರನು ಬಡೆದೆಚ್ಚರಿಸಬೇಕಾಗಿದೆ".

ಸತ್ತಂತಿಹರು = adjust ಮಾಡಿಕೊಂಡು ಓಡಾಡುವ ನಿರಭಿಮಾನಿ ಕನ್ನಡಿಗರು.

ಈ ರೀತಿಯ ಲೇಖನಗಳು ಬಾರಿಸಲಿ ಕನ್ನಡ ಡಿಂಡಿಮವ.

- ಮನ

ಮನಸ್ವಿನಿ said...
This comment has been removed by a blog administrator.
ಮನಸ್ವಿನಿ said...

ಭೂತ,

ಪ್ರತಿಕ್ರಿಯೆಗೆ ಧನ್ಯವಾದಗಳು. ನಿನ್ನ ರಕ್ತ ಇನ್ನು ಕುದಿತಾ ಇದೆಯಾ? :) ಒಳ್ಳೆದು :)

ಮನಸ್ವಿನಿ said...

@ ಅರುಣ್,

ಈಗ ಮಲೆನಾಡು,ಕರಾವಳಿ, ಬಯಲು ಸೀಮೆ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಅನ್ನೊದನ್ನ ಬಿಟ್ಟು, ಕನ್ನಡಿಗರು ಅಂತ ತಿಳಿದು ಅಭಿಮಾನದಿಂದ ಎದ್ದು ನಿಲ್ಲಬೇಕಷ್ಟೆ. ಏನಂತೀರಾ?

ನನ್ನ ಬ್ಲ್ಗಾಗ್ ಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.

ಮನಸ್ವಿನಿ said...
This comment has been removed by a blog administrator.
ಮನಸ್ವಿನಿ said...

ಮನ,

ನನ್ನ ಬ್ಲಾಗಗೆ ಸ್ವಾಗತ ,ಪ್ರತಿಕ್ರಿಯೆಗೆ ಧನ್ಯವಾದಗಳು.
"ನೋಡಿ ಸ್ವಾಮಿ ನಾನಿರೋದೆ ಹೀಗೆ" ಅನ್ನುವುದು ಕನ್ನಡಿಗರೆಲ್ಲರೂ ಒಟ್ಟಾಗಿ "ನೋಡಿ ಸ್ವಾಮಿ ನಾವಿರೋದೆ ಹೀಗೆ" ಅನ್ನುವ ಕಾಲ ಬೇಗ ಬರಲಿ :)

Mahantesh said...

hmmm!!! nanage kelavu kelavu dinagaLa hinde ninna tamma heLida maatu nenapige barta ide ,sadyakke nanna tamma bengaLurinalli IT kelsa hudakata idane....idu interview jaagadalli,
" noDale aNNa, ibbru telagu/tamilunavaru bheTi adre saaku,tamma bhaSheyalli mAtadatare!! ibbru englishnalli yavode topic disc englishnalli matadata idre khaMDita kannaDadavu arvu anta..." idu nammellara(kannaDigara) anasutte....kannaDigaru tamma audaryatanavannu bhaShe vishyadallu biDabekAda prasaMga baMdide...
konayadagi kaMglishanalli kuTTidakke kShameyarali, baraha/nudi illada karana

ಮನಸ್ವಿನಿ said...

ಮಹಾಂತೇಶ್,

ಪ್ರತಿಕ್ರಿಯೆಗೆ ಧನ್ಯವಾದಗಳು.

ಕನ್ನಡೇತರರು ಮತ್ತು ಬರಿ ಇಂಗ್ಲೀಷನಲ್ಲಿ ಮಾತಾಡುವ ಕನ್ನಡಿಗರು ಕನ್ನಡ ಮಾತಡಲೇಬೇಕಾದ ಒತ್ತಡ ತರಬೇಕು...ಇಲ್ಲದಿದ್ದರೆ ನಮ್ಮ ಬೆಂಗಳೂರು ಭಾಷೆಯಲ್ಲಿ ಹೇಳ್ತಾರಲ್ಲ 'ಗಾಂಚಾಲಿ ಬಿಡು, ಕನ್ನಡ ಮಾತಾಡು' ಅಂದು ಬರೋದು.

reborn said...

nice post !!!! I hope you dont mind my comment in english :) ...will definately comment in kannada next time , I m still finding out how to blog in kannada ...

problem with kannadigas is , talking in other languages is is considered cool ....

Unknown said...

kelavrige kannada horaata badukigagi EX-vaatal nagaraj
bhashe hesaralli dwesha belestaare,
matte kelavrige kannada abhimana, preethi sambandha jodistaare
kelavru knnada sahitya baredu tamma seve kannadada seve madthaare, kelavrige asadde
nivu kannda abhimana irali niranthara

ಮನಸ್ವಿನಿ said...

@ reborn
ನನ್ನ ಬ್ಲ್ಗಾಗ್ ಗೆ ಸ್ವಾಗತ, ಪ್ರತಿಕ್ರಿಯೆಗೆ ಧನ್ಯವಾದಗಳು.
ಆಗಲಿ, ನಿಮ್ಮ ಕನ್ನಡ commentಗಾಗಿ ಎದಿರು ನೊಡುವೆ.

@ಜೀತೆಂದ್ರ,

ಧನ್ಯವಾದಗಳು

VENU VINOD said...

ನಾನೇನೋ ಕನ್ನಡದ ಭವಿಷ್ಯ ಇನ್ನಿಲ್ಲವಾಯ್ತು ಅಂದ್ಕೊಂಡಿದ್ದೆ. ಆದ್ರೆ ನಿಮ್ಮಂಥವರ ಬ್ಲಾಗ್‌, ನಿಮಗೆ ಬಂದ ಪ್ರತಿಕ್ರಿಯೆ ನೋಡಿದ ಮೇಲೆ, ನನ್ನ ಮನಸ್ಸಿಗೆ ಎರಡು ಬೈದು ನನ್ನ ಆಲೋಚನೆಗಳನ್ನು ಗಂಟುಕಟ್ಟಿ ಮೋಲೆಗೆ ಎಸೆದಿದ್ದೇನೆ. ಕನ್ನಡಿಗರ ಪ್ರಸನ್ನತೆ ಜತೆಗೇ ಕನ್ನಡಿಗರ ಕಿಚ್ಚೂ(ಹೊಟ್ಟೆಕಿಚ್ಚಲ್ಲ)ಜೀವಂತವಿರಲಿ. ಸಿರಿಗನ್ನಡಂ ಗೆಲ್ಗೆ!

ಮನಸ್ವಿನಿ said...

ವೇಣು,

ನನ್ನ ಬ್ಲಾಗಗೆ ಸ್ವಾಗತ ,ಪ್ರತಿಕ್ರಿಯೆಗೆ ಧನ್ಯವಾದಗಳು.
ಕನ್ನಡ ಇರುವವರೆಗೆ ಕನ್ನಡಿಗರು ಇರ್ತಾರೆ. ಕನ್ನಡಿಗರು ಇರುವರೆಗೆ ಕನ್ನಡ ಇರಲೇ ಬೇಕು. ಅಲ್ವಾ?

Saraswathi Nataraj said...

ಮನಸ್ವಿನಿ,
ಇದೆ ಕುದಿತ, ತುಡಿತ ನಾನೂ ಬಹಳ ಸಲ ಅನುಭವಿಸಿದ್ದೀನಿ. ತುಂಬಾ ವರ್ಷಗಳಿಂದ. ಯಾರು ಬೇರೆ ಭಾಷೆಯಲ್ಲಿ ಮಾತನಾಡಿದರು, ನಾನು ಮೊದಲಿಗೆ ಕೇಳುವುದು, ಕನ್ನಡ ಬರಲ್ವಾ? ಎಷ್ಟು ವರ್ಷ ಆಯ್ತು ಕರ್ನಾಟಕಕ್ಕೆ ಬಂದು ಎಂದೇ.ನನ್ನ ಪ್ರಾರ್ಥನೆ ಇಷ್ಟೇ. ಕನ್ನಡ ಭಾಷೆ ಬರುವವರೆಲ್ಲಾ ಕನ್ನಡದಲ್ಲೇ ಮಾತಾಡಿ. ಬೇರೆಯವರಿಗೂ ಕೇಳುತ್ತಲೇ ಭಾಷೆ ಬರುತ್ತದೆ. ಗೊತ್ತಾಗದಿದ್‌ಆಗ ಅನುವಾದ ಮಾಡಿದರಾಯಿತು.
ಚೆನ್ನಾಗಿದೆ ಲೇಖನ. ಏನಾದ್ರೂ ಕೆಲಸ(ಕನ್ನಡದ್ದು)ಅಗಬೇಕಾದ್ರೆ ಅದು ನಿಮ್ಮಂಥ ಎಳೆಯರಿಂದ.

ಮನಸ್ವಿನಿ said...

ಧನ್ಯವಾದಗಳು ಸರಸ್ವತಿಯವ್ರೆ.
ನಿಮ್ಮಂತವರ ಪ್ರೋತ್ಸಾಹ ಬೇಕು.

ಶ್ರೀನಿಧಿ.ಡಿ.ಎಸ್ said...

ನಮಸ್ತೆ ಮನಸ್ವಿನಿ,
ಅಚಾನಕ್ ಆಗಿ ನಿಮ್ಮ ಬ್ಲಾಗ್ ಗೆ ಹೊಕ್ಕೆ, ಹೊರ ಬರಲು ಸಮಯ ಹಿಡಿಯಿತು! ಚೆನ್ನಾದ ಬರಹ...ಇದೇ ಧಾಟಿಯ ಲೇಖನವನ್ನ, ಸಹಜ ವಿಜಯ ಕರ್ನಾಟಕದ "ಬಾಲ್ಕನಿಯಿಂದ" ಅಂಕಣದಲ್ಲಿ ಬರೆದಿದ್ದರು..
ಸೊಗಸಾಗಿ ಬರೆಯುತ್ತೀರಿ,ಬರೆಯುತ್ತಾ ಇರಿ!

ಮನಸ್ವಿನಿ said...

ನಮಸ್ಕಾರ ಶ್ರೀನಿಧಿ
ನನ್ನ ಬ್ಲಾಗಗೆ ಸ್ವಾಗತ ,ಪ್ರತಿಕ್ರಿಯೆಗೆ ಧನ್ಯವಾದಗಳು.

Satish said...

ಮನಸ್ವಿನಿ avare,

nimma ಲೇಖನ nodi tumba khushi aaythu adhe thara dukka nu aaythu.

namma youngsters galu kannadada bagge hechu utsaha torisabeku matte hechu hechu ithara da lekhanagalu bareyabeku mattu ಮಲಗಿರುವ ನಮ್ಮ ಸಹೋದರ ಸಹೋದರಿಯರನ್ನು ಎಬ್ಬಿಸಬೇಕು (mavinayanasa avaru helida haage) .. keep em coming..

ಮನಸ್ವಿನಿ said...

ನಮಸ್ಕಾರ ಸತೀಶ್,
ನನ್ನ ಬ್ಲಾಗಗೆ ಸ್ವಾಗತ ,ಪ್ರತಿಕ್ರಿಯೆಗೆ ಧನ್ಯವಾದಗಳು.

Dr U B Pavanaja said...

ಈ "ಅಡ್ಜಸ್ಟ್ ಮಾಡ್ಕೊಳ್ಳಿ" ಎನ್ನುವುದು ಬೆಂಗಳೂರಿನ ಟಾಪ್ ಟೆನ್ ಡೈಲಾಗುಗಳಲ್ಲೊಂದು. ಇದನ್ನು ಓದಿ.

ಪವನಜ

ಮನಸ್ವಿನಿ said...

ವಿಕಾಸ್,
ತುಂಬಾ ಧನ್ಯವಾದಗಳು. ಬ್ಲಾಗ್‌ಗೆ ಸ್ವಾಗತ.

Anonymous said...

ಓದಿ ಖುಷಿಯಾಯಿತು.. ನಿಮ್ಮಂತವರು ಸಿಗೊದು ತುಂಬಾ ಅಪರೂಪ... ಈಗ ನಮ್ಮ ಕನ್ನಡದವರೆ ಕನ್ನಡ ಮಾತಾಡೋದು ಕಮ್ಮಿಯಾಗಿದೆ... ಕೆಲವು ಪದಗಳನ್ನ ನಾವು ಇದರಿಂದಾಗಿಯೇ ಮರೆತಿದ್ದೀವಿ...

Dayananda said...

Congrats.Its time to get up for pride

__0x04__ said...

ಮನಸ್ವಿನಿಯವರೇ,
ನಿಮ್ಮ ಲೇಖನ ಮನ ಮುಟ್ಟುವಂತಿದೆ. ಧನ್ಯವಾದಗಳು.

ನೀವು ವೇಣುರವರಿಗೆ "ಕನ್ನಡ ಇರುವವರೆಗೆ ಕನ್ನಡಿಗರು ಇರ್ತಾರೆ. ಕನ್ನಡಿಗರು ಇರುವರೆಗೆ ಕನ್ನಡ ಇರಲೇ ಬೇಕು. ಅಲ್ವಾ?" ಅಂತ ಹೇಳಿದ್ದೀರಿ. ವಾಸ್ತವವಾಗಿ ಇಲ್ಲಿ "ಕನ್ನಡ ಇರುವವರೆಗೆ ಕನ್ನಡಿಗರು ಇರ್ತಾರೆ" ಅಂತ ಹೇಳೋದಕಿಂತಲೂ "ಕನ್ನಡಿಗರು ಇರುವರೆಗೆ ಕನ್ನಡ ಇರುತ್ತೆ" ಅಂತ ಹೇಳೋ ಸ್ತಿತಿಯಲ್ಲಿದ್ದೀವಿ. ನಮ್ಮ ಕನ್ನಡ ಉಳಿಯಬೇಕಾದರೆ, ಕನ್ನಡಿಗರು ಕನ್ನಡಿಗರೂ ಹಾಗು ಹೊರಗಿನವರ ಜೊತೆ ಕನ್ನಡದಲ್ಲಿಯೇ ಮಾತನಾಡಬೇಕು. ಎಂಥ ಅಸಹಯಕತೆಯಲ್ಲೂ ಬೇರೆ ಬಾಷೆ ಗೊತ್ತಿದ್ದರು ಸಹ ಕನ್ನಡದಲ್ಲಿಯೇ ಮಾತನಾಡಬೇಕು. ಕನ್ನಡ ಕಲಿಯದೇ ಕರ್ನಾಟಕದಲ್ಲಿರಲು ಕಷ್ಟವೆನಿಸುವಸ್ಟು ಮಟ್ಟಕ್ಕೆ ತಲುಪಿಸಿದರೆ ಕನ್ನಡ ಗೆದ್ದಂತೆ! ಒಮ್ಮೆ ಬಾಷೆ ಕಲಿತರೆ ತಾವೇ ಪ್ರೀತಿಸಲು ಶುರು ಮಾಡುತ್ತಾರೆ. ಮುಖ್ಯವಾಗಿ ಇಲ್ಲಿನ ವ್ಯಾಪಾರಿಗಳು ಕನ್ನಡದಲ್ಲೇ ವ್ಯವಹರಿಸಿದರೆ ಈ ಕೆಲಸ ಸುಲುಬವಾಗುತ್ತೆ. ಇದು ನಮ್ಮ ಕನ್ನಡ. ನಾನು ನಿಮ್ಮ ಜೊತೆ ಈ ಹೋರಾಟದಲ್ಲಿದ್ದೇನೆ.