Friday, September 01, 2006

ಕಾಲದ ಹೊಳೆ

ಕಾಲದ ಹೊಳೆಯು ಹರಿಯುತಿದೆ
ಒಂದೇ ಸಮನೆ
ದಿನ ರಾತ್ರಿಗಳ ಹೊತ್ತು
ಅದೆಂದಿನಿಂದ ಅದೆಲ್ಲಿಯವರೆಗೊ!
ಕಾಲ ಸಾಗರನ ಸೇರಲು
ಯಾವ ಒಡ್ಡು ಒಡ್ಡಬಲ್ಲೆ?
ಹೇಗೆ ಎದಿರು ನಿಲ್ಲಬಲ್ಲೆ?
ಈಜಬೇಕಷ್ಟೆ ಅದರ ಜೊತೆಗೆ
ತ್ರಾಣವಿರುವವರೆಗೆ
ಪ್ರಾಣವಿರುವವರೆಗೆ

9 comments:

ಜಯಂತ ಬಾಬು said...

ಅದಕ್ಕೆ ಅಲ್ಲವೇ ಹೇಳಿರುವುದು ""ಈಜಬೇಕು ಇದ್ದು ಜೈಸಬೇಕು"" ಅಂತ ...ಚೆನ್ನಾಗಿದೆ ನಿಮ್ಮ ಕವನಗಳು

bhadra said...

ಬಹಳ ಅರ್ಥಗರ್ಭಿತವಾದ ಪದಗಳು. ಮಾನವನ ಅಸಹಾಯಕತೆ, ತನ್ನಿಂದ ಏನೂ ಅಲ್ಲ, ವಿಧಿ ನಡೆಸಿದಂತೆ ತಾ ನಡೆಯಬೇಕಾಗಿಹ ಗೊಂಬೆ, ಎಂಬುದನ್ನು ಏಳೆಂಟು ಸಾಲುಗಳಲ್ಲಿ ಬಹಳ ಚೆನ್ನಾಗಿ ಸೆರೆ ಹಿಡಿದಿದ್ದೀರಿ.

ಜೀವನ ಸಾಗರದಲ್ಲಿ ಈಜುವುದ ಕಲಿತವನೇ ಜೀವಿಸಬಲ್ಲ. ಈಜುವುದ ಕಲಿಯದವಗೆ ಇಲ್ಲಿ ಉಳಿಗಾಲವಿಲ್ಲ. ಇದನ್ನು ಅರ್ಥೈಸಿಕೊಂಡರೆ ಜೀವನದಲ್ಲಿ ಏರು ಪೇರುಗಳೇ ಇರುವುದಿಲ್ಲ.

ಸುಂದರ ನಿರೂಪಣೆ

Anveshi said...

ಕಾಲದ ಜೊತೆಗೇ ಯಾಕೆ ಈಜಬೇಕು... ಅದ್ರ
ವಿರುದ್ಧ ಈಜುವುದೂ ಒಂದು ಒಗಟಿನ ಥರಾ ಇಲ್ವಾ?

ಅಬ್ಬಾ.... 10 ಸಾಲುಗಳಲ್ಲೇ ಅದ್ಭುತವಾಗಿ ಕಾಲ ಹರಣ ಮಾಡಿದ್ರೀ...

ಮನಸ್ವಿನಿ said...

ಧ.ವಾಗಳು ಜಯಂತ್, ತವಿಶ್ರೀ,ಅನ್ವೇಷಿಗಳಿಗೆ

Phantom said...

ಕಾಲವನು ಒಮ್ದು ಹೊಳೆಗೆ ಹೋಲಿಸಿದ್ದೆ ಉತ್ಪ್ರೇಕ್ಷೆ.

ಕಾಲವನ್ನು ಎದುರಿಸಿವುದು ಸುಲಬ ಸಾದ್ಯವಲ್ಲದ ಮಾತು. ಯಾವ ಒಡ್ದು ಒಡ್ಡಿದರು ಕಾಲ ವಾಗೋದು ಕಚಿತ :(

ನಾನು ಈಜಿ ಈಜಿ, ಕೊನೆಗೆ ಅದೃಷ್ಯನಾದೆ, ಈಗ ಭೂತ :)

ಭೂತ

ಮನಸ್ವಿನಿ said...

ಭೂತರಾಯ ಯಾವ ಒಡ್ಡು ಒಡ್ಡಿದ್ದ?
ಭೂತರಾಯನ ಸ್ವಂತ ಅನುಭವದ ಮಾತೆ? ;)

ShaK said...

Nicely written. I never fail to be amazed at Kannada poets and you have surprised me again.

Keep writing. Keep lighting.

ಮನಸ್ವಿನಿ said...

@Shakri,

Thanks for visiting and welcome to my blog.

Anveshi said...

ಮನಸ್ವಿನಿ,

ಮೇಲಿನ ನಿಮ್ ಲೇಖನಕ್ಕೆ ಕಾಮೆಂಟ್ ಕೊಡೋಕೆ ಹೋದ್ರೆ... "We're sorry, but we were unable to complete your request. " ಅಂತ ಇಂಗ್ಲಿಷಲ್ಲಿ ಬರುತ್ತೆ.... ನಿಮ್ಮ ಕನ್ನಡ ಹೋರಾಟದ ಬಿಸಿ ಅದ್ಕೂ ತಟ್ಟಿರ್ಬೇಕು... ದಯವಿಟ್ಟು ನೋಡಿಬಿಡಿ.