ಮಳೆಯಲ್ಲಿ ತೊಯ್ದು ಬಿದ್ದ ರಾತ್ರಿ. ಕಿರಿದಾದ ರಸ್ತೆ. ರಸ್ತೆ ಅಕ್ಕಪಕ್ಕದಲ್ಲಿ ಮುರಿದು ಬಿದ್ದ ಮನೆ-ಮಠಗಳು. ಮುರಿದ ಮನೆಯ ಗೊಡೆಗಂಟಿಕೊಂಡೇ ಮಂದವಾಗಿ ಉರಿಯುತ್ತಿರುವ ದಾರಿ ದೀಪ. ಗೊಡೆಯಲ್ಲಿನ ಮೊಳೆಯಲ್ಲಿ ಜೋತು ಬಿದ್ದಿರುವ ಒಂದು ಚಿತ್ರ ; ಬಲು ವಿಚಿತ್ರ.
ಸುಖವಿದ್ದ ಕಣ್ಣುಗಳಿಗೆ ಆ ಚಿತ್ರ ಕಾಣುವುದೇ ಇಲ್ಲ.
ಮನಸ್ಸಿನೆಲ್ಲ ಮೂಲೆಗಳಲ್ಲೂ ಕತ್ತಲೆ ತುಂಬಿದ ಯುವಕ. ಕಂಗೆಟ್ಟ ಕಂಗಳ ಹಿಡಿದು ಆ ದಾರಿಯಾಗಿ ಬರುತ್ತಾನೆ. ತಡವರಿಸುತ್ತಾನೆ. ಬೀಳುತ್ತಾನೆ. ವಿಚಿತ್ರ ಲೋಕ. ಅವನನ್ನು ಯಾರೂ ಎತ್ತುವುದಿಲ್ಲ. ನೋಡಿಯೂ ನೋಡದ ಕಣ್ಣುಗಳು.
ಆ ಯುವಕನಿಗೊಂದು ಕೂಗು. ಆರ್ತನಾದ. ತಮಟೆಯಲ್ಲಿ ಕಾದ ಸೀಸ ಬಿಟ್ಟಂತ ಅನುಭವ. ಚಿತ್ರದಲ್ಲಿನ ಕೈ ಕರೆಯುತ್ತಿದೆ. ಬಳಿ ಸಾರುತ್ತಾನೆ. ದಿಟ್ಟಿಸುತ್ತಾನೆ ಅರೆ ಕ್ಷಣ. ತೆರೆದ ಬಾಯಿ, ಬೀಸಿದ ಬಾಹುಗಳು. ಪಕ್ಕದಲ್ಲಿ ಸಣ್ಣಗೆ ಉರಿಯುತ್ತಿರುವ ಹಣತೆ. ಅರ್ಥವಾಗದು. ಕಣ್ಣು ಮುಚ್ಚುತ್ತಾನೆ. ಕಣ್ಣ ತೆರೆಯುವುದರೊಳಗೆ ಮನಸಿನೊಳಗಣ ಅನಂತ ಸಂತೋಷ. ಲೋಕವನ್ನು ಗೆಲ್ಲಬಲ್ಲೆನೆಂಬ ಆತ್ಮ ವಿಶ್ವಾಸ. ಗುರಿಗಳೆಲ್ಲ ತನ್ನ ಬರುವಿಕಿಯ ನಿರೀಕ್ಷೆಯಲ್ಲಿನ ಭಾವ. ಸ್ವರ್ಗ ತನ್ನ ಕೈಯಲ್ಲಿದೆ . ಭಲೇ! ಎನ್ನುತ್ತಲೇ ಯುವಕ ಮುಂದಿನ ಹೆಜ್ಜೆಯಿಡುತ್ತಾನೆ.
ದಿಟ್ಟ ಹೆಜ್ಜೆ; ರಾಜ ಠೀವಿ. ಹಿಂತಿರುಗಿ ನೋಡದ ಕಣ್ಣುಗಳು.
ಚಿತ್ರದೊಳಗಿನ ಧ್ವನಿ ಆಕಾಶ ಮುಟ್ಟುವಂತೆ ರೋದಿಸುತ್ತದೆ. ಯುವಕನೀಗ ಕಿವುಡ.ಚಿತ್ರದ ಬಾಯಿ ಕೊಂಚ ಜಾಸ್ತಿಯೇ ತೆರೆಯುತ್ತಿದೆ. ಬೀಸಿದ ಬಾಹುಗಳೂ ಇನ್ನೂ ಅಗಲ. ಹಣತೆ ಜ್ಯೋತಿ ಕ್ಷೀಣಿಸುತ್ತಿದೆ.
ಕತ್ತಲು ತುಂಬಿದ ಮನಸ್ಸಿಗೆ ಚಿತ್ರ ಕಾಯುತ್ತಿದೆ. ಬೆಳಕ ಕೊಟ್ಟು ತಾನು ಬೆಳಗುವುದಕ್ಕೆ. ದೀಪ ಹಚ್ಚಿಸಿಕೊಂಡವರು ಚಿತ್ರದ ಹಣತೆ ಹಚ್ಚುವುದ ಮರೆಯುತ್ತಾರೆ. ಚಿತ್ರಪಟದ ಮನಸ್ಸು ನಿಧಾನವಾಗಿ ಇಲ್ಲವಾಗುತ್ತಿದೆ. ಚಿತ್ರಕಾರನ ಅರಣ್ಯ ರೋದನ.
23 comments:
artha aaglilla :(
Was that a 'leap year' special to post a story ... !!!?? Initially I thought it is some kind of 'navya' poetry (i mean the stuff Prathibha nandakumar n likes write :) :) ). Thank you for placing the tag 'kathe'...
The previous post 'hanigalu' is good... Post such simple stuff once in a while to keep the lesser mortals like us happy. This post is too heavy ....
I have several questions, you don't have to answer, but I will still ask a few :)
೧. ಇದು 'ಕಥೆ' ಹೇಗಾದೀತು?
೨. ರಾತ್ರಿ ತೊಯ್ದು 'ಬಿದ್ದದ್ದು' ಹೇಗೆ? 'ಹೊದಿಕೆ' ಅರ್ಥವಾಗುತ್ತದೆ, 'ಬೀಳುವಿಕೆ' ಗೊತ್ತಾಗಲಿಲ್ಲ.
೩. ಎಲ್ಲೆಡೆಯೂ ಮುರಿದು ಬಿದ್ದ ಮನೆ-ಮಠಗಳು. ಗೋಡೆ ಎಲ್ಲಿಂದ ಬಂತು?ಮುರಿದ ಮನೆಗಳಲ್ಲಿನೊಂದು ಗೋಡೆಯೋ?
Seeji,
ಕಷ್ಟಪಟ್ಟು ಇಷ್ಟು ಉದ್ದ(!) ಕಥೆ ಬರದ್ರೆ ಕಾವ್ಯ ಅಂತೀರಾ? ;)
ಲೇಖನ, ಕಥೆ ಬರೆಯುವುದು ನನಗೆ ಸ್ವಲ್ಪ ಕಷ್ಟವೇ. ಒಂದು ಪ್ರಯತ್ನವಷ್ಟೆ.
ಗೋಜಲಾಗಿದ್ದಕ್ಕೆ ಕ್ಷಮೆ ಇರಲಿ. ತುಂಬಾ ಧನ್ಯವಾದಗಳು. :)
D.S,
:) :) ಕಷ್ಟ ಕಷ್ಟ
೧.ಕಥೆ ಹೇಗಾದೀತು? ಯಾಕೆ ಆಗುವುದಿಲ್ಲ ಅಂತ ಹೇಳಿ . ಕಥೆ ಬರೆಯುವುದು ಹೊಸತು ನನಗೆ.
೨. ತೊಯ್ದು ಬಿದ್ದ ರಾತ್ರಿ--- ಮಳೆಯಲ್ಲಿ ಒದ್ದೆ ಆದ ರಾತ್ರಿ ಅಂತ. ಬೀಳುವಿಕೆ? ಚಿತ್ರಪಟವಾ?
೩. ಮುರಿದ ಮನೆಗಳಲ್ಲಿನೊಂದು ಗೋಡೆ - correct
ತುಂಬಾ ಧನ್ಯವಾದಗಳು.
ಭಾವನೆಗಳನ್ನು ಕವನವನ್ನಾಗಿ ರೂಪಿಸಬಹುದು ಅಥವಾ ಕತೆಯಾಗಿ ಹೇಳಬಹುದು. ನಿಮ್ಮ ಕತೆ ಅಡಿಗರ ನವ್ಯ ಕಾವ್ಯದಂತೆ ಸಂಕೀರ್ಣವಾಗಿದೆ ಹಾಗು ಸೊಗಸಾಗಿದೆ.
ವಿಶಿಷ್ಟವಾದ ಪ್ರಯತ್ನ. ಕಥೆ, ಕಾವ್ಯ ಹೀಗೇ ಆಗ್ಬೇಕೆಂದು ಅಂಚುಪಟ್ಟಿ ಹಿಡಿದು ಹೇಳಲು ಬಾರದು.
ಒಂದು ಇಮೇಜ್ (ಚಿತ್ರಿಕೆ) ಅನ್ನು ಹಿಡಿದು ಸುತ್ತಲೂ ಹರಿದಾಡುವುದು, ಅಲ್ಲಿನ ಚಿಕ್ಕ ಚಿಕ್ಕ ಸಂಗತಿಗಳನ್ನು ದಾಖಲಿಸುತ್ತಾ ನಮ್ಮ ಅನುಭವಕ್ಕೆ ಸಮೀಕರಿಸುತ್ತಾ ಹೋಗುವುದೇ ಬರಹ.
ಮನಸ್ವಿನಿಯವರೇ, ಈ ಪ್ರಯತ್ನ ಚೆನ್ನಾಗಿದೆ. ನನ್ನಲ್ಲೂ ಚಿತ್ರಿಕೆ ಲೇಬಲ್ ನಲ್ಲಿ ಇಂಥ ಕೆಲವನ್ನು ಬರೆದಿದ್ದೇನೆ.
ಈ ಪ್ರಯತ್ನ ಮುಂದುವರೆಸಿ.
ನಾವಡ
ಲೇಬಲ್ ಇರಲಿ ಇಲ್ಲದಿರಲಿ ಹೊಸ ಆಲೋಚನೆಗಳು ಹರಿಯುತ್ತಿರಬೇಕು, ಹಳೆಬೇರುಗಳು ದೃಢವಾಗುತ್ತಾ ಹೋಗುವಾಗಲೂ ಸುದೃಢ, ಹಚ್ಚ ಹಸಿರಿನ ಆರೋಗ್ಯಪೂರ್ಣ ಚಿಗುರುಗಳು ಮೂಡುತ್ತಲೇ ಇರಬೇಕು, ಈ ನಿಟ್ಟಿನಲ್ಲಿ ನಿಮ್ಮ ಬರವಣಿಗೆ ಒಳ್ಳೆಯ ಪ್ರಯೋಗ...ಮುಂದುವರಿಸಿ
ಬರೀ ೫ ಸಲ ಓದಿದೆ. ಹೀಗಾಗಿ ಇದು ಒಂದು ದೊಡ್ಡ ಕಥೆ ಅಂತ ಅನ್ನಬಹುದು :-)
ಒಂದೊಂದು ಸಾರಿ ಒಂದೊಂದೇ ಪ್ಯಾರಾ ಅರ್ಥವಾಗುತ್ತಾ ಹೋಯಿತು.
ನಿಜವಾಗ್ಲೂ ಒಂದು ಬೇರೆಯದೇ ತರಹದ ಬರಹ.
ಕವಿತೆಯಂಥ ಕಥೆ, ಕಥೆಯಂಥ ಕವಿತೆ ಇದು.
ಈ ಸಾಲು "ದೀಪ ಹಚ್ಚಿಸಿಕೊಂಡವರು ಚಿತ್ರದ ಹಣತೆ ಹಚ್ಚುವುದ ಮರೆಯುತ್ತಾರೆ" ಏನು ಅರ್ಥ ಸೂಚಿಸುತ್ತಿದೆ ಅನ್ನುವುದು ಹೊಳೆಯಲಿಲ್ಲ.
ಮನಸ್ವಿನಿ,
md ಹೇಳಿದ ನಿಮ್ಮ ಬರಹದ ಬಗೆಗಿನ ಮಾತುಗಳ ಜತ ನನ್ನ ಸಹಮತ ಇದೆ. ಇದು ಕಥನಕವನ ಅಥವ ಕವನಕಥನ. ಇದು ಎಲ್ಲೋ ನಿಲ್ಲುವದಿಲ್ಲ..ಹರಿಯುತ್ತ ಇರುತ್ತದೆ..ನಿಮ್ಮ ಪದಗಳು ಮುಗಿದ ಮೇಲೂ. ಕೆಲವೊಂದು ಪ್ರತಿಮೆಗಳು ಅರ್ಥವಾಗಿರಲಿಕ್ಕಿಲ್ಲ, ಅರ್ಥವಾಗಬೇಕು ಅನ್ನುವ compulsion ಕೂಡ ಏನಿಲ್ಲ. ಇತ್ತೀಚೆಗೆ ಜೋಗಿಯವರ ಬ್ಲಾಗಿನಲ್ಲಿ ಕಿ.ರಂ. ಕವಿತೆಗಳ ಬಗ್ಗೆ ಹೇಳಿದ ಮಾತೊಂದು ನೆನಪಾಯಿತು. ಅವರ ಪ್ರಕಾರ ಕವಿತೆಯೊ, ಕಥನವೊ, ಓದಿದ ತಕ್ಷಣ ಅರ್ಥವಾಗಿಬಿಡಬೇಕು ಎಂತಲೇನಿಲ್ಲ. ಪ್ರತಿಯೊಬ್ಬರಿಗೂ ಅವರವರ interpretationಗಳು ಇರ್ತವೆ. ಇನ್ನೂ ಬರೀರಿ.
ಟೀನಾ.
ಮನಸ್ವಿನಿ,
ಶೀರ್ಷಿಕೆ ಚಿತ್ರ-ವಿಚಿತ್ರ ಸರಿಯಾಗಿದೆಯಾದರೂ... ಮೆದುಳಿಗೆ ಮೇವು, ಒಗಟು ಅಂತೆಲ್ಲಾ ಕೊಡಬಹುದಿತ್ತು ಅಂತ ನಮ್ಮ ಅಭಿಪ್ರಾಯ.
ಇನ್ನಷ್ಟೇ ಶೀರ್ಷಿಕೆ ಓದಿದ್ದೇವೆ... ಉಳಿದದ್ದನ್ನು ಮತ್ತೆ ಮತ್ತೆ ಓದುತ್ತೇವೆ. ;)
ಚೆನ್ನಾಗಿದೆ .......ಕೆಲವೇ ಸಾಲುಗಳಲ್ಲಿ...ಉತ್ತಮ ಕವನ...
ಸುನಾಥರೇ, ನಾವಡರೇ, ವೇಣು, md, ಟೀನಾ, ಅನ್ವೇಷಿ, ದಿನೇಶ್,
ನಿಮ್ಮ ಪ್ರೋತ್ಸಾಹಕ್ಕೆ ಅನೇಕಾನೇಕ ಧನ್ಯವಾದಗಳು. ಈ ತರದ ಚಿತ್ರಿಕೆಗಳನ್ನ ಮುಂದುವರಿಸಲು ಧೈರ್ಯ ನೀಡಿದ್ದಕ್ಕೆ.
ಟೀನಾ,
ಬ್ಲಾಗಿಗೆ ಸ್ವಾಗತ. ಬರುತ್ತಿರಿ.
md,
:)
ಚಿತ್ರಕಾರನು ಚಿತ್ರದೊಳಗೆ ಸೆರೆಯಾಗಿದ್ದಾನೆ. ಕಾರಣ? ( ನಿಮ್ಮ ಕಲ್ಪನೆಗೆ ಬಿಟ್ಟದ್ದು)
ಚಿತ್ರದೊಳಗೆ ಬೀಸಿದ ಕೈಗಳಿವೆ, ತೆರೆದ ಬಾಯಿ ಇದೆ, ಹಣತೆಯಿದೆ.ಕೈ ಸಹಾಯ ಯಾಚಿಸುತ್ತಿದೆ. ಬಾಯಿ ಕರೆಯುತ್ತಿದೆ. ಬೆಳಕ ನೀಡಲು ಹಣತೆ.
ನೋವು ಹಂಚಿಕೊಂಡು ಭರವಸೆಯ ಬೆಳಕ ನೀಡುತ್ತಿದ್ದಾನೆ.
ಬೆಳಕ ಪಡೆದುಕೊಂಡವರು ಕ್ಷಣಕಾಲ ನಿಂತಿದ್ದರೆ ಚಿತ್ರಕಾರನಿಗೂ ಮುಕ್ತಿ ದೊರೆಯುತ್ತಿತ್ತೆನೋ. ಆದರೆ .....
ಅದಕ್ಕೆ ಈ ಪ್ಯಾರ ’ಚಿತ್ರದೊಳಗಿನ ಧ್ವನಿ ಆಕಾಶ ಮುಟ್ಟುವಂತೆ ರೋದಿಸುತ್ತದೆ. ಯುವಕನೀಗ ಕಿವುಡ.ಚಿತ್ರದ ಬಾಯಿ ಕೊಂಚ ಜಾಸ್ತಿಯೇ ತೆರೆಯುತ್ತಿದೆ. ಬೀಸಿದ ಬಾಹುಗಳೂ ಇನ್ನೂ ಅಗಲ. ಹಣತೆ ಜ್ಯೋತಿ ಕ್ಷೀಣಿಸುತ್ತಿದೆ.’
ಇರಲಿ, ಈ ಪ್ರಯೋಗ ಹೊಸತು. ಗೋಜಲು, ಗೊಂದಲ ಆಗಿದ್ದಕ್ಕೆ ಕ್ಷಮೆ ಇರಲಿ. ಧನ್ಯವಾದಗಳು.
ಮನಸ್ವಿನಿ ಅವರೆ...
ಹೊಸ ಪ್ರಯತ್ನ ಚೆನ್ನಾಗಿದೆ. ಮುಂದುವರೆಯಲಿ.
ಮನಸ್ವಿನಿ,
ನಮಸ್ಕಾರ. ಹೇಗಿದ್ದೀ?
ನಿಂಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
nimma kathe nodi reegiso haage comment bareyona anno kuchodya buddhi bantu. Nanna (ill)ogical tarka idde irutte allva? Neevu chitrada ksheenavagi uriyo hanateyanna yuvaka noduttane anta modalu bareeteeri, konege chitrda hanateyanna belagisodanna belaku padedavaru mareyuttare anta bareeteeri. Urita idda hanatege enne haakabeku athava gaali, maleyinda rakshisabeku ashte allva?
Meelinadella summane.
Baravanigeyalli "bite" jaasti aagta ide. Olleyadu. Jeevanada aagu hogugalnna nimma drashtiya prakara sanna kathegala moolaka chitrisuva prayatna maadi.
ಶಾಂತಲ,
ಧನ್ಯವಾದಗಳು.
ಸುಶ್,
ಆಯ್ತು..ಸಿಗೋಣ
AG the one, two ,three....
:)
ದೀಪ ಕ್ಷೀಣವಾಗ್ತಾ ಇದೆ. ಅದಕ್ಕೆ ಯುವಕ ಏನಾದ್ರು ಮಾಡಬಹುದಿತ್ತು. ಧನ್ಯವಾದಗಳು .
ಕಥೆ ಯಾಕಲ್ಲ ಅಂದ್ರೆ, ಇದೊಂದು "ಗದ್ಯ ಕವಿತೆ". ಅಥವಾ ಅದಕ್ಕಿನ್ನೊಂದು ಹೆಸರು ಹುಟ್ಟಿಕೊಳ್ಳಬಹುದು, ಇನ್ನು ಕೆಲವರು ವರ್ಷಗಳಲ್ಲಿ.
ಆವಿಷ್ಕಾರ ಸಹಜ, ನಿಜ ಮತ್ತು ಅದ್ಭುತ. ಅದರಾಂತೆ ಈ ಬರಹವೂ ಸೊಗಸಾಗಿದೆ. ನನ್ನ ಆಕ್ಷೇಪ ಇದನ್ನು "ಕಥೆ" ಎಂದು ಕರೆದದ್ದಕ್ಕೆ.....ನನ್ನ ಮಾತುಗಳನ್ನೇನು ಒಪ್ಪಬೇಕಿಲ್ಲ...ತಳ್ಳಿ ಹಾಕಿದರೆ ನನಗೇನು ಬೇಜಾರಾಗಲ್ಲ :)
ಮನಸ್ವಿನಿ ತಿಳಿಸಲು ಪ್ರಯತ್ನಿಸಿದ್ದಕ್ಕೆ ಧನ್ಯವಾದಗಳು.
ಖಾಲಿ ಬುರುಡೆ ಅಲ್ವಾ ತನಗೆ ತೋಚಿದ್ದನ್ನೇ ಅರ್ಥ ಮಾಡಿಕೊಳ್ಳುತ್ತೆ.
ನನ್ನ ಬಗ್ಗೆ ಹೇಳಿಕೊಂಡಿದ್ದು ಇಲ್ಲಿ :-)
DS,
"ನನ್ನ ಆಕ್ಷೇಪ ಇದನ್ನು "ಕಥೆ" ಎಂದು ಕರೆದದ್ದಕ್ಕೆ.....ನನ್ನ ಮಾತುಗಳನ್ನೇನು ಒಪ್ಪಬೇಕಿಲ್ಲ...ತಳ್ಳಿ ಹಾಕಿದರೆ ನನಗೇನು ಬೇಜಾರಾಗಲ್ಲ :) "
ಕಥೆ ಅಂತ ಬರೆಯೋ ಮೊದಲು ಯೋಚನೆ ಬಂದದ್ದಂತು ನಿಜ. ಏನು ಅಂತ ಕರಿಯೋದರ ಬಗ್ಗೆ ತಲೆಕೆಡಿಸಿಕೊಂಡಿದ್ದೆ ನಾನು. ಚಿತ್ರಿಕೆ ಬಹುಶಃ ಸರಿ ಅನ್ಸುತ್ತೆ. ಆದ್ರೆ ಕಥೆ ಅನ್ನೊ ಹಾಗೆ ಇಲ್ಲ ಅಂತಾನೂ ಅನಿಸಿಲ್ಲ .ಏನೋ ಒಂದು. ಇನ್ನು ಮುಂದೆ ’ಲೇಬಲ್’ ಹಾಕೋ ಮೊದಲು ’ರೂವಾರಿ’ ಪದ ತಲೆಲಿ ಬರುತ್ತೆ . :) ತಳ್ಳಿ ಹಾಕುವಂತದ್ದೇನಿಲ್ಲ. ಸದ್ಯಕ್ಕೆ ’ಲೇಬಲ್’ ನೋಡಬೇಡಿ :) ಧನ್ಯವಾದಗಳು.
md,
ಮನಸ್ವಿನಿ ತಿಳಿಸಲು ಪ್ರಯತ್ನಿಸಿದ್ದಕ್ಕೆ ...
ಅಂದ್ರೆ ಪ್ರಯತ್ನ ವಿಫಲವಾಯ್ತಾ? ;)
ಧನ್ಯವಾದಗಳು.
ರುಚಿರುಚಿಯಾದ ಚಿತ್ರಾನ್ನ ಉಣಬಡಿಸಿದ್ದಕ್ಕೆ ಧನ್ಯವಾದ.
ಸಖತ್ತಾಗಿದೆ. ಇನ್ನಷ್ಟು ಚಿತ್ರ- ವಿಚಿತ್ರಗಳು ಬರುತಿರಲಿ.
ಥ್ಯಾಂಕ್ಯೂ
ಪೂರ್ಣ ವಿ-ರಾಮ,
ನನ್ನ ಬ್ಲಾಗಿಗೆ ಸ್ವಾಗತ.ಬರುತ್ತಿರಿ.
ಸ್ಪಂದನಕ್ಕೆ ಧನ್ಯವಾದಗಳು.
idondu huchchu samvaada
Nice One
Bareyiri manasina maathu Manasvini
Post a Comment