’ನಿನ್ನ ಫೇವರೆಟ್ ಸಿನೇಮಾ ಯಾವುದು?’ ಅಂತ ನೀವ್ಯಾರಾದ್ರು ನನ್ನ ಕೇಳಿದ್ರೆ ನಿದ್ದೆಗಣ್ಣಲ್ಲೂ ಬಹುಶಃ ಹಿಂದೆ ಮುಂದೆ ಯೋಚಿಸದೆ ’The Shawshank Redemption’ ಅಂತ ನಾನು ಹೇಳಿ ಬಿಡಬಹುದು.
ಡೈಲಾಗುಗಳೆಲ್ಲ ಬಾಯಿಪಾಠವಾಗುವಷ್ಟರ ಮಟ್ಟಿಗೆ ಈ ಸಿನೇಮಾವನ್ನು ನೋಡಿದ್ದೇನೆ. ಪ್ರತಿ ಸಲ ನೋಡುವಾಗಲೂ ಕುರ್ಚಿಯ ತುದಿಗೆ ಕುಳಿತು, ಟಿ.ವಿಗೆ ಕಣ್ಣು ನೆಟ್ಟಿಕೊಂಡು ನೋಡಿದ್ದೇನೆ.
ಟಿಮ್ ರೊಬಿನ್ಸ್ ಮತ್ತೆ ಮೊರ್ಗಾನ್ ಫ್ರೀಮನ್ನರ ಅದ್ಭುತವಾದ ನಟನೆ. ಮೊರ್ಗಾನ್ ಫ್ರೀಮನ್ನರ ಬಹುಶಃ ಎಲ್ಲ ಸಿನೇಮಾಗಳಲ್ಲಿ ನನಗೆ ತುಂಬ ತುಂಬ ಇಷ್ಟವಾಗುವ ಚಿತ್ರ ಇದು.
ಭರವಸೆಗಳನ್ನು ಕಟ್ಟಿ ಕೊಡುತ್ತ ಜೀವನಸ್ಫೂರ್ತಿಯನ್ನು ಎತ್ತಿ ಹಿಡಿಯುವ ಅದ್ಭುತ ಕಥೆಯನ್ನು ಅತ್ಯಂತ ಚಂದವಾಗಿ, ಎಳೆ ಎಳೆಯಾಗಿ ಬಿಡಿಸಿಡುವ ಚಿತ್ರವಿದು. ಇದರಲ್ಲಿ ಸ್ನೇಹವಿದೆ,ಮೋಸವಿದೆ, ಪ್ರೇಮವಿದೆ, ಎಲ್ಲದಕ್ಕಿಂತ ಮಿಗಿಲಾಗಿ ಭರವಸೆಯಿದೆ.
ಸಿನೇಮಾ ಕಥೆಯನ್ನು ನಾನು ಹೇಳುವುದಿಲ್ಲ. ಇಂತಹ ಸಿನೇಮಾಗಳ ಕಥೆಗಳನ್ನು ಹೇಳಲೇ ಬಾರದು. ನೋಡಬೇಕು, ನೋಡಿಯೇ ತಿಳಿಯಬೇಕು. ಇದರ ಬಾಕ್ಸ್ ಆಫೀಸ್ ಗಳಿಕೆ ಹೇಳುವಷ್ಟರ ಮಟ್ಟಿಗೆ ಆಗಿಲ್ಲದಿದ್ದರೂ ಇದು ಅತ್ಯಂತ ಜನಪ್ರಿಯ ಚಿತ್ರ.
Forrest Gump ಮತ್ತು Pulp fiction ಚಿತ್ರಗಳ ವರ್ಷದಲ್ಲಿ ತೆರೆಕಂಡ ಈ ಚಿತ್ರಕ್ಕೆ ಮೋಸವಾಗಿ ಹೋಗಿದೆ ಅಂತ ನನಗೆ ಎಷ್ಟೋ ಸಲ ಅನಿಸಿದ್ದುಂಟು. Forrest Gump ಮತ್ತು Pulp fiction ಖಂಡಿತವಾಗಿಯೂ ಚಂದದ ಸಿನೇಮಾಗಳು.
ಆದರೂ ನನ್ನ ಪ್ರಕಾರ ಶಾವ್-ಶ್ಯಾಂಕ್ ರಿಡೆಂಪ್ಷನ್ ಅವೆರಡಕ್ಕಿಂತ ಉತ್ಕೃಷ್ಟ ಮಟ್ಟದ್ದು .
ಸಿನೇಮಾ ನೋಡಿಲ್ಲದಿದ್ದರೆ ಖಂಡಿತವಾಗಿ ನೋಡಿ. ನನ್ನ ಫೇವರೆಟ್ ಸಿನೇಮಾ ನಿಮಗೂ ಇಷ್ಟವಾಗಬಹುದು. ಇಷ್ಟವಾಗಲಿಲ್ಲದ ಪಕ್ಷದಲ್ಲಿ .........ಗೊತ್ತಿಲ್ಲ ಏನು ಮಾಡಬೇಕು ಎಂದು.
Saturday, August 30, 2008
Subscribe to:
Posts (Atom)