ಗರಿ ಬೇಲಿ ಕಟ್ಟಿ
ರಾಮ ರಾಮ ಅನ್ನೊ ಹುಡುಗನ್ನ ಕಾವಲಿಗೆ ಬಿಟ್ಟಿದ್ರಂತೆ!
ಉತ್ತರ:ಕಣ್ಣು
೨. ಮೇಲಿನ ಮನೆ ಮುದುಕಿ
ಕೆಳಗಿನ ಮನೆ ಮುದುಕಿ
ಜಿಬ್ಬು ಜಿಬ್ಬಿನಲ್ಲಿ ಹೊಡೆದಾಡತಾರಂತೆ
(ಜಿಬ್ಬು = ಸಣ್ಣ ಕಟ್ಟಿಗೆ ಚೂರು )
ಉತ್ತರ: ಕಣ್ಣಿನ ರೆಪ್ಪೆಗಳು
೩. ಅಯ್ಯಪ್ಪನ ಕುದುರೆಗೆ ಮೈಯೆಲ್ಲಾ ಗಾಯ
ಉತ್ತರ: ಕೌದಿ ( ಬಟ್ಟೆ ಚೂರುಗಳಿಂದ ಹೊಲೆದು ಮಾಡಿರುವ ಹೊದಿಕೆ, ಚಾದರ)
೪. ಬಿಳಿ ಕುದುರೆ ಬೇಲಿ ಹಾರ್ತತಿ
ಉತ್ತರ:ಬೂದಿ
೫. ಗುದ್ದನಲ್ಲಿ ಇರೊ ಬಸಪ್ಪ
ಎದ್ದು ಎದ್ದು ನೋಡ್ತಾನ
(ಗುದ್ದು= ಹೊಂಡ )
ಉತ್ತರ: ಒಲೆಯಲ್ಲಿ ಒಡ್ಡಿರುವ ಬೆಂಕಿ
೬. ಆ ಕಲ್ಲು , ಈ ಕಲ್ಲು ನಡುವೆ ಮತ್ತೊಂದು ಕಲ್ಲು
ಆ ಕಲ್ಲು ಮುಳುಗಿದರೆ ಲೋಕವೆಲ್ಲ ಹಾಳು
ಉತ್ತರ: ಬೆಣ್ಣೆ
೭. ಬಿಳಿ ಗದ್ದೆ ಮೇಲೆ , ಕರಿ ಕಡ್ಲೆ ಬಿತ್ತಿ
ಬಾಯಗೆ ಒಂದೊಂದೆ ಆರಿಸಬೇಕು
ಉತ್ತರ:ಬಿಳಿ ಹಾಳೆ, ಕಪ್ಪು ಅಕ್ಷರಗಳು
೮ ಮಳೆ ಜಳ್ಳು
ಮಾಣಿಕ್ಯದ ಹರಳು
ಮಾತ ಸುಳ್ಳು
( ಒಂದೊಂದು ಸಾಲಿಗೆ ಒಂದೊಂದು ಉತ್ತರ)
ಉತ್ತರ:
ಇಬ್ಬನಿ
ಆಣೆಕಲ್ಲು
ಕನಸು
೯. ಕೊಕ್ಕರೆ ಕೂರ್ತತಿ
ಕೆರೆನೀರು ಆರ್ತತಿ
ಉತ್ತರ:
ಬತ್ತಿ
ಎಣ್ಣೆ
೧೦. ಬೆಳ್ಳಿ ಸರಪಳಿ ತೆಗೆಯೊಕೆ ಬರ್ತತಿ
ಹಾಕಕೆ ಬರೊಲ್ಲ
ಉತ್ತರ:
ಕರೆಯುತ್ತಿರುವ ಹಾಲು
೧೧ ಒಂದು ಅಂಗಳಕ್ಕೆ ಒಂದೇ ಕಂಬ
ಉತ್ತರ:
ಛತ್ರಿ
ಉತ್ತರಗಳಿಗೆ ವಿವರಣೆ ಬೇಕಿದ್ದಲ್ಲಿ ನನಗೆ ತಿಳಿಸಿ :)
29 comments:
Channigive.. Adare sadyakke holididdu honde..
5. Kappe
Baravanige channigide .. matte baruve :-)
deep,
೫. ಕಪ್ಪೆ ಅಲ್ಲ :)
ಮತ್ತೆ ಮತ್ತೆ ಬನ್ನಿ :)
ಎಂತೆ ಮಾರಾಯ್ತಿ, ಇಂತ ಒಗಟುಗಳು. ಅರ್ಥ ಆಜಿಲ್ಲೆ :(
ಭೂತಕ್ಕೆ ಸೊನ್ನ ಅಂಕ :-(
ಭೂತರಾಯ,
ನಿನ್ನ ಹವ್ಯಕ ಕನ್ನಡ ಬಹಳ improve ಆಗಿದೆ :)
ಪ್ರಯತ್ನಿಸು , ಸೊನ್ನೆ ದಾಟಬಹುದು ;)
ನನಗೆ ಈ ಒಗಟುಗಳೆಲ್ಲಾ ಒಗಟೆಗಳಾಗಿವೆ. ಆದರೂ ಪ್ರಯತ್ನಿಸ್ತೀನಿ. ಬೇಗ ಉತ್ತರ ಹಾಕ್ಬೇಡಿ.
ಮೊದಲನೆಯದು ಗಿಣಿ - ರಾಮ ರಾಮ ಅನ್ನೋದು ಗಿಣಿ ಅಂತ ಅಂದ್ಕೊಡಿದ್ದೀನಿ.
ತವಿಶ್ರೀ ಸರ್,
ಉತ್ತರ ತಪ್ಪು ;)
ಉತ್ತರಗಳನ್ನ ಒಂದು ವಾರ ಆದ್ಮೇಲೆ ಹಾಕ್ತೀನಿ
ನಾನು ಕೂಡ ನೀವು ಹೇಳಿದ ನಂತ್ರವೇ ಉತ್ತರ ಹೇಳುತ್ತೇನೆ...
ಮೊದ್ಲೇ ಹೇಳಿದ್ರೆ... ತಪ್ಪಾದ್ರೆ...?
ಅಸತ್ಯಾನ್ವೇಷಿಗಳೆ,
ನಾನು ಉತ್ತರ ಹಾಕಿದ್ಮೇಲೆ ಉತ್ತರ ಹೇಳ್ತೀರಾ? ;)
ಆಗಲಿ
Neeve one tharaa ogatu
yaava punya AthmanigOO gottaagalilla andre che che!
nammalli oggattu illa, ogatu bidisuva sahane kOOda illa
oggattu uttar nodalu 1 vaara kaayabeka?
Ayyo Swamy Jitendra avare
naanu yaava ogaTu?
yaava ogaTTu?
Nimma uttara noDidre neeve ogaTu ansutte.
uttara haakbEdi anta abhimaani devaru keLikonDidru...adakke haakilla :)
Haakteeni
nange ella uttara gottu. Tumbaa easy ide. aadre.......ninna abhimaani devru has requested not to reveal the answer....So I will reply after you post the answers:-)) he he he....
ಭಾಗವತರೇ,
ನಿಮಗೆಲ್ಲ ಉತ್ತರ ಗೊತಿದ್ರೆ ನಂಗೆ ಕಳುಹಿಸಿ...ನೋಡ್ತೇನೆ ಎಷ್ಟು ಅಂಕ ನಿಮಗೆ ಅಂತ ;)
ಛೆ.....
ವಾಪಸ್ ಹೋಗ್ತಾ ಇದೀನಿ...
ಉತ್ತರ ಕಾಣ್ಲೇ ಇಲ್ಲ ನಂಗೆ...
ಉತ್ತರ ಕೊಡ್ಬಾರ್ದು ಅಂತ ಅಭಿಮಾನಿ ದೇವ್ರನ್ನ ಕಳಿಸಿಕೊಡಿ... ಅವರಿಗೆ ಬೆದರಿಸಬೇಕಿದೆ...
ಮನಸ್ವಿನಿ, ಆರನೆ ಒಗಟು ಅರ್ಥ ಅಗ್ತಿಲ್ಲ. ಬೆಣ್ಣೆ ಹೇಗೆ? ವಿವರಿಸ್ತೀರಾ?
ಹೆ, ಸೊಗಸಾಗಿದ್ದು. ಆದರೆ, ಬೆಣ್ಣೆ ಎಮ್ತಕ್ಕೆ ಹೇಳಿ ನನ್ಗು ಗೊತ್ತಗ್ಲಿಲ್ಲ.
@ Phantom and Saraswatiyavre
ಬೆಣ್ಣೆನ ನಾವು ನೀರು ಇರುವ ಪಾತ್ರೆಯಲ್ಲಿ ಹಾಕಿ ಇಡ್ತೀವಿ.
ಈ ಒಗಟಲ್ಲಿ, ಪಾತ್ರೆ, ನೀರಲ್ಲಿ ಇರುವ ಬೆಣ್ಣೆನ ಇನ್ನೊಂದು ಕಲ್ಲು ಅಂತ ಹೇಳ್ತಾರೆ. ಬೆಣ್ಣೆ ಯಾವತ್ತು ತೇಲುತ್ತೆ, ಮುಳುಗಲ್ಲ. ಅದು ಮುಳುಗಿದ ದಿನ ಲೋಕವೆ ಹಾಳದಂತೆ ಅಂತ
Parvagillla. Ella uttaragaLoo sariyaagide. Naanoo adanne heLbEku anta idde:-)))) he he he he........
ಬಹಳ ಉತ್ತಮವಾದ ಒಗಟುಗಳು. ನನಗೆ ಸುಲಭವಾದದ್ದು ಮಾತ್ರ ಗೊತ್ತಷ್ಟೇ. ಇಂತಹವು ತಿಳಿದಿರಲಿಲ್ಲ. ಏನೇ ಆಗಲಿ ಹಿರಿಯರು ಬಹಳ ತಿಳಿದವರು.
ಅಂತಹವರ ಜ್ಞಾನವನ್ನು ಜಗಕ್ಕೆ ನೀಡುವುದು ನಮ್ಮೆಲ್ಲರ ಕರ್ತವ್ಯ. ನಿಮ್ಮ ಮನೆಯ ಹಿರಿಯರಿಗೆ ಕಂಪ್ಯೂಟರ್, ಅಂತರ್ಜಾಲ ಇವೆಲ್ಲ ತಿಳಿದಿದ್ದರೆ
ಇನ್ನೆಲ್ಲಿ ಹೋಗಿ ಮುಟ್ಟುತ್ತಿದ್ದರೋ ಏನೋ?
ಇಂತಹ ಇನ್ನೂ ಒಗಟುಗಳು ಬರಲಿ. ಸೂಪರ್ ಕೆಲಸ.
ಭಾಗವತರೇ,
ಧನ್ಯಳಾದೆ :)
ತವಿಶ್ರೀ,
ಧನ್ಯವಾದಗಳು ಸರ್
Nimma uttar nododakkinta illin comment nodalu chennagide
ನಂಗೆ ಮೊದ್ಲೇ ಗೊತ್ತಿತ್ತು... ನೀವು ಇದೇ ಉತ್ರ ಕೊಟ್ತೀರಾಂತ...
ನೀವೆಲ್ಲಾದ್ರೂ ತಪ್ಪು ಹೇಳ್ತೀರೋ ಅಂತ ಕಾಯ್ತಾ ಇದ್ದೆ....
ಸರಿ
ಸರಿ ಎಲ್ಲ ಸರಿಯಾಗಿದೆ.
:)
ಅನ್ವೇಷಿಗಳೆ,
ಎಲ್ಲ ಸರಿಯಾಗಿದೆಯಾ? ಅಬ್ಬ,ಸದ್ಯ! ಧನ್ಯಳಾದೆ ;)
೬. ಆ ಕಲ್ಲು , ಈ ಕಲ್ಲು ನಡುವೆ ಮತ್ತೊಂದು ಕಲ್ಲು
ಆ ಕಲ್ಲು ಮುಳುಗಿದರೆ ಲೋಕವೆಲ್ಲ ಹಾಳು
ಉತ್ತರ: ಬೆಣ್ಣೆ
how is this?
please can u tell me.
sakkat ogattugallu boss. keep it up. meele idu :)
sakkat oggattugalu boss. keet it up. :)
sakkath bissi magga
neenu tumba bisi maga.nininda tumba shekhe agutide
sakkath oggatu maccha neenu kempu yemme kuddi adu shakthi kodduthade
haha very funny =)
Post a Comment