ಮನಸ ತುಂಬಾ ಹುಚ್ಚು ಕಾರ್ಮೋಡ
ಅದೋ ಸುರಿಯುತಿದೆ
ಮೊದಲು ಹನಿಯಾಗಿ
ಮತ್ತೆ ಜೋರಾಗಿ
ನೆನಪಿನ ಮಳೆ
ಮನವನ್ನು ನೆನೆಸುತ್ತ, ತಣಿಸುತ್ತ
ಹನಿವ ಹನಿಗಳೆಲ್ಲ ಕಣ್ಣ ಮುಂದೆ ಹನಿದು
ಕಾಲ ಗರ್ಭದಲ್ಲಿ ಮತ್ತೆ ಹುದುಗುತ್ತ
ಮಳೆ ನಿಲ್ಲುವುದು,ಮತ್ತೆ ಮೋಡ ಕವಿಯುವವರೆಗೆ
(ನೆನಪಿನ ಮಳೆ ಮನಸ್ಸನ್ನ ಸ್ವಲ್ಪ ತಣಿಸುತ್ತೆ, ಸ್ವಲ್ಪ ತೋಯಿಸುತ್ತೆ...ಏನಂತೀರ?)
Subscribe to:
Post Comments (Atom)
17 comments:
ಅದ್ಭುತ ವಾದ ಕಲ್ಪನೆ. ಮೊಡ ಮಳೆಯನ್ನು ನೆನಪಿಗೆ ಹೋಲಿಸುವ ಪಕ್ರಿಯೆಯೇ ಅಮೋಘ.
ನೆನಪಿನ ಮಳೆ ಮನಸ್ಸನ್ನ ಸ್ವಲ್ಪ ತಣಿಸುತ್ತೆ, ಸ್ವಲ್ಪ ತೋಯಿಸುತ್ತೆ - ಹೂಂ ಅಂತಿನಿ :ಹ
ಮತ್ತೆ ಮೋಡ ಕವಿಯುವವರೆಗೆ -ಆ ಸಾಲು ನನಗೆ ತುಂಬಾ ಇಷ್ಟವಾಯಿತು.
ತುಂಬಾ ತುಂಬಾ ಚೆನ್ನಾಗಿದೆ!
ಇಷ್ಟವಾಯಿತು.
ಭೂತ, ಸುಶ್ರುತ, ಪ್ರಮೋದ್
ಧನ್ಯವಾದಗಳು
ಇಲ್ಲ... ಇಲ್ಲ... ನೆನಪಿನ ಮಳೆ ಪೂರ್ತಿ ತೋಯಿಸುತ್ತೆ.... ಮನಸ್ಸನ್ನು ಬಿಸಿ ಮಾಡುತ್ತೆ...!
hmmm!!!! mODa,MaLe,nenapu kalpaneye ati madhura..
ಅನ್ವೇಷಿಗಳೆ,
ಛತ್ರಿ ಹಿಡಿದು ನಿಮ್ಮನ್ನು ಕಾಪಾಡಿಕೊಳ್ಳಿ.
ಮಹಾಂತೇಶ್,
ಹೌದು.:)
ಬಹಳ ಚಂದದ ಮತ್ತೊಂದು ಮುತ್ತಿನ ಹನಿ. ಪದಗಳ ಆರಿಸುವಿಕೆ, ಪೋಣಿಸುವಿಕೆ ದಿವ್ಯವಾಗಿದೆ.
ನನಗೆ ಹೆಚ್ಚು ಇಷ್ಟವಾದ ಪದಗಳು ಅಂದರೆ
ಮನವನ್ನು ನೆನೆಸುತ್ತ, ತಣಿಸುತ್ತ
ಹನಿವ ಹನಿಗಳೆಲ್ಲ ಕಣ್ಣ ಮುಂದೆ ಹನಿದು
ತವಿಶ್ರೀ ಸರ್,
ತುಂಬಾ ಧನ್ಯವಾದಗಳು.
ಅಬ್ಬ ಊರು ಬಿಟ್ಟು ಬಂದ ಮೇಲೆ ಈ ಕವನದ ಅರ್ಥ ಗೊತ್ತಾಯಿತು.... ಮನಸ್ವಿನಿ..
ಪೂರ್ತಿಯಾಗಿ ತೊಯ್ದುಬಿಟ್ಟೆ... ;(
ಅನ್ವೇಷಿಗಳೇ,
ನೆನಪಿನ ಮಳೆ ನಿಮ್ಮನ್ನ ತಣಿಸಲಿಲ್ವಾ? ಬರಿ ತೋಯಿಸಿತಾ?
ಹೌದು ಹೌದು ನೋಯಿಸಿತು.... ಮನಸ್ವಿನಿ
ಮನಸ ತುಂಬಾ ಹುಚ್ಚು ಕಾರ್ಮೋಡ!!!!
ಅನ್ವೇಷಿಗಳೇ,
ಇರಲಿ ಬಿಡಿ :)
manaswini, nimma blogannu Planet Kannadakke sErisi
http://planet.sampada.net/planet-kannada/
ಮನಸ್ವಿನಿ,
ಅದ್ಬುತ ಕಲ್ಪನೆ !
ಸೊಗಸಾದ ಸಾಲುಗಳು..
ಹೀಗೆ ಬ್ಲಾಗ್ ಲೋಕದಲ್ಲಿ ತಿರುಗಾಡುವಾಗ ನಿಮ್ಮ ಬ್ಲಾಗ್ ಸಿಗ್ತು..
ಶಿವ್,
ಧನ್ಯವಾದಗಳು.
Post a Comment